Close Menu
    Top News

    ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ₹451.40 ಕೋಟಿ ವ್ಯವಹಾರ, ₹1.91 ಕೋಟಿ ಲಾಭ, ಶೇ.15 ಡಿವಿಡೆಂಡ್ ಘೋಷಣೆ

    August 19, 2026

    ಗೋಕಾಕದ ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ರಜತ ಮಹೋತ್ಸವ ಸಂಭ್ರಮ

    August 19, 2026

    ಶ್ರೀ ಗುರುಶಕ್ತಿ ಸೌಹಾರ್ದ ಕೋ-ಆಪರೇಟಿವ್ 13.72 ಲಕ್ಷ ರೂ. ಲಾಭ, ಸದಸ್ಯರಿಗೆ ಶೇ.10 ಡಿವಿಡೆಂಡ್

    August 19, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ₹451.40 ಕೋಟಿ ವ್ಯವಹಾರ, ₹1.91 ಕೋಟಿ ಲಾಭ, ಶೇ.15 ಡಿವಿಡೆಂಡ್ ಘೋಷಣೆ
    News

    ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ₹451.40 ಕೋಟಿ ವ್ಯವಹಾರ, ₹1.91 ಕೋಟಿ ಲಾಭ, ಶೇ.15 ಡಿವಿಡೆಂಡ್ ಘೋಷಣೆ

    adminBy adminAugust 19, 2026

    ಸವಣೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಸಂಘವು ಪ್ರಸ್ತುತ ಸಾಲಿನಲ್ಲಿ ಬೃಹತ್ ₹451.40 ಕೋಟಿ ರೂ.ಗಳ ವ್ಯವಹಾರ ನಡೆಸಿದ್ದು, ₹1.91 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಸಂಘದ ಅರ್ಹ ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು. ಸಂಘದ ಎಲ್ಲಾ ಸದಸ್ಯರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಪೂರ್ಣ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಸಂಘದ ಮುಖಾಂತರ ನಡೆಯಲಿದೆ. ಸಂಘವು ಸತತವಾಗಿ 24ನೇ ಬಾರಿ ‘ಎ’ ತರಗತಿ ಆಡಿಟ್ ವರ್ಗೀಕರಣದೊಂದಿಗೆ ಶೇ.99.31 ಸಾಲ ಮರುಪಾವತಿ ಸಾಧನೆ ಮಾಡಿದೆ. ವರದಿ ವರ್ಷದಲ್ಲಿ 3,566 ಸದಸ್ಯರಿದ್ದು, ₹5.81 ಕೋಟಿ ಪಾಲು ಬಂಡವಾಳ ಮತ್ತು ₹45.98 ಕೋಟಿ ಠೇವಣಿ ಸಂಗ್ರಹವಾಗಿದೆ. ವರದಿ ವರ್ಷದಲ್ಲಿ ₹6 ಕೋಟಿ ಹೆಚ್ಚುವರಿ ಠೇವಣಿ ಸಂಗ್ರಹಿಸಲಾಗಿದ್ದು, ಸದಸ್ಯರಿಗೆ ₹74.64 ಕೋಟಿ ಸಾಲ ವಿತರಿಸಲಾಗಿದೆ. ಜಮಾಖರ್ಚು ₹63.49 ಕೋಟಿ ಹೊರಬಾಕಿ ಸಾಲ ಇರುತ್ತದೆ ಎಂದು ಅವರು ವಿವರ ನೀಡಿದರು. ಜಿಲ್ಲೆಯಲ್ಲೇ ಸತತ ಮೂರು ವರ್ಷಗಳಿಂದ ಮಾಸ್ ಸಂಸ್ಥೆಯ ಮೂಲಕ ಅತಿ ಹೆಚ್ಚು ಅಡಿಕೆ ಖರೀದಿಸಿ ನಮ್ಮ ಸಂಘದಲ್ಲೇ ಅಡಿಕೆ ವಹಿವಾಟು ನಡೆಸಲಾಗಿದೆ. 2025-26ನೇ ಸಾಲಿನಲ್ಲಿ ರೈತರ ಸಹಕಾರದೊಂದಿಗೆ 887.81 ಕ್ವಿಂಟಾಲ್ ಅಡಿಕೆ ಖರೀದಿಸಿ ₹4.33 ಕೋಟಿ ರೂ. ವ್ಯವಹಾರ ಮಾಡಲಾಗಿದೆ ಎಂದರು.


    ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ. ಮಾತನಾಡಿ, ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಮತ್ತು ತಂಡ ಅತ್ಯುತ್ತಮ ರೀತಿಯಲ್ಲಿ ಸಂಘದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಹವಾಮಾನ ಆಧಾರಿತ ಬೆಳೆವಿಮೆಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಇದರಿಂದ ರೈತರಿಗೆ ತುಂಬಾ ಪ್ರಯೋಜನ ದೊರೆತಿದೆ. ಸಂಘದ ಅಭಿವೃದ್ಧಿಯಲ್ಲಿ ಸದಾ ಸಹಕಾರ ನೀಡುತ್ತಿರುವ ಆಡಳಿತ ಮಂಡಳಿ, ಸದಸ್ಯರು ಮತ್ತು ಸಿಬ್ಬಂದಿ ವೃಂದದವರ ಸಹಕಾರಕ್ಕೆ ಅಭಾರಿ ಎಂದು ಹೇಳಿದರು.
    ಕಡಬ ತಾಲೂಕು ಕೃಷಿ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಸಂಘದ ಮುಕ್ತ ವಾತಾವರಣ, ಸೌಹಾರ್ದಯುತ ವಾತಾವರಣ ಮತ್ತು ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸವಣೂರು ಮತ್ತು ಕಾಣಿಯೂರು ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಿರಿಶಂಕರ ಸುಲಾಯ ಮಾತನಾಡಿ, ಪುಣ್ಚಪ್ಪಾಡಿಯ ನೇರೋಳ್ತಡ್ಕದಲ್ಲಿ ಸಂಘದ ಶಾಖೆಯು ಇದ್ದು ಅದನ್ನು ಪೂರ್ಣ ಪ್ರಮಾಣದ ಶಾಖೆಯಾಗಿಸುವಂತೆ ಸಲಹೆ ನೀಡಿದರು. ವಕೀಲರಾದ ಬೈತಡ್ಕ ಶೀನಪ್ಪ ಗೌಡರು ಮಾತನಾಡಿ, ಬೆಳಂದೂರು ಶಾಖಾ ಕಚೇರಿಯ ಗೋದಾಮನ್ನು ಉತ್ತಮವಾಗಿ ಮಾಡುವಂತೆ ಸಲಹೆ ನೀಡಿದರು. ಸವಣೂರು ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕ ಪದ್ಮಯ್ಯ ಗೌಡ ಪರಣೆ ಮಾತನಾಡಿದರು. ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಅರಿಯಡ್ಕ ಕೃಷ್ಣ ರೈ ಪುಣ್ಚಪ್ಪಾಡಿ, ಸವಣೂರು ಗ್ರಾ.ಪಂ. ಮಾಜಿ ಸದಸ್ಯ ರಫೀಕ್ ಎಂ.ಎ., ಪದ್ಮಯ್ಯ ಗೌಡ ಕರಂದ್ಲಾಜೆ, ತಿರುಮಲೇಶ್ವರ ಭಟ್ ಮೊದಲಾದವರು ಸಲಹೆ-ಸೂಚನೆಗಳನ್ನು ನೀಡಿದರು.


    ಸಭೆಯಲ್ಲಿ ಸಂಘದ ಮಾಜಿ ಉಪಾಧ್ಯಕ್ಷ ಯು.ಎಸ್. ವಾಸುದೇವ ಇಡ್ಯಾಡಿ, ನಿರ್ದೇಶಕ ಸುಬ್ಬಣ್ಣ ರೈ ಖಂಡಿಗ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ, ಸವಣೂರು ಮೆಸ್ಕಾಂ ಜೆಇ ರಾಜೇಶ್, ವೆಂಕಟ್ರಮಣ ಗೌಡ ಕಳುವಾಜೆ, ವೀರಮಂಗಲ ಪಿಎಂಶ್ರೀ ಶಾಲಾ ಮುಖ್ಯ ಶಿಕ್ಷಕ ತಾರಾನಾಥ ಸವಣೂರು, ಸವಣೂರು ಬೆನಸ ರಬ್ಬರ್ ಸೊಸೈಟಿ ಕಾಯದರ್ಶಿ ಅಚ್ಚುತ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಭಟ್ ಕುಕ್ಕುಜೆ, ಮಾಜಿ ಅಧ್ಯಕ್ಷ ಸುಪ್ರೀತ್ ರೈ ಖಂಡಿಗ, ಪ್ರೇಮಚಂದ್ರ ಮೆದು, ಗಂಗಾಧರ ಸುಣ್ಣಾಜೆ, ಜಿ.ಪಂ.ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ದೇವಪ್ಪ ಗೌಡ ಕನ್ನಡಕುಮೇರು, ಸಂಘದ ಕಾನೂನು ಸಲಹೆಗಾರರಾದ ಮಹೇಶ್ ಕೆ.ಸವಣೂರು, ಸೂರ್ಯನಾರಾಯಣ ಭಟ್, ಮಹಾಬಲ ಶೆಟ್ಟಿ ಕೊಮ್ಮಂಡ, ನ್ಯಾಯವಾದಿಗಳಾದ ಪ್ರಶಾಂತ್ ರೈ ಪುಣ್ಣಪ್ಪಾಡಿ, ಅವಿನಾಶ್ ಬೈತಡ್ಕ, ವೆಂಕಟೇಶ್ ಭಟ್ ಕೊಯಕ್ಕುಡೆ, ಸವಣೂರು ಗ್ರಾ.ಪಂ. ಮಾಜಿ ಸದಸ್ಯರಾದ ತೀರ್ಥರಾಮ್ ಕೆಡೆಂಜಿ, ಅಬ್ದುಲ್ ರಜಾಕ್ ಕೆನರಾ, ಚಂದ್ರಾವತಿ ಸುಣ್ಣಾಜೆ, ಸತೀಶ್ ಅಂಗಡಿಮೂಲೆ, ಸವಣೂರು ಬೊಳ್ಳಿ-ಬೊಲ್ಪು ತುಳುಕೂಟದ ಅಧ್ಯಕ್ಷ ಸತೀಶ್‌ ಬಲ್ಯಾಯ ಕನ್ನಡಕುಮೇರು, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಆಡಳಿತಾಧಿಕಾರಿ ವಸಂತ್ ರೈ ಕಾರ್ಕಳ, ಬೆಳಂದೂರು ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ವಿಠಲ ಗೌಡ ಅಗಳಿ, ತೇಜಾಕ್ಷಿ ಕೊಡಂಗೆ, ನಝೀರ್ ದೇವಸ್ಯ, ಮಾಜಿ ಉಪಾಧ್ಯಕ್ಷ ಹರೀಶ್ ಕೆರೆನಾರು, ಮಾಜಿ ಸದಸ್ಯರುಗಳಾದ ಸಂಪತ್ ಕುಮಾರ್ ರೈ ಪಾತಾಜೆ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ರೈ ಬರೆಪ್ಪಾಡಿ, ಭಾಸ್ಕರ್ ಗೌಡ ಕಳುವಾಜೆ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು, ಮಾಜಿ ಅಧ್ಯಕ್ಷ ಶಿವರಾಮ ಗೌಡ ಮೆದು, ಶ್ರೀಧ‌ರ್ ಸುಣ್ಣಾಜೆ, ಚಂದ್ರಶೇಖರ್ ಗೌಡ ಮೆದು, ಸತೀಶ್ ಶೆಟ್ಟಿ ಕಿನಾರ, ರಾಮಕೃಷ್ಣ ಪ್ರಭು, ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ, ತಾ.ಪಂ.ಮಾಜಿ ಸದಸ್ಯರಾದ ವಿಜಯ ಈಶ್ವರ ಗೌಡ ಕಾಯರ್ಗ, ಬೆಳಂದೂರು ಶಾಖೆಯ ಮಾಜಿ ವ್ಯವಸ್ಥಾಪಕರಾದ ಬೇಬಿ ಜೆ.ರೈ, ನಿವೃತ್ತ ಸಿಬ್ಬಂದಿ ಈಶ್ವರ ಗೌಡ ಕಾಯರ್ಗ, ಬೆಳ್ಳಿಯಪ್ಪ ಗೌಡ ಚೌಕಿಮಠ, ಸಂಘದ ಹಿರಿಯ ಸದಸ್ಯ ನಾರಾಯಣ – ಕನ್ನಡ ಬಸ್ತಿ, ನಿವೃತ್ತ ಶಿಕ್ಷಕ ಕುಶಾಲಪ್ಪ ಗೌಡ ಹಾಗೂ ಸಂಘದ ಸರಾಫರಾಗಿರುವ ಸವಣೂರು ಅನನ್ಯ ಜುವೆಲ್ಸ್ ಮಾಲಕ ಪದ್ಮನಾಭ ಆಚಾರ್ಯ, ಸವಣೂರು ಗ್ರಾ.ಪಂ. ಸಿಬ್ಬಂದಿಗಳು ಸಹಿತ ಸಾವಿರಾರು ಮಂದಿ ಸದಸ್ಯರು ಉಪಸ್ಥಿತರಿದ್ದರು
    ಸಭೆಯ ಪ್ರಾರಂಭದಲ್ಲಿ ಭಾರತ ಮಾತಾ ಮತ್ತು ಮೊಳಹಳ್ಳಿ ಶಿವರಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಇತ್ತೀಚೆಗೆ ನಿಧನ ಹೊಂದಿದ ಸಂಘದ ಮಾಜಿ ಅಧ್ಯಕ್ಷ ಕೆ.ಪಿ. ಗಂಗಾಧರ ರೈ ದೇವಶ್ಯ ಮತ್ತು 2025-26ನೇ ಸಾಲಿನಲ್ಲಿ ನಿಧನ ಹೊಂದಿದ ಸಂಘದ ಸದಸ್ಯರುಗಳಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

    ವಿಶೇಷ ಸನ್ಮಾನ, ಪುರಸ್ಕಾರ:
    ಸಂಸ್ಥೆಗೆ ಅತ್ಯಂತ ಹೆಚ್ಚು ಅಡಿಕೆ ಮಾರಾಟ ಮಾಡಿದ ತಿರುಮಲೇಶ್ವರ ಭಟ್ ಸವಣೂರು, ಅಡಿಯಡ್ಕ ಕೃಷ್ಣ ರೈ, ಜಯರಾಮ ರೈ ಪರನೀರು ಮತ್ತು 2023-24ನೇ ಸಾಲಿನಲ್ಲಿ ಕೃಷಿ ವಿಸ್ತರಣಾ ಸೇವೆಯ ಡಿಪ್ಲೊಮಾ ವಿಷಯದಲ್ಲಿ ಚಿನ್ನದ ಪದಕ ಪುರಸ್ಕೃತರಾದ ಬೆಳಂದೂರು ಶಾಖಾ ವ್ಯವಸ್ಥಾಪಕಿ ಲೇಖಲತಾ ಮೆದು ಹಾಗೂ ನಿವೃತ್ತ ಸಿಬ್ಬಂದಿ ಪಕೀರ ಅವರನ್ನು ಅವರನ್ನು ಸನ್ಮಾನಿಸಲಾಯಿತು. ಜತೆಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ 71 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
    ಸಂಘದ ನಿರ್ದೇಶಕರುಗಳಾದ ಉದಯ ರೈ ಮಾದೋಡಿ, ಚೆನ್ನಪ್ಪ ಗೌಡ ನೂಜಿ, ಅಶ್ವಿನ್ ಎಲ್. ಶೆಟ್ಟಿ, ಪ್ರಕಾಶ್ ರೈ ಸಾರಕರೆ, ಶಿವಪ್ರಸಾದ್ ಎಂ.ಎಸ್. ಕಳುವಾಜೆ, ಜ್ಞಾನೇಶ್ವರಿ, ಸೀತಾಲಕ್ಷ್ಮಿ, ಗಂಗಾಧರ ಪೆರಿಯಡ್ಕ, ತಿಮ್ಮಪ್ಪ ಬನಾರಿ, ಎಸ್‌ಸಿಡಿಸಿಸಿ ಬ್ಯಾಂಕ್ ಸೂಪರ್‌ವೈಸರ್ ವಸಂತ್‌ ಎಸ್‌ ವೇದಿಕೆಯಲ್ಲಿದ್ದರು. ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಸ್ವಾಗತಿಸಿ, ಉಪಾಧ್ಯಕ್ಷ ಚೇತನ್ ಕುಮಾರ್ ಕೊಡಿಂಬಾಡಿ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ. ವರದಿ ಮಂಡಿಸಿದರು. ಉಪ ಕಾರ್ಯನಿರ್ವಹಣಾಧಿಕಾರಿ ಜಲಜಾ ಎಚ್‌ ರೈ ವರದಿ ವಾಚಿಸಿದರು. ಬಾಲಕೃಷ್ಣ ಎಚ್. ಧನ್ಯವಾದ ಸಮರ್ಪಿಸಿದರು.

     

    Banking Cooperative Cooperative Department Cooperative Registrar Savanooru Prathamika Krushi Pattina Sahakara Sangha Tharanatha Kayarga
    Previous Articleಗೋಕಾಕದ ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ರಜತ ಮಹೋತ್ಸವ ಸಂಭ್ರಮ

    Related Posts

    ಗೋಕಾಕದ ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ರಜತ ಮಹೋತ್ಸವ ಸಂಭ್ರಮ

    August 19, 2026

    ಶ್ರೀ ಗುರುಶಕ್ತಿ ಸೌಹಾರ್ದ ಕೋ-ಆಪರೇಟಿವ್ 13.72 ಲಕ್ಷ ರೂ. ಲಾಭ, ಸದಸ್ಯರಿಗೆ ಶೇ.10 ಡಿವಿಡೆಂಡ್

    August 19, 2026

    ಬೆಂಗಳೂರಿನಲ್ಲಿ ಸಹಕಾರ ಭಾರತಿ–ಐಸಿಎಂಎಐ ಸಹಯೋಗದಲ್ಲಿ ಸಹಕಾರಿಗಳಿಗಾಗಿ ‘ಅಭ್ಯಾಸ ವರ್ಗ’

    August 18, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ₹451.40 ಕೋಟಿ ವ್ಯವಹಾರ, ₹1.91 ಕೋಟಿ ಲಾಭ, ಶೇ.15 ಡಿವಿಡೆಂಡ್ ಘೋಷಣೆ

    August 19, 2026

    ಗೋಕಾಕದ ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ರಜತ ಮಹೋತ್ಸವ ಸಂಭ್ರಮ

    August 19, 2026

    ಶ್ರೀ ಗುರುಶಕ್ತಿ ಸೌಹಾರ್ದ ಕೋ-ಆಪರೇಟಿವ್ 13.72 ಲಕ್ಷ ರೂ. ಲಾಭ, ಸದಸ್ಯರಿಗೆ ಶೇ.10 ಡಿವಿಡೆಂಡ್

    August 19, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.