ಮಂಗಳೂರು: ಭಾರತಿ ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರಿ ಲಿಮಿಟೆಡ್‌ನ ಅಧ್ಯಕ್ಷರಾಗಿ ಮೋಹನ್ ಕುಮಾರ್ ಕುಂಬ್ಳೇಕರ್, ಉಪಾಧ್ಯಕ್ಷರಾಗಿ ಗಣೇಶ್ ಕುಮಾರ್ ಪರಕಟ್ಟ ಆಯ್ಕೆಯಾಗಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹು-ರಾಜ್ಯ ಸಹಕಾರಿ ಸಂಘವಾಗಿರುವ ಭಾರತಿ ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರಿ ಸಂಘವು 18.03.2004ರಂದು ನೋಂದಾಯಿಸಲ್ಪಟ್ಟು ಗೋವಾ, ಕೇರಳ ಮತ್ತು ಕರ್ನಾಟಕದಲ್ಲಿ ಸದಸ್ಯತ್ವ ಹೊಂದಿದೆ. ಮೇ 17ರಂದು ನಿರ್ದೇಶಕರ ಮಂಡಳಿಗೆ ಚುನಾವಣೆ ನಡೆದಿದ್ದು, ಮೇ 25ರಂದು ಪದಾಧಿಕಾರಿಗಳಿಗೆ ಚುನಾವಣೆ ನಡೆಯಿತು. 2026-2031ರ ಸಾಲಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ -ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರು: ಮೋಹನ್ ಕುಮಾರ್ ಕುಂಬ್ಳೇಕರ್, ಉಪಾಧ್ಯಕ್ಷರು: ಗಣೇಶ್ ಕುಮಾರ್ ಪರಕಟ್ಟ, ನಿರ್ದೇಶಕರು: ಗಣೇಶ್ ಶೆಣೈ, ನರಸಿಂಹ ಕಾಮತ್, ಭಾರತಿ ಜಿ.ಭಟ್, ಸೋಮಪ್ಪ ನಾಯ್ಕ್ ಎ, ಕೈಲಾಸಮಣಿ ಯು, ಸತ್ಯನ್ ಪಿ, ನಾರಾಯಣನ್ ಪಿ.ವಿ, ಸ್ವಾತಿ ಎ ಪ್ರಭು, ಸುಭಾಷ್ ಎಸ್ ಹಳರಂಕರ್, ಸುರೇಶ್ ಬಿ ಬೋರ್ಕರ್, ಸಾಗರ್ ಎಂ ಭಟ್, ಸುರೇಶ್ ಡಿ ಡಿಚೋಲ್ಕರ್, ಜಾನು ಜಿ ಗೌಡೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆ.ಲಕ್ಷ್ಮಿ ಗೌರಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com




