ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮ
ಹಳೆಯಂಗಡಿ: ಪಂಜದಗುತ್ತು ಶಾಂತಾರಾಮ ಶೆಟ್ಟಿಯವರು ಶಿಕ್ಷಣ ಪ್ರೇಮಿಯಾಗಿದ್ದು, ಇದರ ಕಾರಣದಿಂದಲೇ ಗ್ರಾಮೀಣ ಪ್ರದೇಶದ ಪಂಜ ಎಂಬಲ್ಲಿ ಪ್ರೌಢಶಾಲೆ ಪ್ರಾರಂಭಗೊಳ್ಳಲು ಕಾರಣವಾಯಿತು. ತನ್ನ ಜೀವಿತದುದ್ದಕ್ಕೂ ಶಿಕ್ಷಣ ವಂಚಿತರ ಬಗ್ಗೆ ಚಿಂತನೆ ಮಾಡಿದ ಅಪರೂಪದ ವ್ಯಕ್ತಿತ್ವದ ಪಂಜದಗುತ್ತು ಶಾಂತಾರಾಮ ಶೆಟ್ಟಿ ಅವರನ್ನು ಸ್ಮರಣೆ ಮಾಡುವುದು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಆದ್ಯ ಕರ್ತವ್ಯವೆಂದು ಎನಿಸುತ್ತಾ ಸೊಸೈಟಿಯ ಪ್ರೇರಣಾಶಕ್ತಿಯಾಗಿದ್ದ ಇವರ ಹೆಸರಿನಲ್ಲಿ ಪಂಜದಗುತ್ತು ಶಾಂತಾರಾಮ ಶೆಟ್ಟಿ ಸರಕಾರಿ ಪ್ರೌಢಶಾಲೆ ಇದರ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲು ಸಂತೋಷವಾಗುತ್ತದೆ ಎಂದು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಚ್ ವಸಂತ್ ಬೆರ್ನಾರ್ಡ್ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಅವರು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಹಳೆಯಂಗಡಿ ಇದರ ವತಿಯಿಂದ ಪಂಜದಗುತ್ತು ಶಾಂತಾರಾಮ ಶೆಟ್ಟಿ ಸರಕಾರಿ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ದಿ. ಶಾಂತಾರಾಮ ಶೆಟ್ಟಿಯವರ ಮಗಳು ಸರಿತಾ ಶೆಟ್ಟಿ ಭಾಗವಹಿಸಿ, ತಂದೆ ಸ್ಥಾಪನೆ ಮಾಡಿದ ಈ ಸರಕಾರಿ ಶಾಲೆಯೊಂದಿಗೆ ಸದಾ ನಮ್ಮ ಕುಟುಂಬ ಇದೆ ಎಂದು ತಿಳಿಸಿ, ಶೇಕಡ 100 ಫಲಿತಾಂಶ ಗಳಿಸಿದ ಹಿನ್ನೆಲೆಯಲ್ಲಿ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದರು.

ಮೂಲ್ಕಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷೆ ಹಾಗೂ ಸಹ ಶಿಕ್ಷಕಿ ಶರ್ಲಿ ಸುಮಾಲಿನಿ ಶಾಂತಾರಾಮ ಶೆಟ್ಟಿ ಅವರ ಕಾರ್ಯವೈಖರಿಯ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯೋಪಾಧ್ಯಾಯರಾದ ಜೋಯಿಸಿ ಆಲ್ಫೋಸ್ ಸ್ವಾಗತಿಸಿದರು, ಪಂಚಾಯತ್ ನ ಮಾಜಿ ಸದಸ್ಯರಾದ ಸುಮಿತ್ರ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಯಾಗಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಭಾಕರ್, ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ವೇದಿಕೆಯಲ್ಲಿ ಇದ್ದರು.
ಇದೇ ಸಂದರ್ಭ ಸರಿತಾ ಶೆಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಭಾಕರ್ ಮತ್ತು 100 ಫಲಿತಾಂಶ ಅವಧಿಯ ಮುಖ್ಯೋಪಾಧ್ಯಾಯರಾದ ಶರ್ಲಿ ಸುಮಲಿನಿ ಅವರನ್ನು ಗೌರವಿಸಲಾಯಿತು. ಸಹಶಿಕ್ಷಕಿ ರಶ್ಮಿ ಧನ್ಯವಾದ ಅರ್ಪಿಸಿದ ಈ ಕಾರ್ಯಕ್ರಮವನ್ನು ಸಹ ಶಿಕ್ಷಕಿ ಮಂಜುಳಾ ಶೆಟ್ಟಿ ನಿರೂಪಿಸಿದರು.

