Close Menu
    Top News

    ನಾಳೆ ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಐದನೇ ವರ್ಷಾಚರಣೆ

    May 19, 2026

    ಎಲ್ಯಾರ್ ಪದವಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಿಂದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣೆ, ದಂತ ಚಿಕಿತ್ಸಾ ಶಿಬಿರ

    May 18, 2026

    ಪ್ರಣವ ಸಂಸ್ಥೆಯ ಗ್ರಾಹಕ ಸದಸ್ಯರಿಗೆ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮೂಲಕ ಹಣಕಾಸು ವ್ಯವಹಾರ

    May 18, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ನಾಳೆ ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಐದನೇ ವರ್ಷಾಚರಣೆ
    News

    ನಾಳೆ ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಐದನೇ ವರ್ಷಾಚರಣೆ

    adminBy adminMay 19, 2026

    ಹಳೆಯಂಗಡಿ: ಇಲ್ಲಿನ ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಐದನೇ ವರ್ಷದ ಸಂಭ್ರಮಾಚರಣೆಯು ಮೇ 20ರಂದು ಹಳೆಯಂಗಡಿಯ ಹರಿ ಓಂ ಕಟ್ಟಡದ ಆವರಣದಲ್ಲಿ ನಡೆಯಲಿದೆ.

    https://chat.whatsapp.com/FCEnlTkAKCC0MGPhXtX4i4
    ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ತನಕ ಕಟೀಲಿನ ದುರ್ಗಾ ಸಂಜೀವಿನಿ ಮಣಿಪಾಲ್‌ ಆಸ್ಪತ್ರೆ ಇವರಿಂದ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ. ಮಧ್ಯಾಹ್ನ 3ರಿಂದ ಸಂಜೆ 5ರ ತನಕ ಓಂಕಾರ್‌ ಕಲಾ ಸಂಗಮ ಪಡುಬಿದ್ರಿ ಮತ್ತು ದಿ ಡ್ಯಾನ್ಸ್‌ ಸ್ಟುಡಿಯೋ ಪಕ್ಷಿಕೆರೆ ಇವರಿಂದ ನೃತ್ಯ ಪ್ರದರ್ಶನ ಪ್ರಸ್ತುತಿಗೊಳ್ಳಲಿದೆ. ಸಂಜೆ 5ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರತಿಷ್ಠಿತ ನೃತ್ಯ ತಂಡ ಸಿಜ್ಲಿಂಗ್‌ ಗಯ್ಸ್‌ ಇವರಿಂದ ನೃತ್ಯ ಪ್ರದರ್ಶನವಿದೆ.
    ಸಭಾ ಕಾರ್ಯಕ್ರಮದಲ್ಲಿ ಮೂಲ್ಕಿ ಅರಮನೆಯ ಅರಸರು, ಶ್ರೀ ಕ್ಷೇತ್ರ ಬಪ್ಪನಾಡಿನ ಆನುವಂಶಿಕ ಮೊಕ್ತೇಸರರಾದ ಎಂ.ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ ಖಾದರ್‌ ಅವರು ದೀಪ ಪ್ರಜ್ವಲನೆ ಮಾಡಲಿದ್ದು, ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್‌ ಅವರು ಸಂಭ್ರಮದ ನುಡಿ ಆಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷರಾದ ಶಶಿಕುಮಾರ್‌ ರೈ ಬಾಲ್ಯೊಟ್ಟು ಅವರು ಗೋಲ್ಡ್‌ ಪ್ಯೂರಿಟಿ ಟೆಸ್ಟಿಂಗ್‌ ಮೆಷಿನ್‌ ಉದ್ಘಾಟಿಸಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ ಅವರು ಸ್ಥಾಪನಾ ವರ್ಷದ ಮೌಲ್ಯಯುತ ಸದಸ್ಯರನ್ನು ಗೌರವಿಸಲಿದ್ದಾರೆ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ ಅವರು ಸ್ಥಾಪನಾ ವರ್ಷದ ಸಿಬ್ಬಂದಿಗಳಿಗೆ ಗೌರವ ಸಮರ್ಪಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಬಿ.ಸೂರ್ಯಕುಮಾರ್‌, ಇಮ್ಯಾಕ್ಯುಲೇಟ್‌ ಕನ್ಶನ್ಷನ್‌ ಕಾರ್ನಾಡು ಮೂಲ್ಕಿ ಇದರ ಪಾಲನಾ ಸಮಿತಿಯ 22 ಆಯೋಗಗಳ ಸಂಯೋಜಕ ಪೌಲ್‌ ರಾಲ್ಫಿ ಡಿಕೋಸ್ಟ ಭಾಗವಹಿಸಲಿದ್ದಾರೆ. ಚಲನಚಿತ್ರ ನಟಿ ಅದ್ವಿತಿ ಶೆಟ್ಟಿ ಮತ್ತು ಯೂಟ್ಯೂಬ್‌ ಕಂಟೆಂಟ್‌ ಕ್ರಿಯೇಟರ್‌ ಶಿಲ್ಪ ಶೆಟ್ಟಿ ವಿಶೇಷ ಆಕರ್ಷಣೆಯಾಗಿ ಭಾಗವಹಿಸಲಿದ್ದಾರೆ.
    ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷರಾದ ಎಚ್‌.ವಸಂತ್‌ ಬೆರ್ನಾರ್ಡ್‌, ಉಪಾಧ್ಯಕ್ಷರಾದ ವಿಜಯಕುಮಾರ್‌ ಸನಿಲ್‌ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್‌ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಸ್ಥೆಯ ನಿರ್ದೇಶಕರಾದ ಉಮಾನಾಥ ಜೆ.ಶೆಟ್ಟಿಗಾರ್‌, ಧನಂಜಯ ಮಟ್ಟು, ಗೌತಮ್‌ ಜೈನ್‌, ಗಣೇಶ್‌ ಪ್ರಸಾದ್‌ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್‌, ಡಾ.ಶೆರಿಲ್‌ ಅಯೋನಾ ಐಮನ್‌, ರೇಖಾ ಶೆಟ್ಟಿ, ಹರೀಶ್‌ ಎನ್‌ ಪುತ್ರನ್‌, ನವೀನ್‌ ಸಾಲ್ಯಾನ್‌ ಪಂಜ, ಮೋಹನ್‌ದಾಸ್‌, ಅನಿಲ್‌ ಪೂಜಾರಿ ಸಸಿಹಿತ್ಲು, ರಜಿಯಾ ಬಾನು, ಕರಿಯ ಕಾಡಿಗ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    H.Vasanth Bernad KPCC Mithun Rai Mulki Seeme Arasa Dugganna Savantha Priyadarshini Co Operative Society Haleyangadi Shashikumar Rai balyottu
    Previous Articleಎಲ್ಯಾರ್ ಪದವಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಿಂದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣೆ, ದಂತ ಚಿಕಿತ್ಸಾ ಶಿಬಿರ

    Related Posts

    ಎಲ್ಯಾರ್ ಪದವಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಿಂದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣೆ, ದಂತ ಚಿಕಿತ್ಸಾ ಶಿಬಿರ

    May 18, 2026

    ಪ್ರಣವ ಸಂಸ್ಥೆಯ ಗ್ರಾಹಕ ಸದಸ್ಯರಿಗೆ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮೂಲಕ ಹಣಕಾಸು ವ್ಯವಹಾರ

    May 18, 2026

    ಸಮಾಜ ಸೇವಾ ಸಹಕಾರಿ ಸಂಘದ 18ನೇ ಶಾಖೆ ಬೋಳಿಯಾರ್ ನಲ್ಲಿ ಉದ್ಘಾಟನೆ

    May 18, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ನಾಳೆ ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಐದನೇ ವರ್ಷಾಚರಣೆ

    May 19, 2026

    ಎಲ್ಯಾರ್ ಪದವಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಿಂದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣೆ, ದಂತ ಚಿಕಿತ್ಸಾ ಶಿಬಿರ

    May 18, 2026

    ಪ್ರಣವ ಸಂಸ್ಥೆಯ ಗ್ರಾಹಕ ಸದಸ್ಯರಿಗೆ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮೂಲಕ ಹಣಕಾಸು ವ್ಯವಹಾರ

    May 18, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.