Close Menu
    Top News

    ಮೇ 17ರಂದು ಸಮಾಜ ಸೇವಾ ಸಹಕಾರಿ ಸಂಘದ 18ನೇ ಶಾಖೆ ಬೋಳಿಯಾರ್‌ನಲ್ಲಿ ಕಾರ್ಯಾರಂಭ

    May 14, 2026

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕರಂಗಲ್ಪಾಡಿ ಶಾಖೆಯ 11ನೇ ವಾರ್ಷಿಕೋತ್ಸವ

    May 14, 2026

    ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆಗೆ ಹೈಕೋರ್ಟ್ ತಡೆ

    May 13, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕರಂಗಲ್ಪಾಡಿ ಶಾಖೆಯ 11ನೇ ವಾರ್ಷಿಕೋತ್ಸವ
    News

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕರಂಗಲ್ಪಾಡಿ ಶಾಖೆಯ 11ನೇ ವಾರ್ಷಿಕೋತ್ಸವ

    adminBy adminMay 14, 2026

    ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕರಂಗಲ್ಪಾಡಿ ಶಾಖೆಯ 11ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಕರಂಗಲ್ಪಾಡಿ ಶಾಖೆಯಲ್ಲಿ ಜರುಗಿತು.

    https://chat.whatsapp.com/FCEnlTkAKCC0MGPhXtX4i4
    ಸಂಘದ ಸದಸ್ಯರುಗಳಾದ ಪುಟ್ಟಸ್ವಾಮಿ ಹೆಚ್, ಬಿ.ಸತೀಶ್ ಶೆಟ್ಟಿ, ಮಾರಪ್ಪ ಪೂಜಾರಿ, ಸುಮ ಪ್ರಸಾದ್ ಹಾಗೂ ಶಾಲಿನಿ ಉದ್ಘಾಟಿಸಿದರು. ಸಂಘದ ಸದಸ್ಯ ಮಾರಪ್ಪ ಪೂಜಾರಿ ಮಾತನಾಡಿ ಸಂಘದ ಬೆಳವಣಿಗೆಯನ್ನು ಶ್ಲಾಘಿಸಿ, ಆತ್ಮಶಕ್ತಿ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರ ಮಾಹಿತಿಯನ್ನು ಪ್ರತಿಕೆಗಳಲ್ಲಿ ಗಮನಿಸುತ್ತಿದ್ದೇನೆ. ಸಂಘವು ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಶುಭ ಹಾರೈಸಿದರು. ನಾಗೇಶ್ ಶೆಣೈ ಮಾತನಾಡಿ, ಸಂಘದ ಸಿಬ್ಬಂದಿಗಳು ನಗುಮೊಗದಿಂದ ಗ್ರಾಹಕರಿಗೆ ಗುಣಮಟ್ಟದ ಬ್ಯಾಂಕಿಂಗ್ ಸೇವೆನೀಡುತ್ತಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎನ್.ಪಿ ಪೂವಪ್ಪ ಮಾತನಾಡಿ, ಆತ್ಮಶಕ್ತಿ ಸಹಕಾರಿ ಸಂಘವು ಹೆಸರಿಗೆ ತಕ್ಕಂತೆ ಆತ್ಮಸಾಕ್ಷಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಸಂದರ್ಭದಲ್ಲಿಯೂ ಕೂಡ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು. ಸುಮನ್ ಕುಮಾರ್ ಕಂದಕ್, ಬಿ ಸತೀಶ್ ಕುಮಾರ್ ಹಾಗೂ ಅಶೋಕ್ ಮೊಯ್ಲಿ ಶುಭ ಹಾರೈಸಿದರು.
    ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಸಂಘವು ಬೆಳೆದು ಬಂದ ದಾರಿಯ ಬಗ್ಗೆ ಮಾತನಾಡಿ, ಮಹಿಳಾ ಸಬಲೀಕರಣದ ಉದ್ದೇಶದಿಂದ ಸಂಘದಲ್ಲಿ ಹೆಚ್ಚಿನ ಮಹಿಳಾ ಸಿಬ್ಬಂದಿಗಳಿಗೆ ಉದ್ಯೋಗಾವಕಾಶ ನೀಡಲಾಗಿದೆ. ಸಂಘವು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ, ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಜೊತೆಯಲ್ಲಿ ಸದಸ್ಯರ ಆರೋಗ್ಯದ ಕಾಳಜಿಯಿಂದ ನಿರಂತರವಾಗಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಿದೆ. ಕರಂಗಲ್ಪಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ 500 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ.10 ಹಾಗೂ 1000 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ.10.50 ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂಗೆ ಗರಿಷ್ಠ ಮೌಲ್ಯ ರೂ. 12,000ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ನೀಡಲಾಗುವುದು ಎಂದರು.
    ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ನಿರ್ದೇಶಕರಾದ ಜಿ.ಪರಮೇಶ್ವರ ಪೂಜಾರಿ, ಸೀತಾರಾಮ್ ಎನ್, ಗೋಪಾಲ್ ಎಮ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಮತ್ತಿತರರು ಉಪಸ್ಥಿತರಿದ್ದರು. ಕರಂಗಲ್ಪಾಡಿ ಶಾಖೆಯ ಸಿಬ್ಬಂದಿ ಪ್ರಮೀಳಾ ಸ್ವಾಗತಿಸಿ, ಲಾವಣ್ಯ ವಂದಿಸಿದರು. ಶಾಖಾಧಿಕಾರಿ ಅನ್ವಿತಾ ಕಾರ್ಯಕ್ರಮ ನಿರೂಪಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Atmashakthi Vividhoddesha Sahakari Sangha Banking Chittaranjan Bolar Co Operative ministry Cooperative Cooperative Registrar
    Previous Articleಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆಗೆ ಹೈಕೋರ್ಟ್ ತಡೆ
    Next Article ಮೇ 17ರಂದು ಸಮಾಜ ಸೇವಾ ಸಹಕಾರಿ ಸಂಘದ 18ನೇ ಶಾಖೆ ಬೋಳಿಯಾರ್‌ನಲ್ಲಿ ಕಾರ್ಯಾರಂಭ

    Related Posts

    ಮೇ 17ರಂದು ಸಮಾಜ ಸೇವಾ ಸಹಕಾರಿ ಸಂಘದ 18ನೇ ಶಾಖೆ ಬೋಳಿಯಾರ್‌ನಲ್ಲಿ ಕಾರ್ಯಾರಂಭ

    May 14, 2026

    ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆಗೆ ಹೈಕೋರ್ಟ್ ತಡೆ

    May 13, 2026

    ಆತ್ಮಶಕ್ತಿ ಸಹಕಾರ ಸಹಕಾರ ಸಂಘದ ಪ್ರಧಾನ ಕಚೇರಿಗೆ ಶಿವಗಿರಿ ಮಠದ ಶ್ರೀ ವಿಶುದ್ಧಾನಂದ ಸ್ವಾಮೀಜಿ ಭೇಟಿ

    May 12, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಮೇ 17ರಂದು ಸಮಾಜ ಸೇವಾ ಸಹಕಾರಿ ಸಂಘದ 18ನೇ ಶಾಖೆ ಬೋಳಿಯಾರ್‌ನಲ್ಲಿ ಕಾರ್ಯಾರಂಭ

    May 14, 2026

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕರಂಗಲ್ಪಾಡಿ ಶಾಖೆಯ 11ನೇ ವಾರ್ಷಿಕೋತ್ಸವ

    May 14, 2026

    ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆಗೆ ಹೈಕೋರ್ಟ್ ತಡೆ

    May 13, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.