ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆ ಜನವರಿ 25ರಂದು ನಿಗದಿಯಾಗಿದೆ.
https://chat.whatsapp.com/FCEnlTkAKCC0MGPhXtX4i4
ಒಟ್ಟು 12 ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಒಂದು ಸ್ಥಾನಕ್ಕೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ. ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಚುನಾವಣೆ ನಡೆಯಲಿದ್ದು ತ್ರಿವೇಣಿ ರಾವ್ ಚುನಾವಣಾಧಿಕಾರಿಯಾಗಿದ್ದಾರೆ.
2001ರಲ್ಲಿ ಸ್ಥಾಪನೆಯಾಗಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಸದ್ಯ ಬೆಳ್ಳಿಹಬ್ಬ ಸಂಭ್ರಮದಲ್ಲಿದೆ. ಇದುವರೆಗೆ ಎಸ್.ಆರ್ ಸತೀಶ್ಚಂದ್ರ ಅವರು ಸಂಸ್ಥೆಯ ಅಧ್ಯಕ್ಷರಾಗಿದ್ದು ಇದೇ ಮೊದಲ ಬಾರಿ ಇಲ್ಲಿ ಚುನಾವಣೆ ನಿಗದಿಯಾಗಿದೆ. ಒಟ್ಟು 19 ಮಂದಿ ಕಣದಲ್ಲಿದ್ದು, ಈ ಪೈಕಿ ಉಮೇಶ್ ಪ್ರಭು ಕುಂಟಿಹಿತ್ಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಎಸ್.ಆರ್ ಸತೀಶ್ಚಂದ್ರ, ಹರೀಶ್ ಬೋರ್ಕರ್, ರಾಜಗೋಪಾಲ ಬಾಳೆಗುಳಿ, ರವೀಶ ಪೊಸವಳಿಕೆ, ಬಿ.ವಸಂತಶಂಕರ್, ವೇದವ್ಯಾಸ ಕಟ್ಟೆ, ಸಂಜೀವ ನಾಯಕ್ ಸುಳ್ಯ, ಚಂದ್ರಶೇಖರ್ ಮುಂಡುಗಾರು, ದಯಾನಂದ ನಾಯಕ್ ಕುಂಟಿಕಾನ, ದೇವಕಿ ಎಚ್.ನಾಯಕ್, ರಂಜಿತಾ ಆರ್ ಪ್ರಭು ಗೋಳಿತ್ತಡಿ, ಜಯರಾಮ ಪಿ., ಪ್ರಕಾಶ್‌ಚಂದ್ರ ಪಿ., ಶ್ರೀಧರ್ ಪಿ., ಸುಬ್ರಹ್ಮಣ್ಯ ಕುಳೆದು, ರಾಧಾಕೃಷ್ಣ ನಾಯಕ್ ಸುಳ್ಳಿ, ಸುನೀಲ್ ಬೋರ್ಕರ್ ಮತ್ತು ಅರುಣ ಅವರು ಚುನಾವಣಾ ಕಣದಲ್ಲಿದ್ದಾರೆ.

