Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಎಂ.ಸಿ.ಸಿ. ಬ್ಯಾಂಕಿನ 21ನೇ ಶಾಖೆ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಉದ್ಘಾಟನೆ
    News

    ಎಂ.ಸಿ.ಸಿ. ಬ್ಯಾಂಕಿನ 21ನೇ ಶಾಖೆ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಉದ್ಘಾಟನೆ

    adminBy adminOctober 5, 2025

    ಉಡುಪಿ: ಎಂ.ಸಿ.ಸಿ. ಬ್ಯಾಂಕಿನ 21ನೇ ಶಾಖೆ ಮತ್ತು 13ನೇ ಎಟಿಎ0 ಅನ್ನು ಉಡುಪಿಯ ಕಲ್ಯಾಣಪುರ-ಸಂತೆಕಟ್ಟೆಯಲ್ಲಿ ಭಾನುವಾರ ಉದ್ಘಾಟಿಸಲಾಯಿತು. ನೂತನ ಶಾಖೆಯನ್ನು ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ಉದ್ಘಾಟಿಸಿದರು.

    https://chat.whatsapp.com/JVAtKKe2M19AFO3W5629ZS?mode=ems_copy_t

    ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್ ಧರ್ಮಗುರು ರೆ.ಡಾ.ರಾಕ್ ಡಿಸೋಜ ನೂತನ ಶಾಖೆಯನ್ನು ಆಶೀರ್ವಚಿಸಿದರು. ಉಡುಪಿ ಧರ್ಮಪ್ರಾಂತ್ಯದ ಪಿಆರ್ ಒ ಮತ್ತು ತೊಟ್ಟಂ ಚರ್ಚ್ ಧರ್ಮಗುರು ರೆ.ಫಾ.ಡೆನಿಸ್ ಡೇಸಾ ಎಟಿಎಂ ಅನ್ನು ಉದ್ಘಾಟಿಸಿದರು. ಕಲ್ಯಾಣಪುರ-ಸಂತೆಕಟ್ಟೆ ಕರಾವಳಿ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಅವರು ಎಟಿಎಂನಿ0ದ ಮೊದಲ ಹಣ ಹಿಂಪಡೆದರು. ಸೇಫ್ ರೂಮ್ ಅನ್ನು ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅತೀ ವಂದನೀಯ ಮೊ| ಫರ್ಡಿನಾಂಡ್ ಗೊನ್ಸಾಲ್ವಿಸ್ ಮತ್ತು ಇ-ಸ್ಟಾಂಪಿ0ಗ್ ಸೌಲಭ್ಯವನ್ನು ಸುಬ್ರಹ್ಮಣ್ಯ ನಗರದ ಸೇಂಟ್ ಪಾಲ್ ಚರ್ಚ್ ಸಭಾಪಾಲಕರಾದ ರೆವೆರೆಂಡ್ ಕಿಶೋರ್ ಕುಮಾರ್ ಉದ್ಘಾಟಿಸಿದರು.

    ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕರಾದ ಯಶಪಾಲ್ ಸುವರ್ಣ ಮತ್ತು ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊ| ಫರ್ಡಿನಾಂಡ್ ಗೊನ್ಸಾಲ್ವಿಸ್ ಮುಖ್ಯ ಅತಿಥಿಗಳಾಗಿದ್ದರು. ರೆ.ಡಾ. ರಾಕ್ ಡಿಸೋಜ, ಧರ್ಮಗುರು, ಮೌಂಟ್ ರೋಸರಿ ಚರ್ಚ್, ರೆವೆರೆಂಡ್ ಕಿಶೋರ್ ಕುಮಾರ್ – ಸಭಾಪಾಲಕರು ಸೇಂಟ್ ಪಾಲ್ ಚರ್ಚ್, ಸುಬ್ರಹ್ಮಣ್ಯ ನಗರ ಮತ್ತು ಅಧ್ಯಕ್ಷರು, ಉಡುಪಿ ವಲಯ ಪರಿಷತ್ತು (ಸಿಎಸ್ಐ, ಕೆಎಸ್ಡಿ), ರೆ.ಫಾ. ಡೆನಿಸ್ ಡೇಸಾ – ಪಿಆರ್ ಒ ಉಡುಪಿ ಧರ್ಮಪ್ರಾಂತ್ಯ, ಡಾ ವಿನ್ಸೆಂಟ್ ಆಳ್ವ ಪ್ರಾಂಶುಪಾಲರು, ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ, ಶ್ರೀಮತಿ ವೆರೊನಿಕಾ ಕರ್ನೆಲಿಯೊ – ಮಾಜಿ ಅಧ್ಯಕ್ಷರು, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್, ಜನಾಬ್ ಎಂ.ಎಸ್.ಖಾನ್ – ಮಾಜಿ ಅಧ್ಯಕ್ಷರು, ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಮತ್ತು ಉಮೇಶ್ ಶೆಟ್ಟಿ – ಅಧ್ಯಕ್ಷರು, ಕರಾವಳಿ ಕೋ ಆಪರೇಟಿವ್ ಸೊಸೈಟಿ, ಕಲ್ಯಾಣಪುರ ಸಂತೆಕಟ್ಟೆ ಇವರು ಗೌರವ ಅತಿಥಿಗಳಾಗಿದ್ದರು.

    ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಂಸಿಸಿ ಬ್ಯಾಂಕ್ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಹೋಲಿಸಬಹುದಾದ ಎಲ್ಲಾ ಆಧುನಿಕ ಬ್ಯಾಂಕಿ0ಗ್ ಸೇವೆಗಳನ್ನು ಕನಿಷ್ಠ ಸೇವಾ ಶುಲ್ಕಗಳೊಂದಿಗೆ ನೀಡುತ್ತಿದೆ. ಎಂಸಿಸಿ ಬ್ಯಾಂಕ್ ಶಾಖೆಗಳನ್ನು ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸಿದೆ ಮತ್ತು ಎನ್ಆರ್ ಐ ಬ್ಯಾಂಕಿ0ಗ್ ಸೇವೆಗಳನ್ನು ನೀಡುತ್ತಿರುವ ರಾಜ್ಯದ ಸಹಕಾರಿ ಬ್ಯಾಂಕ್ ಆಗಿದೆ ಎಂದು ತಿಳಿಸಿದರು.
    ಶಾಸಕ ಯಶಪಾಲ್ ಸುವರ್ಣ ಎಂಸಿಸಿ ಬ್ಯಾಂಕಿನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯನ್ನು ಅಭಿನಂದಿಸಿ, ಸಹಕಾರಿ ಬ್ಯಾಂಕಿಂಗ್ ಕುರಿತ ಬದ್ಧತೆಯನ್ನು ಶ್ಲಾಘಿಸಿದರು.
    ವಂದನಿಯ ಫಾ| ಡೆನಿಸ್ ಡೇಸಾ ಮಾತನಾಡಿ ಬ್ಯಾಂಕಿನ ಪ್ರಗತಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಸಾಂಸ್ಥಿಕ ಯಶಸ್ಸಿನ ಆಧಾರ ಸ್ತಂಭಗಳಾಗಿ ಸತ್ಯ, ನಂಬಿಕೆ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಒತ್ತಿ ಹೇಳಿದರು.
    ಸಮಾಜಕ್ಕೆ ಸಲ್ಲಿಸಿದ ಉದಾತ್ತ ಸೇವೆಯನ್ನು ಗುರುತಿಸಿ, ದಿ ಹ್ಯಾಪಿ ಹೋಮ್ ಫಾರ್ ದಿ ಏಜ್ಡ್ ಮತ್ತು ನೂರ್ ಉಲ್ ಫುರ್ಖಾನ್ ಸಂತೆಕಟ್ಟೆಯ ಸಂಸ್ಥೆಗಳ ಮುಖ್ಯಸ್ಥರಿಗೆ ಬ್ಯಾಂಕಿನ ದತ್ತಿ ನಿಧಿಯಿಂದ ತಲಾ ₹ 25,000/- ಚೆಕ್ ಅನ್ನು ನೀಡಲಾಯಿತು.
    ಈ ಸಂದರ್ಭದಲ್ಲಿ ಬ್ಯಾಂಕಿನ ಬುಲೆಟಿನ್ ಅನ್ನು ಬಿಡುಗಡೆ ಮಾಡಲಾಯಿತು. ಸಂಪಾದಕ ಡಾ.ಜೆರಾಲ್ಡ್ ಪಿಂಟೋ ಮತ್ತು ಉಪ ಸಂಪಾದಕರಾದ ಕು| ಶೆರಿ ಆಸ್ನಾ ಉಪಸ್ಥಿತರಿದ್ದರು.
    ಎಂ.ಸಿ.ಸಿ ಬ್ಯಾಂಕ್ ಜಿಗಿಬಿಗಿ ತಾರಾಂ ಸೀಸನ್ 2ರ ಅಂತಿಮ ಸ್ಪರ್ಧಿ ಮತ್ತು ಕೊಂಕಣಿ ನಾಟಕ ಸಭಾ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಲಿಯೋನಾ ಒಲಿವೇರಾ, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ನಿಯಂತ್ರಕರಾಗಿ ನೇಮಕಗೊಂಡಿರುವ ಡಾ| ಗೊಡ್ವಿನ್ ಡಿಸೋಜ ಮತ್ತು ಮಿಸ್ ಇಂಡಿಯಾ ಫ್ರೆಂಡ್ ಆಫ್ ಇಂಡಿಯಾ 2025 ನಿಶಾಲಿನ್ ಕುಂದರ್ ಅವರನ್ನು ಸನ್ಮಾನಿಸಲಾಯಿತು.
    ಅತ್ಯುತ್ತಮ ಫಲಿತಾಂಶ ಪಡೆದ ಸ್ಥಳೀಯ ಶಾಲಾ-ಕಾಲೇಜುಗಳನ್ನು ಸನ್ಮಾನಿಸಲಾಯಿತು. ಸಂತೆಕಟ್ಟೆ ಕ್ಷೇತ್ರದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೈಕ್ಷಣಿಕ ಸಾಧಕರನ್ನು ಸನ್ಮಾನಿಸಲಾಯಿತು. ನೂತನ ಶಾಖೆಯಲ್ಲಿ ಖಾತೆ ತೆರೆದ ಪ್ರಮುಖ ಗ್ರಾಹಕರನ್ನು ಸನ್ಮಾನಿಸಲಾಯಿತು.
    ನಿರ್ದೇಶಕ ಡಾ|.ಜೆರಾಲ್ಡ್ ಪಿಂಟೋ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಅಜಿತ್ ಪ್ರಿಸ್ಟಲ್ ಡಿಸೋಜ ವಂದಿಸಿದರು. ಸ್ಟೀವನ್ ಕೊಲಾಸೊ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂಡ್ರ್ಯೂ ಡಿಸೋಜ, ಡೇವಿಡ್ ಡಿಸೋಜ, ಮೆಲ್ವಿನ್ ವಾಸ್, ಜೆ.ಪಿ. ರೋಡ್ರಿಗಸ್, ಅನಿಲ್ ಪತ್ರಾವೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಎಲ್ರಾಯ್ ಕಿರಣ್ ಕ್ರಾಸ್ಟೊ, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್ ಮತ್ತು ಆಲ್ವಿನ್ ಮೊಂತೇರೊ, ಮಹಾಪ್ರಬಂಧಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.

    Anil Lobo MCC BANK Santekatte Branch
    Previous Articleಸಹಕಾರಿ ಸಂಘಗಳಿಂದ ಜನರ ನಾಡಿಮಿಡಿತ ಅರಿತು ಕೆಲಸ
    Next Article ಸಹಕಾರಿ ಸಂಘಗಳಿಂದ ಜನರ ಅಭಿವೃದ್ಧಿ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.