ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ
ಆಲಂಕಾರಿನಲ್ಲಿ ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ 17ನೇ ಶಾಖೆ ಉದ್ಟಾಟನೆ
ಕಡಬ: ತಾಲೂಕಿನ ಆಲಂಕಾರಿನಲ್ಲಿ ಭಾನುವಾರ ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನ 17ನೇ ಶಾಖೆಯನ್ನು ಉದ್ಘಾಟಿಸಲಾಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಉದ್ಘಾಟನಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಆಶೀರ್ವಚನ ನೀಡಿದ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು, ಗ್ರಾಮೀಣ ಭಾಗದ ಜನರ ಆರ್ಥಿಕ ಅವಶ್ಯಕತೆಗಳನ್ನು ಈಡೇರಿಸುವಲ್ಲಿ ಸಹಕಾರಿ ಸಂಘಗಳು ಅನನ್ಯ ಪಾತ್ರ ವಹಿಸುತ್ತವೆ. ಸಹಕಾರಿ ಸಂಸ್ಥೆಗಳು ಜನರ ನಾಡಿ ಮಿಡಿತ ಅರಿತು ಕೆಲಸ ಮಾಡುತ್ತವೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಂಸ್ಥೆಯಾಗಿ ಬೆಳೆಯಬೇಕಾದರೆ ಸಂಘದ ನೌಕರ ವೃಂದ ಜನಸಾಮಾನ್ಯರ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಕೆಲಸ ಮಾಡಬೇಕು. ಸಮಾಜ ಸೇವಾ ಸಹಕಾರಿ ಬ್ಯಾಂಕ್ ಈ ನಿಟ್ಟಿನಲ್ಲಿ ಕೆಲಸ ಮಾಡಿರುವುದರಿಂದ 17 ಶಾಖೆಗಳನ್ನು ತೆರೆಯುವಂತಾಗಿದೆ ಎಂದು ಹೇಳಿದರು.
ವ್ಯಾವಹಾರಿಕವಾಗಿ ಬೆಳೆಯುತ್ತಿರುವ ಆಲಂಕಾರಿನಲ್ಲಿ ಆರಂಭಗೊಂಡ ಸಮಾಜ ಸೇವಾ ಸಹಕಾರಿ ಸಂಸ್ಥೆಯು ಇಲ್ಲಿನ ಜನರ ಆರ್ಥಿಕ ಅಭಿವೃದ್ದಿಗೆ ಸಹಕಾರಿಯಾಗಿ ಬೆಳೆಯಬೇಕು. ಗ್ರಾಹಕರೇ ದೇವರು ಎಂದು ಭಾವನೆ ಮೂಡಿದಾಗ ಎಂತಹ ಕ್ಲಿಷ್ಟಕರ ಸಂಧರ್ಭದಲ್ಲೂ ಸವಾಲುಗಳನ್ನು ಎದುರಿಸಿ ಗೆಲ್ಲಬಹುದು. ಜನರು ಸಾಲ ಪಡೆದುಕೊಂಡರೆ ಸಾಲದು, ಸಕಾಲದಲ್ಲಿ ಮರುಪಾವತಿ ಮಾಡುವ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರ ಸಹಕಾರಿ ಸಂಸ್ಥೆಯು ಒಳ್ಳೆಯ ಭವಿಷ್ಯದೊಂದಿಗೆ ಮುನ್ನಡೆಯಬಹುದು ಎಂದರು.

ಸೇಫ್ ಲಾಕರ್ ಉದ್ಟಾಟಿಸಿ ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸಹಕಾರಿ ಸಂಘಗಳು ಗ್ರಾಹಕರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು. ಸಂಘದ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಹೊಂದುವ0ತಾಗಬೇಕು. ಜನರ ಯೋಗಕ್ಷೇಮ ಸಂಸ್ಥೆಯ ಧೇಯವಾಗಿರಬೇಕು ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ರಾಷ್ಟ್ರೀಯ ಚಿಂತನೆಯನ್ನು ರೂಡಿಸಿಕೊಂಡ ಡಾ| ಅಮ್ಮಂಬಳ ಬಾಳಪ್ಪರವರು ಆರಂಭಿಸಿದ ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘ ಸಹಕಾರಿ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಮಾತನಾಡಿ, ಸಮಾಜ ಸೇವಾ ಸಹಕಾರಿ ಸಂಘವು 1981ರಲ್ಲಿ ಸ್ವಾತಂತ್ರ ಯೋಧ ಸಮಾಜ ರತ್ನ ಡಾ.ಅಮ್ಮೆಂಬಳ ಬಾಳಪ್ಪ ಮತ್ತು ಸಹಕಾರಿ ಧುರೀಣ ಹೂವಯ್ಯರವರ ಸಾರಥ್ಯದಲ್ಲಿ ಸ್ಥಾಪನೆಗೊಂಡಿದೆ. ಸಂಸ್ಥೆಯು 131 ಸದಸ್ಯರಿಂದ 22620 ರೂ. ಪಾಲು ಬಂಡವಾಳದೊ0ದಿಗೆ ಪ್ರಾರಂಭವಾಗಿದ್ದು, 2024-25ನೇ ಸಾಲಿನಲ್ಲಿ 1159.91 ಕೋಟಿ ರೂ. ವ್ಯವಹಾರ ಮಾಡಿದ್ದು, 5.04 ಕೋಟಿ ರೂ. ಲಾಭ ಗಳಿಸಿದೆ. ನಮ್ಮ ಸಂಸ್ಥೆಯು ಜನಪರ ಕೆಲಸ ಕಾಯಗಳನ್ನು ಮಾಡಿಕೊಂಡು ಬರುತ್ತಿದ್ದು, ವಿದ್ಯಾರ್ಥಿವೇತನ, ಮೃತ ಪಟ್ಟ ಸದಸ್ಯರಿಗೆ 20ಸಾವಿರ ರೂ. ಧನಸಹಾಯ ನೀಡುತ್ತಿದೆ ಎಂದು ತಿಳಿಸಿದರು.
ಪುತ್ತೂರು ಲ್ಯಾಂಪ್ ಸೊಸ್ಯೆಟಿ ಮಾಜಿ ಅಧ್ಯಕ್ಷ ಪೂವಪ್ಪ ನಾಯ್ಕ ಎಸ್, ಎಂಡೋ ವಿರೋಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್, ಪುತ್ತೂರು ವಕೀಲರ ಸಂಘದ ಕೋಶಾಧಿಕಾರಿ ಮಹೇಶ್ ಕೆ ಸವಣೂರು, ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ, ಉಪಾಧ್ಯಕ್ಷ ರವಿ ಪೂಜಾರಿ, ಪಿಡಿಒ ಸುಜಾತಾ ವೈದ್ಯೆ ಡಾ.ಕೃತಿ ಶೆಟ್ಟಿ ಶುಭ ಹಾರೈಸಿದರು.
ಆಲಂಕಾರು ಶಾಖೆ ಪ್ರಾರಂಭಿಸಲು ದುಡಿದ ಗ್ರಾಮದ ಪ್ರಮುಖರಾದ ಶೀನಪ್ಪ ಕುಂಬಾರ ಕೊಂಡಾಡಿ ಹಾಗೂ ದಿವಾಕರ ಕುಂಬಾರ ಮತ್ತು ಕಟ್ಟಡ ಮಾಲೀಕ ಕುಶಾಲಪ್ಪ ಗೌಡ ಸುರುಳಿ, ಸಿವಿಲ್ ಇಂಜಿನಿಯರ್ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಅವರನ್ನು ಸನ್ಮಾನಿಸಲಾಯಿತು.
ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ದಿವಾಕರ ಮೂಲ್ಯ ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕರಾದ ಸತೀಶ್ ಸ್ವಾಗತಿಸಿದರು. ಕಿರಣ್ ಕುಮಾರ್ ವಂದಿಸಿದರು. ಮಾರಾಟ ವಿಭಾಗದ ಅಧಿಕಾರಿ ಉದಯ, ಅರುಣ್ ಕುಮಾರ್, ನವೀನ್ ಕುಲಾಲ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com

