ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ‘ಎ’ ಸ್ಥಾನ: ಸಂಘದ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್ ಮಾಹಿತಿ
ಮೂಡುಬಿದಿರೆ: ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘವು 2024-25ನೇ ಸಾಲಿನಲ್ಲಿ 474 ಕೋಟಿ ರೂ. ವ್ಯವಹಾರ ದಾಖಲಿಸಿದ್ದು, 3.26 ಕೋಟಿ ರೂ. ಲಾಭ ಗಳಿಸಿದ್ದು ಸತತ ಏಳನೇ ವರ್ಷವೂ ಶೇ.25 ಲಾಭಾಂಶ ಘೋಷಿಸಲಾಗುತ್ತಿದೆ. ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ‘ಎ’ ಸ್ಥಾನ ಕಾಯ್ದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್ ತಿಳಿಸಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಬೆಳುವಾಯಿ ಖಂಡಿಗ ಗ್ರೀನ್ಸ್ ಮಲ್ಟಿಪರ್ಪಸ್ ಹಾಲ್‌ನಲ್ಲಿ ಇತ್ತೀಚೆಗೆ ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ 2024-25ರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಳುವಾಯಿಯಲ್ಲಿ ಪ್ರಧಾನ ಕಚೇರಿ, ಕೆಸರುಗದ್ದೆ, ಮೂಡುಮಾರ್ನಾಡು, ದರೆಗುಡ್ಡೆ, ಪಡುಮಾರ್ನಾಡುಗಳಲ್ಲಿ ಶಾಖೆಗಳನ್ನು ಹೊಂದಿದೆ. 7,505 ಸದಸ್ಯ ಬಲ ಇದ್ದು, 108.29 ಕೋಟಿ ರೂ. ಠೇವಣಿ ಸಂಗ್ರಹ, 100.19 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಶೇ.98.65 ಸಾಲ ಮರುಪಾವತಿಯಾಗಿದೆ ಎಂದು ಭಾಸ್ಕರ ಎಸ್.ಕೋಟ್ಯಾನ್ ತಿಳಿಸಿದರು. ಮುಂದಿನ ಸಾಲಿನಲ್ಲಿ 120 ಕೋಟಿ ರೂ. ಠೇವಣಿ ಸಂಗ್ರಹ, 110 ಕೋಟಿ ರೂ. ಸಾಲ ವಿತರಣೆಯ ಗುರಿ ಹೊಂದಲಾಗಿದ್ದು 3.47 ಕೋಟಿ ರೂ. ಲಾಭ ಗಳಿಕೆಯ ಉದ್ದೇಶವಿದೆ ಎಂದರು.
ಕೃಷಿಕರಿಗೆ ಸಮ್ಮಾನ:
ಸಂಘದ ವ್ಯಾಪ್ತಿಯಲ್ಲಿ ಕೃಷಿಯಲ್ಲಿ ಸಾಧನೆ ತೋರುತ್ತಿರುವ ಕುಕ್ಕುಡೇಲು ಕೂಕ್ರ ನಾಯ್ಕ ನಡ್ಯೋಡಿಗುತ್ತು, ಅಜಿತ್ ಕುಮಾರ್ ಆಳ್ವ ದರೆಗುಡ್ಡೆ, ಕೊಟ್ರೊಟ್ಟು ಶೇಖರ ಪೂಜಾರಿ, ಕೆಲ್ಲಪುತ್ತಿಗೆ ಶೇಖರ ಭಂಡಾರಿ, ಅಮನೊಟ್ಟು ರತ್ನಾಕರ ಹೆಗ್ಡೆ, ಮೂಡುಮಾರ್ನಾಡು ಸುನೀತಾ ಅವರನ್ನು ಗೌರವಿಸಲಾಯಿತು.


ಸಂಘದ ಉಪಾಧ್ಯಕ್ಷೆ ಉಷಾ ಡಿ. ಪೈ, ನಿರ್ದೇಶಕರಾದ ದಾಮೋದರ ಬಂಗೇರ, ಶಂಕರ ಶೆಟ್ಟಿ, ಶ್ರೀನಾಥ್ ಸುವರ್ಣ, ವಾಸುದೇವ ಉಪಾಧ್ಯಾಯ, ಶಿವರಾಮ ಹೆಗ್ಡೆ, ಅಶೋಕ್ ಶೆಟ್ಟಿ, ರಾಮ್ ಪ್ರಸಾದ್, ರಮಣಿ ಆಳ್ವ, ಸುರೇಶ್ ನಾಯ್ಕ್, ಪಾಂಡು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಸಂಜಯ್ ಅತಿಕಾರಿ ವೇದಿಕೆಯಲ್ಲಿ ಹಾಜರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್ ಸ್ವಾಗತಿಸಿ, ಮಹಾಸಭೆಯ ನೋಟೀಸು, ವಾರ್ಷಿಕ ವರದಿ ಮಂಡಿಸಿದರು. ಲೆಕ್ಕಾಧಿಕಾರಿ ಪ್ರತಿಮಾ 2023-24ನೇ ಸಾಲಿನ ನಡಾವಳಿಕೆಗಳನ್ನು ಮಂಡಿಸಿದರು. ಶಾಖಾ ವ್ಯವಸ್ಥಾಪಕ ಉಮೇಶ್ ಕೋಟ್ಯಾನ್ ಲೆಕ್ಕಪರಿಶೋಧನಾ ವರದಿ, ಶಾಖಾ ವ್ಯವಸ್ಥಾಪಕ ಸಂತೋಷ್ ಶೆಟ್ಟಿ ಲಾಭ ವಿಂಗಡನೆಯ ವಿವರ ಮಂಡಿಸಿ ಬಜೆಟ್ ಮಂಡನೆ ಮಾಡಿದರು. ಸಿಎ ಬಾಲಕೃಷ್ಣ ಭಟ್ ಇವರನ್ನು 2025-26ನೇ ಸಾಲಿನ ಸನ್ನದು ಲೆಕ್ಕ ಪರಿಶೋಧಕರಾಗಿ ಆಯ್ಕೆ ಮಾಡಲಾಯಿತು. ಸನ್ಮಾನಿತ ರೈತ ಸದಸ್ಯರನ್ನು ಸಂತೋಷ್ ಶೆಟ್ಟಿ, ಜಗದೀಶ ನಾಯ್ಕ್, ದೀಕ್ಷಿತಾ ಪರಿಚಯಿಸಿದರು. ಸಂತೋಷ್ ಶೆಟ್ಟಿ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com










