ಮೈಸೂರು: ಇತ್ತೀಚೆಗೆ ನಡೆದ ಮೈಸೂರು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ 71ನೇ ವಾರ್ಷಿಕ ಮಹಾಸಭೆಯಲ್ಲಿ ಮೈಸೂರು ಜಯನಗರದ ಸಪ್ತರ್ಷಿ ಸೌಹಾರ್ದ ಸಹಕಾರಿ ಸಂಘಕ್ಕೆ ಉತ್ತಮ ಸೌಹಾರ್ದ ಸಹಕಾರಿ ಸಂಘ ಎಂದು ಗುರುತಿಸಿ ಗೌರವಿಸಲಾಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಸಪ್ತರ್ಷಿ ಸೌಹಾರ್ದ ಸಹಕಾರಿಯ ಪರವಾಗಿ ಉಪಾಧ್ಯಕ್ಷರಾದ ಎಸ್.ಶ್ಯಾಮಲಾ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಎ.ಪುರುಷೋತ್ತಮ ಇವರಿಗೆ ಮೈಸೂರು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷರಾದ ಎಂ.ಎಸ್.ಚಂದ್ರಶೇಖರ್, ಗೌರವ ಖಜಾಂಚಿ ಕೃಷ್ಣವೇಣಿ ಎಂ.ಜಿ, ನಿರ್ದೇಶಕರಾದ ಎನ್.ನಾಗಚಂದ್ರ, ಹೆಚ್.ವಿ.ಸುಬ್ಬಣ್ಣ, ಬಸವಣ್ಣ, ಲಕ್ಷ್ಮಿದೇವಿ, ಮುತ್ತುರಾಜ್, ಜಿ.ಕೀರ್ತಿಪ್ರಕಾಶ್ ಹಾಗೂ ಎಂ.ಹನುಮಂತಯ್ಯ ಹಾಜರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com




