ಮಂಗಳೂರು: ಇಲ್ಲಿನ ಜನತಾ ಬಜಾರ್ ಬಿಲ್ಡಿಂಗ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ತುಳುನಾಡು ವಿವಿಧೋದ್ದೇಶ ಸಹಕಾರ ಸಂಘದ 16ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಸಂಘದ ಅಧ್ಯಕ್ಷ ನಾಗಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘದಲ್ಲಿ 63 ಲಕ್ಷ ರೂ. ಪಾಲು ಬಂಡವಾಳವಿದ್ದು, 3.93 ಕೋಟಿ ರೂ. ಠೇವಣಿ ಇದೆ. 2.03 ಕೋಟಿ ರೂ. ಸಾಲ ವಿತರಿಸಲಾಗಿದೆ. 51 ಲಕ್ಷ ರೂ. ವಿವಿಧ ನಿಧಿಗಳಿವೆ. ವರದಿ ವರ್ಷದಲ್ಲಿ 15.38 ಲಕ್ಷ ರೂ. ಲಾಭ ದಾಖಲಿಸಿದ್ದು, ಶೇ.12 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ.
ಸಂಘದ ಉಪಾಧ್ಯಕ್ಷ ಸಂಜೀವ ಎಚ್., ನಿರ್ದೇಶಕರಾದ ಬಿ.ಪಿ ಹರೀಶ್ ಕುಮಾರ್, ಚಂಚಲಾ ತೇಜೋಮಯ, ಕೃತಿನ್ ಕುಮಾರ್, ಪದ್ಮನಾಭ ಕೋಟ್ಯಾನ್, ಪರಮೇಶ್ವರ ನಾಯ್ಕ್, ಆನಂದ ಪಾಂಗಾಳ, ಶಂಕರ ಕೃಷ್ಣ ಭಟ್, ಲೋಕನಾಥ ಪೂಜಾರಿ ಬಿ., ವಿಶ್ವನಾಥ ಅಮೀನ್ ಕಲ್ಲಾಪು, ಪ್ರತಿಭಾ ಶೆಟ್ಟಿ, ರಮಣಿ ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್ ಭಾಗವಹಿಸಿದ್ದರು.

