ಕಾರ್ಕಳ: ಬೆಳ್ಮಣ್‌ನ ಕುಂಭನಿಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮೊದಲನೇ ಮಹಾಸಭೆ ಇತ್ತೀಚೆಗೆ ಮುಲ್ಲಡ್ಕ ನಾನಿಲ್ತಾರಿನ ಕುಲಾಲ ಸಭಾಭವನದಲ್ಲಿ ಸೊಸೈಟಿಯ ಅಧ್ಯಕ್ಷ ಕುಶ ಆರ್.ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಬ್ರಿಜೇಶ್ ಕುಲಾಲ್ ವಾರ್ಷಿಕ ವರದಿ ಮಂಡಿಸಿದರು. ಮುಂದಿನ ಸಾಲಿನ ಅಂದಾಜು ಆಯವ್ಯಯ ಮಂಡಿಸಿ ಮಂಜೂರಾತಿ ಪಡೆಯಲಾಯಿತು. ಲೆಕ್ಕಪರಿಶೋಧಕರ ನೇಮಕಾತಿ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಸಂಘದ ಉಪಾಧ್ಯಕ್ಷ ಜಗನ್ನಾಥ ಮೂಲ್ಯ, ನಿರ್ದೇಶಕರಾದ ಜಯರಾಮ್ ಕುಲಾಲ್, ಬೊಗ್ಗು ಮೂಲ್ಯ ಬೇಲಾಡಿ, ಶಂಕರ್ ಮೂಲ್ಯ ಇನ್ನಾ, ಗೋಪಾಲ ಮೂಲ್ಯ, ಗಣೇಶ್ ಮೂಲ್ಯ, ರಾಜೇಶ್ ಕುಲಾಲ್, ದೀಪಕ್ ಕುಲಾಲ್, ಸುರೇಶ್ ಮೂಲ್ಯ, ನಂದಳಿಕೆ ಸುಗಂಧಿ ಮೂಲ್ಯ ಉಪಸ್ಥಿತರಿದ್ದರು.
ನಿರ್ದೇಶಕ ರಮಾನಂದ ಮೂಲ್ಯ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬ್ರಿಜೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಪ್ರತಿಮಾ ಶ್ರೀಧರ್ ವಂದಿಸಿದರು. ಸುಶ್ಮಿತಾ ಹಾಗೂ ಆಶಾ ವರದರಾಜ್ ಸಹಕರಿಸಿದರು.

