Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ 3.27 ಕೋಟಿ ರೂ. ಲಾಭ
    News

    ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ 3.27 ಕೋಟಿ ರೂ. ಲಾಭ

    adminBy adminAugust 26, 2025

    ನಿವ್ವಳ ಲಾಭಾಂಶ ಗಳಿಕೆಯಲ್ಲಿ ಉನ್ನತ ಸಾಧನೆ, ಸದಸ್ಯರಿಗೆ ಶೇ.11 ಡಿವಿಡೆಂಡ್ : ಅಧ್ಯಕ್ಷ ಜನಾರ್ದನ ಭಟ್‌ ಅಮೈ ಘೋಷಣೆ

    ಬಂಟ್ವಾಳ: ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘವು 327,05,95,558.63 ರೂ. ವ್ಯವಹಾರ ನಡೆಸಿದ್ದು 2024-25ನೇ ವಾರ್ಷಿಕ ಸಾಲಿನಲ್ಲಿ 3,27,40,185.70 ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.11 ಡಿವಿಡೆಂಡ್ ನೀಡಲಾಗುವುದು. ನಿವ್ವಳ ಲಾಭಾಂಶ ಗಳಿಕೆಯಲ್ಲಿ ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘವು ತಾಲೂಕಿನಲ್ಲೇ ಪ್ರಥಮ ಸ್ಥಾನ ಪಡೆದಿದೆ ಎಂದು ಸಂಘದ ಅಧ್ಯಕ್ಷ ಜನಾರ್ದನ ಭಟ್ ಅಮೈ ಹೇಳಿದ್ದಾರೆ.

    https://chat.whatsapp.com/EbVKVnWB6rlHT1mWtsgbch
    ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿಯ ಶ್ರೀದೇವಿ ಭವನದಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಅವರು ಈ ವಿಷಯ ತಿಳಿಸಿದರು. ವರದಿ ವರ್ಷಾಂತ್ಯಕ್ಕೆ ಸಂಘವು 5,672 ಸದಸ್ಯರಿಂದ ರೂ.5,62,55,500 ಪಾಲು ಬಂಡವಾಳ, ರೂ.62,93,49,978.21 ವಿವಿಧ ರೂಪದ ಠೇವಣಾತಿಗಳನ್ನು ಹೊಂದಿದೆ. ಸದಸ್ಯರಿಗೆ ವಿವಿಧ ರೀತಿಯ 61,02,59,130 ರೂ. ಸಾಲ ನೀಡಲಾಗಿದೆ. ಸಾಲ ವಸೂಲಾತಿಯಲ್ಲಿ ಶೇ.98.51ರಷ್ಟು ಪ್ರಗತಿ ಸಾಧಿಸಿದೆ. ಆಡಿಟ್ ವಗೀಕರಣದಲ್ಲಿ ಸಂಘವು ‘ಎ’ ಶ್ರೇಣಿ ಪಡೆದುಕೊಂಡಿದೆ. ಸಂಘದ ಬೆಳವಣಿಗೆಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸತತವಾಗಿ ಪ್ರೋತ್ಸಾಹ ಪ್ರಶಸ್ತಿ ಪಡೆಯುತ್ತಾ ಬಂದಿದೆ ಎಂದು ಮಾಹಿತಿ ನೀಡಿದರು.
    ಸಂಘದ ಹಿರಿಯ ಸದಸ್ಯರಾದ ವಿಘ್ನೇಶ್ವರ ವರ್ಮುಡಿ, ಬಾಬು ಗೌಡ ಗುರ್ಮೆ, ಜಯಂತ ಪ್ರಭು ಆಜೇರು ಹಾಗೂ ಸಂಘದಲ್ಲಿ 34 ವರ್ಷಗಳಿಂದ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗಂಗಾಧರ ನಾಯಕ್ ಅವರನ್ನು ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.


    ಸಂಘದ ಸದಸ್ಯರಾದ ಪುರುಷೋತ್ತಮ ಪೂಜಾರಿ ಕೊಳಂಬೆ, ದಯಾನಂದ ಸರವು, ಕಲಾವತಿ ಕೇಪು, ವೆಂಕಪ್ಪ ಗೌಡ ಬಡೆಕೋಡಿ, ಗೀತಾ ಕುಕ್ಕೆಬೆಟ್ಟು, ನೀಲಮ್ಮ ವಳಕಟ್ಟೆ, ಜಯಾನಂದ ಉಳಯ, ಕಮಲ ಕಲ್ಲಂಗಳ, ದೇಜ ಬೆಲ್ಚಾಡ ನೀರ್ಕಜೆ, ಕುಶಾಲಪ್ಪ ದಡ್ಡಲಡ್ಕ, ಲಲಿತಾ ದಲ್ಕಾಜೆ, ತೇಜಸ್ ದೇವುಮೂಲೆ, ಸತೀಶ್ ಮೈರ, ಬಾಬು ಗೌಡ ಅಗ್ರಾಳ ಇವರಿಗೆ ಚಿಕಿತ್ಸಾ ವೆಚ್ಚಕ್ಕಾಗಿ ಹಾಗೂ ಅಶಕ್ತ ವೃದ್ಧರಾದ ಕಮಲಾಕ್ಷಿ ದೇವಿನಗರ, ಜಯಲಕ್ಷ್ಮೀ ಪದವು, ಸುಮತಿ ಪಟಿಕಲ್ಲುರವರಿಗೆ ಸಹಾಯಧನದ ಚೆಕ್‌ ವಿತರಿಸಲಾಯಿತು.
    ಸಂಘದ ಸದಸ್ಯರಾದ ದೇವಿಪ್ರಸಾದ್ ಕೆ, ಜಯಶ್ಯಾಂ ನೀರ್ಕಜೆ, ಶ್ರೀಕೃಷ್ಣ ಪ್ರಸಾದ್, ಶಶಿಧರ ಶಾಸ್ತ್ರಿ, ಉದಯ ಕುಮಾ‌ರ್ ಡಿ, ಎಸ್.ಆರ್ ರಂಗಮೂರ್ತಿ, ವಿಘ್ನೇಶ್ವರ ವರ್ಮುಡಿ, ರಾಮ ಭಟ್, ವಸಂತ ನಾಯಕ್, ರವಿಕೃಷ್ಣ, ಉದಯ ಶಂಕರ್ ಮುಂತಾದವರು ವಿವಿಧ ಸಲಹೆಗಳನ್ನು ನೀಡಿದರು. ನಿರ್ದೇಶಕರಾದ ಬಾಲಚಂದ್ರ ಕೆ, ತಾರಾನಾಥ ಆಳ್ವ, ಜಯರಾಮ ಕಾನ, ಚಂದಪ್ಪ ನಾಯ್ಕ, ವಿಘ್ನೇಶ್ವರ ಭಟ್, ಕಿಶೋರ್ ಕುಮಾರ್, ದಯಾನಂದ ಬಿ, ಪ್ರವೀಣ ಪ್ರಭು, ರಾಧಾಕೃಷ್ಣ ಪಿ, ಶ್ರೀಲತಾ ಬಿ, ಹರಿಣಾಕ್ಷಿ ಪಿ, ಸಂಘದ ಲೆಕ್ಕಿಗ ಪದ್ಮನಾಭ ಗೌಡ, ಅಡ್ಯನಡ್ಕ ಶಾಖಾ ವ್ಯವಸ್ಥಾಪಕ ವೀರಪ್ಪ ಮೂಲ್ಯ, ತೋರಣಕಟ್ಟೆ ಶಾಖಾ ವ್ಯವಸ್ಥಾಪಕ ಶಂಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸಂಘದ ಅಧ್ಯಕ್ಷ ಜನಾರ್ದನ ಭಟ್ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಪೂಜಾರಿ ವಾರ್ಷಿಕ ವರದಿ, ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ಸಿಬ್ಬಂದಿಗಳಾದ ಕವಿತಾ ಸುಬ್ಬನಾಯ್ಕ, ನಮಿತಾ ಸನ್ಮಾನಿತರ ಪಟ್ಟಿ ಪರಿಚಯಿಸಿದರು. ಅಡ್ಯನಡ್ಕ ಶಾಖಾ ವ್ಯವಸ್ಥಾಪಕ ವೀರಪ್ಪ ಮೂಲ್ಯ ಸಹಾಯಧನ ಪಡೆದವರ ಪಟ್ಟಿ ಓದಿದರು. ಉಪಾಧ್ಯಕ್ಷ ಪ್ರೀತಂ ಪೂಂಜ ಅಗ್ರಾಳ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು. ನಿಧನರಾದ ಸದಸ್ಯರಿಗೆ, ರೈತರಿಗೆ, ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

    ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಸದಸ್ಯರ ನಿರಂತರ ಸದಸ್ಯರ ಸಹಕಾರ, ಪ್ರೋತ್ಸಾಹದಿಂದ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಘವು ಅಭಿವೃದ್ಧಿಯ ಕಡೆಗೆ ಸಾಗುತ್ತಿದೆ. ಗರಿಷ್ಠ ಲಾಭಾಂಶ ಪಡೆದುಕೊಂಡು ಬಂಟ್ವಾಳ ತಾಲೂಕಿನಲ್ಲಿಯೇ ಸುಭದ್ರ ಸಂಘವಾಗಿ ಹೆಸರು ಪಡೆದಿದೆ. ಸಂಘದ ಅಭಿವೃದ್ಧಿಯಲ್ಲಿ ಸಹಕರಿಸಿದವರಿಗೆಲ್ಲರಿಗೂ ಕೃತಜ್ಞತೆಗಳು. ಮುಂದಿನ ದಿನಗಳಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣ ಹಾಗೂ ಸಂಘದ ಎಲ್ಲಾ ರೀತಿಯ ಬೆಳವಣಿಗೆಯಲ್ಲಿ ಸದಸ್ಯರು ಸೂಕ್ತ ಸಲಹೆ, ಸೂಚನೆಗಳನ್ನು ನೀಡಿ ನಮ್ಮೊಂದಿಗೆ ಕೈ ಜೋಡಿಸಿದರೆ ಮತ್ತಷ್ಟು ಪ್ರಗತಿಗೆ ದಾರಿಯಾಗಲಿದೆ.

    ಜನಾರ್ದನ ಭಟ್ ಅಮೈ
    ಅಧ್ಯಕ್ಷರು, ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘ

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Co Operative ministry Cooperative Department Janardana Bhat Amai Punacha Prathamika Vyavasaya Seva Sahakara Sangha Punacha Shree Mahishamardini Temple Vighneshwara Varmudi
    Previous Articleಸಫಲ ಸೌಹಾರ್ದ ಸಹಕಾರಿ ಸಂಘಕ್ಕೆ 82.85 ಲಕ್ಷ ರೂ. ನಿವ್ವಳ ಲಾಭ
    Next Article ಸುಮಂಗಲಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 1.65 ಕೋಟಿ ರೂ. ಲಾಭ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.