ಕಾರವಾರ: ದಿವಾಳಿ ಸ್ಥಿತಿಯಲ್ಲಿರುವ ಕಾರವಾರ ಅರ್ಬನ್ ಸಹಕಾರ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಹೇಳಿದೆ. ಆರ್‌ಬಿಐನ ಈ ಕ್ರಮದಿಂದ ಇಂದಿನಿಂದ ಜಾರಿಗೆ ಬರುವಂತೆ ಬ್ಯಾಂಕಿಂಗ್ ವ್ಯವಹಾರವನ್ನು ಮುಕ್ತಾಯಗೊಳಿಸಲಾಗಿದೆ.
https://chat.whatsapp.com/EbVKVnWB6rlHT1mWtsgbch
ಕಾರವಾರ ಅರ್ಬನ್ ಸಹಕಾರ ಬ್ಯಾಂಕ್ ಅನ್ನು ಬಂದ್ ಮಾಡಲು ಮತ್ತು ಬ್ಯಾಂಕ್‌ಗೆ ಲಿಕ್ವಿಡೇಟರ್ (ಒಂದು ಕಂಪನಿಯ ದಿವಾಳಿತನ ಅಥವಾ ಮುಚ್ಚುವಿಕೆ ಪ್ರಕ್ರಿಯೆಯಲ್ಲಿ ತೊಡಗಿರುವ ವ್ಯಕ್ತಿ ಅಥವಾ ಸಂಸ್ಥೆ) ನೇಮಿಸಲು ಆದೇಶ ನೀಡುವಂತೆ ಕರ್ನಾಟಕ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ಕೋರಲಾಗಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ದಿವಾಳಿಯಾದ ಮೇಲೆ ಪ್ರತಿಯೊಬ್ಬ ಠೇವಣಿದಾರರು, ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ ರೂ. 5 ಲಕ್ಷದವರೆಗೆ ಠೇವಣಿ ವಿಮೆ ಹಣ ಪಡೆಯಲು ಅರ್ಹರಾಗಿರುತ್ತಾರೆ. ಬ್ಯಾಂಕ್ ಸಲ್ಲಿಸಿದ ಮಾಹಿತಿಯ ಪ್ರಕಾರ ಶೇ.92.9ರಷ್ಟು ಠೇವಣಿದಾರರು ಡಿಐಸಿಜಿಸಿಯಿಂದ ಸಂಪೂರ್ಣ ಠೇವಣಿ ಹಣ ಪಡೆಯಲು ಅರ್ಹರಾಗಿದ್ದಾರೆ ಎಂದು ಆರ್‌ಬಿಐ ತಿಳಿಸಿದೆ.
ಡಿಐಸಿಜಿಸಿ ಈಗಾಗಲೇ ಒಟ್ಟು ವಿಮೆ ಠೇವಣಿಗಳಲ್ಲಿ ರೂ. 37.79 ಕೋಟಿ ಪಾವತಿಸಿರುವ ವಿವರ ನೀಡಿರುವ ಆರ್‌ಬಿಐ, ಈ ಸಹಕಾರ ಬ್ಯಾಂಕ್ ಸಾಕಷ್ಟು ಬಂಡವಾಳ, ಗಳಿಕೆಯ ನಿರೀಕ್ಷೆಯೂ ಹೊಂದಿಲ್ಲ. ಅದರ ಪ್ರಸ್ತುತ ಹಣಕಾಸಿನ ಸ್ಥಿತಿಯೊಂದಿಗೆ ಬ್ಯಾಂಕ್ ತನ್ನ ಪ್ರಸ್ತುತ ಠೇವಣಿದಾರರಿಗೆ ಸಂಪೂರ್ಣ ಹಣ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.

