Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ನಾಳೆ ಒಡಿಯೂರು ಸಂಸ್ಥಾನದಲ್ಲಿ ಬೃಹತ್‌ ವೈದ್ಯಕೀಯ ಸೇವಾ ಶಿಬಿರ
    News

    ನಾಳೆ ಒಡಿಯೂರು ಸಂಸ್ಥಾನದಲ್ಲಿ ಬೃಹತ್‌ ವೈದ್ಯಕೀಯ ಸೇವಾ ಶಿಬಿರ

    adminBy adminJuly 12, 2025

    ಮಂಗಳೂರು: ಪರಮಪೂಜ್ಯ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ -ಸೇವಾ ಸಂಭ್ರಮ ಗ್ರಾಮೋತ್ಸವ 2025 ಸಮಿತಿ ಆಶ್ರಯದಲ್ಲಿ, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಎ.ಬಿ.ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯ ದೇರಳಕಟ್ಟೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಒನ್‌ಸೈಟ್ ಎಸ್ಸಿಲಾರ್‌ಲಕೋಟಿಕ್ ಫೌಂಡೇಶನ್ ಬೆಂಗಳೂರು, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು, ಜಿಲ್ಲಾ ಆಯುಷ್ ಇಲಾಖೆ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ವಿಭಾಗ ಪ್ರಾಥಮಿಕ ಆರೋಗ್ಯ ಕೇಂದ್ರ ಕನ್ಯಾನ ಇವುಗಳ ಜಂಟಿ ಸಹಯೋಗದಲ್ಲಿ ಒಡಿಯೂರು ಸಂಸ್ಥಾನದ ರಾಜಾಂಗಣದಲ್ಲಿ ಜುಲೈ 13ರ ಭಾನುವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ತನಕ ಬೃಹತ್ ವೈದ್ಯಕೀಯ ಸೇವಾ ಶಿಬಿರ ಆಯೋಜಿಸಲಾಗಿದೆ.

    https://chat.whatsapp.com/EbVKVnWB6rlHT1mWtsgbch
    ಶಿಬಿರದಲ್ಲಿ ಬೃಹತ್ ಹೃದಯ ತಪಾಸಣೆ, ಶಸ್ತ್ರಚಿಕಿತ್ಸಾ ತಪಾಸಣೆ, ಎಲುಬು ತಪಾಸಣೆ, ದಂತಚಿಕಿತ್ಸೆ, ಸ್ತ್ರೀರೋಗ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ, ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ, ಉಚಿತ ಕನ್ನಡಕ ವಿತರಣೆ, ಬೃಹತ್ ರಕ್ತದಾನ ಶಿಬಿರ, ಆಯುಷ್ ಅರೋಗ್ಯ ತಪಾಸಣೆ ಮತ್ತು ಚಿಕಿತ್ಸೆ, ರಕ್ತದೊತ್ತಡ-ಮಧುಮೇಹ ತಪಾಸಣೆ ನಡೆಯಲಿದೆ.


    ಒಡಿಯೂರು ಶ್ರೀ ಗುರುದೇವಾನಂದ ಮಹಾಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಪ್ರಜ್ವಲನ ಮಾಡಿ ಆಶೀರ್ವಚನ ನೀಡಲಿದ್ದಾರೆ. ಪರಮಪೂಜ್ಯ ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಉಪಸ್ಥಿತರಿರಲಿದ್ದಾರೆ. ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ನಾಡೋಜ ಡಾ.ಕೃಷ್ಣಪ್ರಸಾದ್ ಕೂಡ್ಲು, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗ ಮುಖ್ಯಸ್ಥ ಡಾ.ಶರತ್ ಕುಮಾರ್ ರಾವ್ ಜೆ., ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ತೀವ್ರ ನಿಗಾ ಘಟಕದ ವೈದ್ಯ ಡಾ.ನರೇಶ್ ರೈ ಕೆ.ಜಿ, ಎ.ಬಿ. ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲ ಡಾ.ಎಂ.ಎಸ್.ರವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಹಮ್ಮದ್ ಇಕ್ಬಾಲ್‌, ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಐಶ್ವರ್ಯ, ಒನ್ ಸೈಟ್ ಎಸ್ಪಿಲಾರ್‌ಲಕೋಟಿಕ್ ಫೌಂಡೇಶನ್‌ನ ಮುಖ್ಯ ವ್ಯವಸ್ಥಾಪಕ ಧರ್ಮಪ್ರಸಾದ್ ರೈ ಗೌರವ ಉಪಸ್ಥಿತಿ ಇರಲಿದ್ದಾರೆ.
    ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ, ಒಡಿಯೂರು ಶ್ರೀ ಗುರುದೇವ ಕೈಗಾರಿಕಾ ತರಬೇತಿ ಸಂಸ್ಥೆ ಕನ್ಯಾನ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಯುವ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಭಾರತೀ ಫ್ರೆಂಡ್ಸ್ ಕುಡ್ಡಡ್ಕ, ಹಿಂದೂ ಜಾಗರಣ ವೇದಿಕೆ ಕರೋಪಾಡಿ, ಶ್ರೀ ವಿಷ್ಣುಮೂರ್ತಿ ವಯನಾಟ್ ಕುಲವನ್ ಯುವಜನ ಸಂಘ ಮತ್ತು ಮಹಿಳಾ ಸಂಘ, ಕುಟ್ಟಿತ್ತಡ್ಕ, ಶ್ರೀ ಬ್ರಾಹ್ಮರಿ ಜನಸೇವಾ ಚ್ಯಾರಿಟೇಬಲ್ ಟ್ರಸ್ಟ್ ಕನ್ಯಾನ, ಶ್ರೀ ವಿಷ್ಣುಮೂರ್ತಿ ಮಾತೃ ಮಂಡಳಿ ದೇಲಂತಬೆಟ್ಟು, ಯುವಶಕ್ತಿ ಫ್ರೆಂಡ್ಸ್ ಅಂಗ್ರಿ-ದೇಲಂತಬೆಟ್ಟು, ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರ ಹನುಮಾನ್ ಶಾಖೆ, ಕನ್ಯಾನ, ಅಮ್ಮ ಗ್ರೂಪ್ಸ್ ಕಮ್ಯಾಜೆ, ಶ್ರೀ ಗುರುದೇವ ಗ್ರೂಪ್ಸ್ ಕನ್ಯಾನ, ನವಜ್ಯೋತಿ ಯುವಕ ವೃಂದ, ಬೇಂಗದಪಡು, ಓಂ ಶ್ರೀ ಫ್ರೆಂಡ್ಸ್ ಪಾದೆಕಲ್ಲು ಚೆಲ್ಲಂಗಾರ್, ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಿರ್ಮಾಣ ಮತ್ತು ನಿರ್ವಹಣಾ ಸಮಿತಿ ಬನಾರಿ ಮೊದಲಾದ ಸಂಘಸಂಸ್ಥೆಗಳು ಸಹಕರಿಸಲಿವೆ.
    ವೈದ್ಯರು ಸೂಚಿಸಿದವರಿಗೆ ಇ.ಸಿ.ಜಿ., ಥೈರಾಯ್ಡ್ ತಪಾಸಣೆ, ಸಾಮಾನ್ಯ ಔಷಧ ಉಚಿತ ವಿತರಣೆ ಮಾಡಲಾಗುವುದು. ಕಣ್ಣಿನ ಸಂಪೂರ್ಣ ತಪಾಸಣೆ, ಅಗತ್ಯ ಕಂಡರೆ ಹೊರೆ ಚಿಕಿತ್ಸೆಗೆ ಆಯ್ಕೆ ಮಾಡಲಾಗುವುದು. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತುಪಡಿಸಿದ ದಿನಾಂಕದಂದು ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಅರ್ಹರಿಗೆ ಉಚಿತ ಕನ್ನಡಕಗಳನ್ನು 08-08-2025ರಂದು ಗ್ರಾಮೋತ್ಸವ ಸಮಾರಂಭದಲ್ಲಿ ವಿತರಿಸಲಾಗುವುದು. ಜಿಲ್ಲಾ ಆಯುಷ್ ಇಲಾಖೆಯಿಂದ ಆಯುರ್ವೇದ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು. ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ರಕ್ತದೊತ್ತಡ-ಮಧುಮೇಹ ಪರೀಕ್ಷೆ ನಡೆಸಲಾಗುವುದು. ಶಿಬಿರದ ಫಲಾನುಭವಿಗಳು ತಾರೀಕು 13-07-2025ರಂದು ಶಿಬಿರ ಸ್ಥಳದಿಂದ ಬೆಳಿಗ್ಗೆ ಗಂಟೆ 8.30ಕ್ಕೆ ಟೋಕನ್ ಪಡೆದುಕೊಳ್ಳಬೇಕು. ಅವಶ್ಯಕತೆ ಇದ್ದವರಿಗೆ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಆರೋಗ್ಯ ಕಾರ್ಡ್ ಮಾಡಿಕೊಡಲಾಗುವುದು.
    ರಕ್ತದಾನಿಗಳು ಮುಂಚಿತವಾಗಿ ಹೆಸರು ನೊಂದಾಯಿಸಬೇಕು. ಮಾಹಿತಿಗೆ ಸಂಪರ್ಕ ಸಂಖ್ಯೆ: 9448177811, 9449532599, 9480760799, 9449365656

    Blood Camp Odiiyuru Shree Odiyoor Shree Vividhoddesha Co Operative Society
    Previous Articleಅಮಾವಾಸ್ಯೆ ದಿನವೇ ರಾಷ್ಟ್ರೀಯ ಸಹಕಾರ ನೀತಿ ಘೋಷಣೆ
    Next Article ಜೈಗಣೇಶ್‌ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದ ಸೌಹಾರ್ದ ಸಿರಿ ನೂತನ ಕಟ್ಟಡ ನಾಳೆ ಸಾಹೇಬರಕಟ್ಟೆಯಲ್ಲಿ ಉದ್ಘಾಟನೆ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.