ಅಡಕೆ ಉತ್ಪನ್ನದ ರಫ್ತು ಉದ್ಯಮದ ಮೇಲೆ ಕರಿಛಾಯೆ
ಮಂಗಳೂರು: ಕೃಷಿ ಪ್ರಧಾನ ಅದರಲ್ಲೂ ದಕಿಷಣ ಕನ್ನಡ, ಉಡುಪಿ, ಮಲೆನಾಡು ಭಾಗದ ಪ್ರಮುಖ ಕೃಷಿ ಬೆಳೆಯಾಗಿರುವ ಅಡಕೆಯ ಬೆಲೆ ಏರುಗತಿಯಲ್ಲಿದೆ. 450-500 ರೂ. ಆಸುಪಾಸಿನಲ್ಲಿರುವ ಅಡಕೆಯ ಉಪ ಉತ್ಪನ್ನಗಳಿಗೂ ಉತ್ತಮ ದಾರಣೆ ಇದೆ. ಅಡಕೆ ಹಾಳೆ ತಟ್ಟೆಯಂತ ಉತ್ಪನ್ನಗಳು ವಿದೇಶಕ್ಕೂ ರಫ್ತಾಗುತ್ತಿತ್ತು. ಆದರೆ ಈಗ ಅಮೆರಿಕಾದಲ್ಲಿ ಅಡಕೆ ಹಾಳೆ ತಟ್ಟೆಯ ಬಳಕೆಗೆ ನಿಷೇಧ ಹೇರಲಾಗುತ್ತಿದೆ ಎನ್ನಲಾಗುತ್ತಿದೆ.
https://chat.whatsapp.com/EbVKVnWB6rlHT1mWtsgbch
ಮೂಲಗಳ ಪ್ರಕಾರ ಅಮೆರಿಕಾದ ಆಹಾರ ಮತ್ತು ಔಷಧ ಆಡಳಿತ ಸಮಿತಿ (ಎಫ್‌ಡಿಎ) ಭಾರತದಿಂದ ರಫ್ತಾಗುತ್ತಿರುವ ಅಡಕೆ ಹಾಳೆಗಳ ಬಳಕೆಯ ಮೇಲೆ ನಿಷೇಧ ಹೇರುತ್ತಿದೆ. ಇದರಿಂದ ಅಡಕೆ ಹಾಳೆ ತಟ್ಟೆಯ ರಫ್ತು ವಿನಿಮಯದ ಮೇಲೆ ಪೆಟ್ಟು ಬೀಳುತ್ತಿದೆ. ಅಡಕೆ ಹಾಳೆ ತಟ್ಟೆಯನ್ನು ಅಡಕೆಯಂತೆ ಯಾರೂ ತಿನ್ನುವುದಿಲ್ಲ. ಅದರ ಬಳಕೆ ಊಟ, ತಿಂಡಿ ತೆಗೆದುಕೊಳ್ಳಲು ಮಾತ್ರ. ಪ್ಲಾಸ್ಟಿಕ್‌ನಂತೆ ಪರಿಸರಕ್ಕೆ ಯಾವುದೇ ಹಾನಿ ಮಾಡದೆ ಪರಿಸರ ಪೂರಕವಾಗಿ ಬಳಕೆಯಾಗುತ್ತಿದ್ದರೂ ಅಡಕೆ ಹಾನಿಕಾರಕ ಎಂಬ ಅಪವಾದ ಹೊರಿಸಿ ಅಮೆರಿಕಾದಂಥ ಮುಂದುವರಿದ ದೇಶವೇ ಹಾಳೆ ತಟ್ಟೆಯನ್ನು ನಿಷೇಧಿಸುವ ಹಂತಕ್ಕೆ ಬರುತ್ತಿರುವುದು ಎಚ್ಚರಿಕೆಯ ಕರೆಗಂಟೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com