ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕ್‌ನ 49ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸ್ವರ್ಣ ಜಯಂತಿ ವರ್ಷದ “ಸ್ವರ್ಣ ಸಂಭ್ರಮ” ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮೇ 11ರಂದು ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದ ಉದ್ಘಾಟನೆಯನ್ನು ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಮಾಡಲಿದ್ದಾರೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ.ಎಸ್. ಆರ್. ಹರೀಶ್ ಆಚಾರ್ಯ ತಿಳಿಸಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್, ಕಟಪಾಡಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಆಚಾರ್ಯ ವಡೇರಹೋಬಳಿ, ವಿಶ್ವಕರ್ಮ ಸಹಕಾರ ಬ್ಯಾಂಕ್ ಸ್ಥಾಪಕ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಮುನಿಯಾಲು ದಾಮೋದರ ಆಚಾರ್ಯ, ಶ್ರೀ ಲಕ್ಷ್ಮೀ ಜ್ಯುವೆಲ್ಲರ್‌ನ ಮಾಲೀಕರಾದ ಬಿ.ಪ್ರವೀಣ್ ಶೇಟ್ ನಾಗ್ವೇಕರ್, ಮುನಿಯಾಲು ಸಂಜೀವಿನಿ ಫಾರ್ಮ್ಸ್‌ನ ಸವಿತಾ ರಾಮಕೃಷ್ಣ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಬ್ಯಾಂಕಿನ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.
ನಮ್ಮ ಬ್ಯಾಂಕ್ ಖ್ಯಾತಿ
ಇಂದು “ನಮ್ಮ ಬ್ಯಾಂಕ್”ಎಂದು ಗುರುತಿಸಿ ಕರೆಯಲ್ಪಡುವ ವಿಶ್ವಕರ್ಮ ಸಹಕಾರ ಬ್ಯಾಂಕ್ 1976ರ ಮೇ 11ರಂದು ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಆಶಯದಂತೆ “ದಿ ಮಂಗಳೂರು ಗೋಲ್ಡ್‌ಸ್ಮಿತ್ಸ್ ಕೋ ಆಪರೇಟಿವ್ ಸೊಸೈಟಿʼʼ ಎಂಬ ಹೆಸರಿನಲ್ಲಿ ಪ್ರಾರಂಭವಾದ ಸಂಸ್ಥೆ ಆಗಿದೆ. ಶಿಕ್ಷಕರಾಗಿದ್ದ ದಿ. ಬೋಳೂರು ಹರಿಶ್ಚಂದ್ರ ಆಚಾರ್ಯ ಇವರ ದೂರದರ್ಶಿ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಮಂಗಳೂರು ಪರಿಸರದ ಚಿನ್ನದ ಕೆಲಸಗಾರ ಬಂಧುಗಳನ್ನು ಸಂಘಟಿಸಿ ಅವರ ಶ್ರೇಯೋಭಿವೃದ್ಧಿಗಾಗಿ ಕಟ್ಟಿದ ಆರ್ಥಿಕ ಸಂಸ್ಥೆ ಇದಾಗಿದೆ. ಅಕ್ಟೋಬರ್ 12, 2000ದಿಂದ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾನ್ಯತೆಗೆ ಒಳಪಟ್ಟು ‘ವಿಶ್ವಕರ್ಮ ಸಹಕಾರ ಬ್ಯಾಂಕ್’ ಹೆಸರಿನೊಂದಿಗೆ ಒಂದು ಪಟ್ಟಣ ಸಹಕಾರ ಬ್ಯಾಂಕ್ ಆಗಿ ರೂಪಾಂತರಗೊಂಡು ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ಮಂಗಳೂರಿನ ರಥಬೀದಿಯಲ್ಲಿ ಪ್ರಧಾನ ಕಚೇರಿ, ಉಡುಪಿ, ಕಾರ್ಕಳ, ಮೆಲ್ಕಾರ್ ಹಾಗೂ ಉಜಿರೆ ಈ ಐದು ಪ್ರದೇಶಗಳಲ್ಲಿ ಶಾಖಾ ಕಚೇರಿಯನ್ನು ಹೊಂದಿ ಚಿನ್ನದ ಕೆಲಸಗಾರರು ಸೇರಿದಂತೆ ಕುಶಲಕರ್ಮಿ ಸದಸ್ಯರ ಆರ್ಥಿಕ ಸಬಲೀಕರಣ ಪ್ರಮುಖ ಕಾರ್ಯವನ್ನು ಮುಂಚೂಣಿಯಲ್ಲಿ ನಿಂತು ಮಾಡಿಕೊಂಡು ಬರುತ್ತಿದೆ. ಬ್ಯಾಂಕಿನ ಸ್ವರ್ಣ ಜಯಂತಿಯ ಈ ಸುಸಂದರ್ಭದಲ್ಲಿ ಸದಸ್ಯರ ಶ್ರೇಯೋಭಿವೃದ್ಧಿ, ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆಗಳು ಹಾಗೂ ಹಲವಾರು ಸಾಮಾಜಿಕ ರಚನಾತ್ಮಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಯೋಜಿಸಿ ಆಚರಿಸುವ ಯೋಜನೆಯನ್ನು ಬ್ಯಾಂಕ್ ಹಾಕಿಕೊಂಡಿದೆ.
ಬ್ಯಾಂಕ್‌ನ ಸ್ಥಾಪಕ ಸದಸ್ಯರು:
ಎಂ.ಗೋಪಾಲ ಆಚಾರ್ಯ, ಐ.ಎನ್.ಸದಾಶಿವ ಆಚಾರ್ಯ, ವಿ.ರಾಮಕೃಷ್ಣ ಆಚಾರ್ಯ, ಬಿ.ಹರಿಶ್ಚಂದ್ರ ಆಚಾರ್ಯ, ಯು.ರಘುವೀರ್, ಬಿ.ಶ್ರೀಧರ ಆಚಾರ್ಯ ಬಿ.ಜಯರಾಮ ಆಚಾರ್ಯ, ಕೆ.ಚಂದ್ರಶೇಖರ ಆಚಾರ್ಯ, ಬಿ.ಸದಾನಂದ ಶೇಟ್, ಮುನಿಯಾಲ್ ದಾಮೋದರ ಆಚಾರ್, ಎಸ್.ನಾಗೇಶ್ ಶೇಟ್, ಪಿ.ಶಿವರಾಮ ಅಚಾರ್ಯ, ನಿಡ್ಡೋಡಿ ಪ್ರಭಾಕರ ಆಚಾರ್ಯ, ಪಯ್ಯಾಲ್ ಭಾಸ್ಕರ ಆಚಾರ್, ಮಿಜಾರ್ ಜಯರಾಮ ಆಚಾರ್ಯ, ಎಂ.ವಿಶ್ವನಾಥ ಆಚಾರ್ಯ, ವಿ.ಚಿನ್ನಯ್ಯ ಆಚಾರ್ಯ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com