ಮೇ 11ರಂದು ಸ್ವರ್ಣ ಜಯಂತಿ ವರ್ಷದ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ
ವರ್ಷಪೂರ್ತಿ ನಡೆಯಲಿದೆ ವೈವಿಧ್ಯಮಯ ಕಾರ್ಯಕ್ರಮಗಳು
ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಸ್ವರ್ಣ ಸಂಭ್ರಮ ಅಂಗವಾಗಿ ಮೇ 11ರಂದು ಭಾನುವಾರ ಬೆಳಗ್ಗೆ 10.30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸ್ವರ್ಣ ಜಯಂತಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಹಾಗೂ 49ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ನಡೆಯಲಿದೆ.
https://chat.whatsapp.com/EbVKVnWB6rlHT1mWtsgbch
ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್, ಕಟಪಾಡಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಆಚಾರ್ಯ ವಡೇರಹೋಬಳಿ, ವಿಶ್ವಕರ್ಮ ಸಹಕಾರ ಬ್ಯಾಂಕ್ ಸ್ಥಾಪಕ ಸದಸ್ಯ, ಮಾಜಿ ಅಧ್ಯಕ್ಷ ಮುನಿಯಾಲು ದಾಮೋದರ ಆಚಾರ್ಯ, ಶ್ರೀ ಲಕ್ಷ್ಮೀ ಜ್ಯುವೆಲ್ಲರ್‌ನ ಮಾಲೀಕ ಬಿ.ಪ್ರವೀಣ್ ಶೇಟ್ ನಾಗ್ವೇಕರ್, ಮುನಿಯಾಲು ಸಂಜೀವಿನಿ ಫಾರ್ಮ್ಸ್‌ನ ಸವಿತಾ ರಾಮಕೃಷ್ಣ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ಎಸ್ ಆರ್ ಹರೀಶ್ ಆಚಾರ್ಯ, ಉಪಾಧ್ಯಕ್ಷ ಜಗದೀಶ್ ಆಚಾರ್ಯ ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ಬ್ಯಾಂಕ್ ಖ್ಯಾತಿ
ಇಂದು ನಮ್ಮ ಬ್ಯಾಂಕ್ ಎಂದೇ ಕರೆಯಲ್ಪಡುತ್ತಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ 1976ರ ಮೇ 11ರಂದು ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಆಶಯದಂತೆ “ದಿ ಮಂಗಳೂರು ಗೋಲ್ಡ್‌ಸ್ಮಿತ್ಸ್ ಕೋಆಪರೇಟಿವ್ ಸೊಸೈಟಿʼʼ ಎಂಬ ಹೆಸರಿನಲ್ಲಿ ಪ್ರಾರಂಭವಾಗಿತ್ತು. ಶಿಕ್ಷಕರಾಗಿದ್ದ ದಿ.ಬೋಳೂರು ಹರಿಶ್ಚಂದ್ರ ಆಚಾರ್ಯ ಇವರ ದೂರದರ್ಶಿ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಮಂಗಳೂರು ಪರಿಸರದ ಚಿನ್ನದ ಕೆಲಸಗಾರ ಬಂಧುಗಳನ್ನು ಸಂಘಟಿಸಿ ಅವರ ಶ್ರೇಯೋಭಿವೃದ್ಧಿಗಾಗಿ ಕಟ್ಟಿದ ಆರ್ಥಿಕ ಸಂಸ್ಥೆ ಇದು. ಪ್ರಾರಂಭದ 25 ವರ್ಷಗಳ ಕಾಲ ಇದು ಒಂದು ಸಹಕಾರ ಸಂಸ್ಥೆಯ ರೂಪದಲ್ಲಿಯೇ ‘ದಿ ಮಂಗಳೂರು ಗೋಲ್ಡ್ ಸ್ಮಿತ್ ಕೋ-ಆಪರೇಟಿವ್ ಸೊಸೈಟಿ’ ಹೆಸರಿನಲ್ಲಿ ಕಾರ್ಯಾಚರಿಸುತ್ತಿತ್ತು. 25 ವರ್ಷಗಳ ಹಿಂದೆ ಅಂದರೆ ಅಕ್ಟೋಬರ್ 12, 2000ದಿಂದ ಅಂದು ಸಹಕಾರ ಸಂಘಗಳ ನಿಬಂಧಕರಾಗಿದ್ದ ಹುಚ್ಚಾಚಾರ್ ಅವರ ಮುತುವರ್ಜಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾನ್ಯತೆಗೆ ಒಳಪಟ್ಟು ‘ವಿಶ್ವಕರ್ಮ ಸಹಕಾರ ಬ್ಯಾಂಕ್’ ಹೆಸರಿನಲ್ಲಿ ಒಂದು ಪಟ್ಟಣ ಸಹಕಾರ ಬ್ಯಾಂಕ್ ಆಗಿ ರೂಪಾಂತರಗೊಂಡಿತು. ಪ್ರಾರಂಭದ ಸುಮಾರು 25 ವರ್ಷ ಸಹಕಾರ ಸಂಘದ ಇತಿಹಾಸ, ನಂತರದ 25 ವರ್ಷಗಳ ಸಹಕಾರ ಬ್ಯಾಂಕಿಂಗ್ ಸ್ವರೂಪದ ಇತಿಹಾಸ ವಿಶ್ವಕರ್ಮ ಬ್ಯಾಂಕ್‌ನದ್ದು.
ಬ್ಯಾಂಕ್‌ನ ಸ್ಥಾಪಕ ಸದಸ್ಯರು
ಎಂ.ಗೋಪಾಲ ಆಚಾರ್ಯ, ಐ.ಎನ್.ಸದಾಶಿವ ಆಚಾರ್ಯ, ವಿ.ರಾಮಕೃಷ್ಣ ಆಚಾರ್ಯ, ಬಿ.ಹರಿಶ್ಚಂದ್ರ ಆಚಾರ್ಯ, ಯು.ರಘುವೀರ್, ಬಿ.ಶ್ರೀಧರ ಆಚಾರ್ಯ ಬಿ.ಜಯರಾಮ ಆಚಾರ್ಯ, ಕೆ.ಚಂದ್ರಶೇಖರ ಆಚಾರ್ಯ, ಬಿ.ಸದಾನಂದ ಶೇಟ್, ಮುನಿಯಾಲ್ ದಾಮೋದರ ಆಚಾರ್, ಎಸ್.ನಾಗೇಶ್ ಶೇಟ್, ಪಿ.ಶಿವರಾಮ ಅಚಾರ್ಯ, ನಿಡ್ಡೋಡಿ ಪ್ರಭಾಕರ ಆಚಾರ್ಯ, ಪಯ್ಯಾಲ್ ಭಾಸ್ಕರ ಆಚಾರ್, ಮಿಜಾರ್ ಜಯರಾಮ ಆಚಾರ್ಯ, ಎಂ.ವಿಶ್ವನಾಥ ಆಚಾರ್ಯ, ವಿ.ಚಿನ್ನಯ್ಯ ಆಚಾರ್ಯ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com