ಇ-ಕಾಮರ್ಸ್‌ನಲ್ಲಿ ಸಹಕಾರಿಗಳ ಉತ್ಪನ್ನ ಮಾರಾಟಕ್ಕೆ ನೂತನ ಕೌಶಲ
ನವದೆಹಲಿ: ಭಾರತದಲ್ಲಿ ಸಹಕಾರಿ ವಲಯದ ಉತ್ಪನ್ನಗಳ ಮಾರಾಟದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಸಹಕಾರ ಸಚಿವಾಲಯವು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಜೊತೆ ಒಪ್ಪಂದ(ಎಂಒಯು)ಕ್ಕೆ ಸಹಿ ಹಾಕಿದೆ. ಈ ಒಪ್ಪಂದವು ಸಹಕಾರಿ ಸಂಘಗಳ ಉತ್ಪನ್ನಗಳನ್ನು ಇ-ಕಾಮರ್ಸ್ ಮತ್ತು ಕ್ಯೂ -ಕಾಮರ್ಸ್‌ಗಳಲ್ಲಿ ಮಾರಾಟ ಮಾಡಲು ದಾರಿ ಮಾಡಿಕೊಡಲಿದೆ.
https://chat.whatsapp.com/EbVKVnWB6rlHT1mWtsgbch
ಏಪ್ರಿಲ್ 25ರಂದು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ಸಿಇಒ ಅಮಿತೇಶ್ ಝಾ ಮತ್ತು ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಿ.ಕೆ. ವರ್ಮಾ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಒಪ್ಪಂದದ ನಂತರ, ಭಾರತ್ ಆರ್ಗಾನಿಕ್ಸ್ ಮತ್ತು ಇತರ ಸಹಕಾರಿ ಡೈರಿ ಬ್ರ್ಯಾಂಡ್‌ಗಳ ಅಡಿಯಲ್ಲಿ ಬರುವ ಉತ್ಪನ್ನಗಳು ಶೀಘ್ರದಲ್ಲೇ ಸ್ವಿಗ್ಗಿಯಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ. ಇದು ಸಹಕಾರಿ ಸಂಸ್ಥೆಗಳ ಡಿಜಿಟಲ್ ವ್ಯಾಪ್ತಿಯನ್ನು ವಿಸ್ತರಿಸುವ ಜೊತೆಗೆ ಅವುಗಳ ಮಾರುಕಟ್ಟೆ ಉಪಸ್ಥಿತಿಯನ್ನೂ ಹೆಚ್ಚಿಸಲಿವೆ. ಸಹಕಾರ ಸಚಿವಾಲಯದ ಕಾರ್ಯದರ್ಶಿ ಆಶಿಶ್ ಕುಮಾರ್ ಭೂತಾನಿ ಕೂಡ ಉಪಸ್ಥಿತರಿದ್ದ ಈ ಸಹಿ ಒಪ್ಪಂದವು ಸಹಕಾರಿ ಉತ್ಪನ್ನಗಳನ್ನು ವಿಶಾಲವಾದ, ತಂತ್ರಜ್ಞಾನ ಆಧಾರಿತ ಗ್ರಾಹಕ ನೆಲೆಯೊಂದಿಗೆ ಸಂಪರ್ಕಿಸುವತ್ತ ಒಂದು ಪ್ರಮುಖ ಕೊಂಡಿಯಾಗಿ ಮುಂದುವರಿಯಲಿದೆ.
ಸ್ವಿಗ್ಗಿ ಮತ್ತು ಸಹಕಾರ ಸಚಿವಾಲಯದ ಪಾಲುದಾರಿಕೆಯಿಂದ ಸಹಕಾರಿ ಸಂಸ್ಥೆಗಳ ಉತ್ಪನಗನಗಳಿಗೆ ಸ್ವಿಗ್ಗಿ ಮಾರುಕಟ್ಟೆ ಒದಗಿಸುವುದಲ್ಲದೆ, ಮಾರುಕಟ್ಟೆ, ಪ್ರಚಾರ, ಗ್ರಾಹಕ ತಂತ್ರಜ್ಞಾನ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಸಹಾಯ ಮಾಡಲಿದೆ. ದೇಶಾದ್ಯಂತ ಸಹಕಾರಿ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಸಾವಯವ, ಡೈರಿ ವಸ್ತುಗಳು, ರಾಗಿ ಮತ್ತು ಕರಕುಶಲ ವಸ್ತುಗಳಂತಹ ವಿವಿಧ ಉತ್ಪನ್ನಗಳನ್ನು ಒಳಗೊಂಡ ಸ್ವಿಗ್ಗಿಯ ಅಪ್ಲಿಕೇಶನ್‌ನಲ್ಲಿ ವಿಶೇಷ “ಸಹಕಾರಿ” ವರ್ಗವನ್ನು ರಚಿಸಲಾಗುವುದು. ಸಹಕಾರಿ ವಲಯವನ್ನು ಆಧುನೀಕರಿಸಲು ಮತ್ತು ಬಲಪಡಿಸಲು ಸಹಕಾರ ಸಚಿವಾಲಯದ ನೇತೃತ್ವದ ದೊಡ್ಡ ಪ್ರಯತ್ನದ ಭಾಗವಾಗಿ ಈ ಉಪಕ್ರಮವನ್ನು ರೂಪಿಸಲಾಗಿದೆ. ಸಹಕಾರಿ ಸಂಸ್ಥೆಗಳನ್ನು ನೇರವಾಗಿ ಡಿಜಿಟಲ್ ಮಾರುಕಟ್ಟೆಗಳು ಮತ್ತು ಗ್ರಾಹಕರಿಗೆ ಸಂಪರ್ಕಿಸುವ ಮೂಲಕ, ಸಚಿವಾಲಯವು ರೈತರು, ಕುಶಲಕರ್ಮಿಗಳು ಮತ್ತು ಉತ್ಪಾದಕರನ್ನು ಸಬಲೀಕರಣಗೊಳಿಸುತ್ತಿದೆ, ಜೊತೆಗೆ ಗ್ರಾಮೀಣ ಆರ್ಥಿಕತೆಗಳನ್ನು ಬಲಪಡಿಸುತ್ತಿದೆ ಮತ್ತು ಸ್ವಾವಲಂಬಿ ಭಾರತದ ದೃಷ್ಟಿಕೋನಕ್ಕೆ ಕೊಡುಗೆ ನೀಡುತ್ತಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com