ಮಂಗಳೂರು: ಮಂಗಳೂರು ಸೌಹಾರ್ದ ಸಹಕಾರಿ ಸಂಘದ ವಾರ್ಷಿಕೋತ್ಸವ ಅಂಗವಾಗಿ ಮಂಗಳೂರು ಸ್ಟೋರ್ (ಶಾಂತಿನಗರ ಜಪ್ಪು) ಸಭಾಂಗಣದಲ್ಲಿ ಭಾನುವಾರ ಉಚಿತ ಕಣ್ಣು ಪರೀಕ್ಷೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.
ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಉದ್ಘಾಟಿಸಿದರು. ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
https://chat.whatsapp.com/EbVKVnWB6rlHT1mWtsgbch
ಪ್ರಸಾದ್ ನೇತ್ರಾಲಯದ ಡಾ|ಸುಯೋಗ್ ಎಂ.ಎಸ್ ಶುಭ ಹಾರೈಸಿ ಮಾತನಾಡಿ, ಮಂಗಳೂರು ಸೌಹಾರ್ದ ಸಹಕಾರಿಯ ಜನಪರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಹಿಳಾ ತಜ್ಞೆ ಡಾ.ಕವಿತಾ ಡಿಸೋಜ ಭಾಗವಹಿಸಿ ಶುಭಹಾರೈಸಿದರು. ಧನ್ವೀ ರಾವ್ ಪ್ರಾರ್ಥನೆ ಮಾಡಿದರು. ಸಂಸ್ಥೆಯ ಅಧ್ಯಕ್ಷ ಕೆ.ಭಾಸ್ಕರ್ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಭವಾನಿಶಂಕರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಚಂದ್ರಕಾ ಡಿ.ರಾವ್ ಮತ್ತು ವಸಂತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಎ.ಕೃಷ್ಣಭಟ್, ಲತಾ ಆಳ್ವ, ಸುಂದರ ಸಾಲ್ಯಾನ್, ರವೀಂದ್ರ ಬೇಕಲ್, ಪೂರ್ಣಿಮಾ ಬಿ.ರಾವ್, ಪ್ರದೀಪ ಬೇಕಲ್, ಸತೀಶ್ ಪೆಂಗಾಲ್, ಶುಭಾ ಪ್ರಶಾಂತ, ಹರೀಶ್ ಕುಮಾರ್, ನಾಗೇಂದ್ರ ಕುಮಾರ್, ಮೀನಾ ಟೆಲ್ಲಿಸ್, ಜೇಮ್ಸ್ ಪ್ರವೀಣ, ಅಲೆಸ್ಟೀನ್, ಮಿಲಾಜ್ ಅತ್ತಾವರ, ಆನಂದ್ ಸೋನ್ಸ್ , ವಿದ್ಯಾ ಬಾಬುಗುಡ್ಡ, ರಮಾನಂದ ಬೋಳಾರ್, ಕೆ.ಎಸ್.ರಂಜನ್, ಜೆ ಕೊರಗಪ್ಪ, ವಾರಿಜ, ಕಲ್ಪನಾ ವೆಂಕಟೇಶ್, ಸುಧಾ ಭಾಸ್ಕರ, ಒಸ್ಪ್ಲ್‌ದ ಪುತ್ರಾಡೊ, ನೆಲ್ಸೆನ್ ರೋಚ್, ಮೋಹನ್‌ದಾಸ್ ಕೊಟ್ಟಾರಿ ಮೊದಲಾದವರು ಭಾಗವಹಿಸಿದ್ದರು. ಭಾಗವಹಿಸಿದರು. ನಿರ್ದೇಶಕ ಸದಾಶಿವ ಅಮೀನ್ ವಂದಿಸಿದರು. 300 ಫಲಾನುಭವಿಗಳು ಭಾಗವಹಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com