ಮಂಗಳೂರು: ಎಂಸಿಸಿ ಬ್ಯಾಂಕಿನ ಬ್ರಹ್ಮಾವರ ಶಾಖೆ ಆರಂಭವಾಗಿ ಒಂದು ವರ್ಷ ಪೂರ್ಣಗೊಂಡ ಸಂದರ್ಭ ವಾರ್ಷಿಕೋತ್ಸವ, ೧೦ ಕೋಟಿ ರೂ. ವ್ಯವಹಾರದ ಸಾಧನೆ ಮತ್ತು ನೂತನ ಎಟಿಎಂ ಲೋಕಾರ್ಪಣಾ ಸಮಾರಂಭ ಸೋಮವಾರ ಬ್ರಹ್ಮಾವರ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
https://chat.whatsapp.com/EbVKVnWB6rlHT1mWtsgbch
ಎಂಸಿಸಿ ಬ್ಯಾಂಕಿನ ೮ನೇ ಎಟಿಎಂ ಅನ್ನು ಬ್ರಹ್ಮಾವರ ಶಾಖೆಯಲ್ಲಿ ಬ್ರಹ್ಮಾವರ ಕ್ಯಾಥೋಲಿಕ್ ಕ್ರೆಡಿಟ್ ಸಹಕಾರ ಸಂಘದ ಅಧ್ಯಕ್ಷ ಜೆರಾಲ್ಡ್ ಗೊನ್ಸಾಲ್ವಿಸ್ ಉದ್ಘಾಟಿಸಿದರು. ಹೋಲಿ ಫ್ಯಾಮಿಲಿ ಚರ್ಚಿನ ಧರ್ಮಗುರು ಫಾ|ಜೋನ್ ಫೆರ್ನಾಂಡಿಸ್ ಆಶೀರ್ವದಿಸಿದರು. ಎಟಿಎಂ ಯಂತ್ರವನ್ನು ಎಎಸ್ ಯೂಸ್ಡ್ ಕಾರ‍್ಸ್ ಮಾಲೀಕ ಸೌರಬ್ ಶೆಟ್ಟಿ ಎಟಿಎಂನಿಂದ ಹಣ ತೆಗೆಯುವ ಮೂಲಕ ಉದ್ಘಾಟಿಸಿದರು. ಉದ್ಯಮಿ ಶಂಶುದ್ದಿನ್ ಮೊಯಿದಿನ್ ಮುಖ್ಯ ಅತಿಥಿಯಾಗಿದ್ದರು. ಶಾಖಾ ನಿರ್ದೇಶಕ ಎಲ್‌ರೋಯ್ ಕಿರಣ್ ಕ್ರಾಸ್ಟೊ ಹಾಜರಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ, ಬ್ರಹ್ಮಾವರದಲ್ಲಿ ಎಂಸಿಸಿ ಬ್ಯಾಂಕಿನ ಶಾಖೆ ಆರಂಭಗೊಳ್ಳಲು ಹಾಗೂ ರೂ. ೧೦ ಕೋಟಿ ವ್ಯವಹಾರ ದಾಖಲಿಸಲು ಸಹಕರಿಸಿದ ಬ್ರಹ್ಮಾವರದ ಗ್ರಾಹಕರಿಗೆ ವಂದನೆಗಳನ್ನು ಸಲ್ಲಿಸಿದರು. ಬ್ರಹ್ಮಾವರದ ಜನ ನೀಡಿದ ಸಹಕಾರದಿಂದ ಬ್ರಹ್ಮಾವರ ಶಾಖೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಶಾಖೆಯಲ್ಲಿ ಉತ್ತಮ ಸೇವೆ ಮತ್ತು ವಿಶ್ವಾಸಾರ್ಹತೆ ಗಳಿಸುವಲ್ಲಿ ಯಶಸ್ವಿಯಾದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಇದಕ್ಕಾಗಿ ಬ್ರಹ್ಮಾವರ ಶಾಖೆಯ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿ ಮುಂದಿನ ವರ್ಷ ೩೦ ಕೋಟಿ ರೂ. ವ್ಯವಹಾರ ದಾಖಲಿಸಿ, ಶಾಖೆಯು ಲಾಭ ಗಳಿಸುವಲ್ಲಿ ಗ್ರಾಹಕರು ಸಹಕರಿಸಲು ಮತ್ತು ಶಾಖೆಯ ಸಿಬ್ಬಂದಿ ಶ್ರಮಿಸಲು ಕರೆ ಕೊಟ್ಟರು.
ಆಶೀರ್ವಚಿಸಿ ಮಾತನಾಡಿದ ಫಾ| ಜೋನ್ ಫೆರ್ನಾಂಡಿಸ್ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಗ್ರಾಹಕರಿಗೆ ಶುಭ ಹಾರೈಸಿದರು. ಜೆರಾಲ್ಡ್ ಗೊನ್ಸಾಲ್ವಿಸ್ ಮಾತನಾಡಿ, ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಮುಂದಾಳತ್ವದ ಆಡಳಿತ ಮಂಡಳಿಯ ಸಾಧನೆಯನ್ನು ಶ್ಲಾಘಿಸಿದರು. ಶಾಖೆಯು ಒಂದು ವರ್ಷದಲ್ಲೇ ರೂ. ೧೦ ಕೋಟಿ ಸಾಧನೆಗೈದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ನೂತನ ತಂತ್ರಜ್ಞಾನದಲ್ಲಿ ಹಿಂದೆ ಬಿದ್ದರೆ ಪ್ರಗತಿ ಅಸಾಧ್ಯ, ಎಲ್ಲರೂ ಒಟ್ಟುಗೂಡಿ ಕೆಲಸ ಮಾಡಿದ್ದರಿಂದ ಬ್ಯಾಂಕ್ ಪ್ರಗತಿ ಸಾಧಿಸಿದೆ. ಎಂಸಿಸಿ ಬ್ಯಾಂಕ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದು ಮುಂದೆಯೂ ಉತ್ತಮ ಪ್ರಗತಿ ಸಾಧಿಸಲಿ ಎಂದು ಶುಭ ಹಾರೈಸಿದರು.
ರೂ. ೧೦ ಕೋಟಿ ವ್ಯವಹಾರದ ಸಾಧನೆ ಮಾಡಿದ ಶಾಖೆಯ ವ್ಯವಸ್ಥಾಪಕ ಒವಿನ್ ರೆಬೆಲ್ಲೊಹಾಗೂ ಬ್ರಹ್ಮಾವರ ಕ್ಯಾಥೋಲಿಕ್ ಕ್ರೆಡಿಟ್ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೆರಾಲ್ಡ್ ಗೊನ್ಸಾಲ್ವಿಸ್ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ನಿರ್ದೇಶಕರಾದ ಡಾ.ಜೆರಾಲ್ಡ್ ಪಿಂಟೊ ಸ್ವಾಗತಿಸಿ, ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿದರು. ಶಾಖಾ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ನಿರೂಪಿಸಿದರು. ಉಡುಪಿ ಶಾಖಾ ವ್ಯವಸ್ಥಾಪಕ ಪ್ರದೀಪ್ ಡಿಸೋಜ, ಶಿರ್ವ ಶಾಖಾ ವ್ಯವಸ್ಥಾಪಕಿ ಅನ್ಸಿಲ್ಲಾ ಫೆರ್ನಾಂಡಿಸ್, ಕುಂದಾಪುರ ಶಾಖಾ ವ್ಯವಸ್ಥಾಪಕಿ ಜ್ಯೋತಿ ಬಾರೆಟ್ಟೊ ಹಾಗೂ ಗ್ರಾಹಕರು ಹಾಜರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com