ಮಂಗಳೂರು: ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ವೀರಶೈವ ಲಿಂಗಾಯತ ಜನೋಪಯೋಗಿ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಸದಸ್ಯರು ಸಹಕಾರಿಯ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಅಧ್ಯಯನಕ್ಕಾಗಿ ಮಂಗಳವಾರ ಭೇಟಿ ನೀಡಿದರು.
https://chat.whatsapp.com/EbVKVnWB6rlHT1mWtsgbch
ಶ್ರೀಶಾ ಸೌಹಾರ್ದ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ತಮ್ಮ ಸೊಸೈಟಿ ನಡೆದು ಬಂದ ದಾರಿ ಮತ್ತು ಸುಗಮ ಹಾಗೂ ಪಾರದರ್ಶಕ ಆಡಳಿತದ ಬಗ್ಗೆ ವಿವರಣೆ ನೀಡಿದರು. ಸಹಕಾರಿಯ ಎಲ್ಲಾ ವಿಭಾಗಗಳಲ್ಲೂ ಅಂದರೆ ಠೇವಣಿ ಸಂಗ್ರಹ, ಅದರ ವಸ್ತುನಿಷ್ಠ ವಿನಿಯೋಗ, ಸಾಲ ಮರುಪಾವತಿ, ಲಾಭ ಗಳಿಕೆ ಮುಂತಾದ ವಿಷಯಗಳ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರಣೆ ನೀಡಿದರು.
ಗಳಿಸಿದ ಲಾಭಾಂಶವನ್ನು ಸ್ಥಳೀಯವಾಗಿ ಜನೋಪಯೋಗಿ ಕಾರ್ಯಗಳಿಗೆ ಹೇಗೆ ವಿನಿಯೋಗಿಸಬಹುದು ಎಂಬುದರ ಬಗ್ಗೆಯೂ ಆಡಳಿತ ಮಂಡಳಿಯವರು ಚರ್ಚಿಸಿದರು. ಶ್ರೀಶಾ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಚಿತ್ರಾ ಡಿಸೋಜ ಮತ್ತು ಹಿರಿಯ ಶಾಖಾ ಪ್ರಬಂಧಕಿ ಲಕ್ಷ್ಮೀ ಉಪಸ್ಥಿತರಿದ್ದರು. ವೀರಶೈವ ಲಿಂಗಾಯತ ಸೌಹಾರ್ದ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರು ಶ್ರೀಶಾ ಸೊಸೈಟಿಯ ಶಿಸ್ತುಬದ್ಧ ಹಾಗೂ ವಸ್ತುನಿಷ್ಠ ಆಡಳಿತ ಮತ್ತು ಸೊಸೈಟಿಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ಮತ್ತು ಕಾರ್ಯನಿರ್ವಹಣಾಧಿಕಾರಿ ಚಿತ್ರಾ ಡಿಸೋಜಾ ಅವರನ್ನು ವೀರಶೈವ ಲಿಂಗಾಯತ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎನ್.ರವಿಕುಮಾರ್ ತಮ್ಮ ಸಹಕಾರಿಯ ವತಿಯಿಂದ ಸನ್ಮಾನಿಸಿದರು.