ಬಂಟ್ವಾಳ: ಪ್ರತಿಷ್ಠಿತ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಭಾನುವಾರ ಚುನಾವಣೆ 17 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಸಾಮಾನ್ಯ ಕ್ಷೇತ್ರದಿಂದ ಅರುಣ್, ಅರುಣ್ ಕುಮಾರ್ ಕೆ., ಕಿರಣ್ ಕುಮಾರ್ ಎ, ಪ್ರೇಮನಾಥ ಬಂಟ್ವಾಳ, ಭೋಜ ಸಾಲಿಯಾನ್, ರಮೇಶ್ ಸಾಲಿಯಾನ್, ಸತೀಶ್, ರಮೇಶ್ ಸಾಲಿಯಾನ್, ಸುರೇಶ್ ಕುಲಾಲ್, ಸುರೇಶ್ ಕಲಾಲ್ ಎನ್, ಹರೀಶ್, ಮಹಿಳಾ ಕ್ಷೇತ್ರದಿಂದ ಮಾಲತಿ ಮಚ್ಚೇಂದ್ರ, ವಿದ್ಯಾ, ಹಿಂದುಳಿದ ವರ್ಗ ‘ಎ’ ಕ್ಷೇತ್ರದಿಂದ ಜನಾರ್ದನ ಬೊಂಡಾಲ, ಹಿಂದುಳಿದ ವರ್ಗ ‘ಬಿ’ ಕ್ಷೇತ್ರದಿಂದ ಜಗನ್ನಿವಾಸ ಸಮಗಾರ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಗಣೇಶ್, ಪರಿಶಿಷ್ಟ ಪಂಗಡದಿಂದ ರೇಖಾ ನಾಯ್ಕ ಗೆಲುವು ಸಾಧಿಸಿದ್ದಾರೆ. ಬ್ಯಾಂಕಿನ ಹಾಲಿ ಅಧ್ಯಕ್ಷ ಸುರೇಶ್ ಕುಲಾಲ್ ಬಂಟ್ವಾಳ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗಿತ್ತು.
ಬಂಟ್ವಾಳ ಬೈಪಾಸ್ ನಲ್ಲಿರುವ ಸಮಾಜ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ಚುನಾವಣೆ ನಡೆಯಿತು. ಪುತ್ತೂರು ತಾಲೂಕು ಸಹಕಾರಿ ಅಧಿಕಾರಿ ರಘು ಚುನಾವಣಾಧಿಕಾರಿಯಾಗಿದ್ದರು. ಸಂಘದ ಸಿಇಒ ಭೋಜ ಮೂಲ್ಯ ಹಾಗೂ ಸಿಬ್ಬಂದಿಗಳು ಸಹಕರಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com