ನವದೆಹಲಿ: ಬಹು-ರಾಜ್ಯ ಸಹಕಾರ ಸಂಘಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ, ಹಣಕಾಸಿನ ಅಕ್ರಮಗಳನ್ನು ತಡೆಗಟ್ಟುವ ಮತ್ತು ಹೊಣೆಗಾರಿಕೆಯ ಕುರಿತು ಮಾಡಲಾಗಿರುವ ತಿದ್ದುಪಡಿಗಳ ಬಗ್ಗೆ ಕೇಂದ್ರ ಗೃಹ ಸಚಿವರೂ ಆಗಿರುವ ಸಹಕಾರ ಸಚಿವ ಅಮಿತ್ ಷಾ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಮೀನುಗಾರಿಕಾ ಸಹಕಾರ ಸಂಘಗಳ ಬಗ್ಗೆಯೂ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್ ಷಾ, ಆರ್ಥಿಕ ಸ್ಥಿರತೆ ಮತ್ತು ಸಹಕಾರ ಸಂಘಗಳ ಸದಸ್ಯರ ಹಿತಾಸಕ್ತಿಗಳನ್ನು ಕಾಪಾಡಲು ಕೇಂದ್ರ ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು, ವಿವೇಕದ ಮಾನದಂಡಗಳನ್ನು ವಿಧಿಸಲಿದೆ ಎಂದು ಹೇಳಿದರು.
https://chat.whatsapp.com/Ge11n7QCiMj5QyPvCc0H19
ಸಹಕಾರ ಸಂಘಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಮಹತ್ವದ ಹೆಜ್ಜೆ ಇಡಲಾಗಿದ್ದು, ಇದರ ಭಾಗವಾಗಿ ಸಂಸತ್‌ನಲ್ಲಿ ಬಹರಾಜ್ಯ ಅಪೆಕ್ಸ್ ಸಹಕಾರಿ ಸಂಘಗಳ ಆಡಿಟ್ ವರದಿಗಳನ್ನು ಸಂಸತ್‌ನಲ್ಲಿ ಮಂಡಿಸುವ ಪ್ರಸ್ತಾಪ ಇಡಲಾಗಿದೆ. ಸ್ವಜನಪಕ್ಷಪಾತ ಮತ್ತು ಪಕ್ಷಪಾತದ ಉಪಟಳ ತಡೆಗಟ್ಟುವ ನಿಟ್ಟಿನಲ್ಲಿ ಸಹಕಾರ ಸಂಘಗಳ ನಿರ್ದೇಶಕರು ಅವರು ಅಥವಾ ಅವರ ಸಂಬಂಧಿಕರು ನಿರ್ಧಾರಗಳನ್ನು ಕೈಗೊಳ್ಳುವ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸುವುದನ್ನು ಪ್ರಸ್ತಾಪಿಸಲಾಗಿದೆ.
ಆಡಳಿತಾತ್ಮಕ ಸುಧಾರಣೆಗಳ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದ್ದು, ಮೋಸ, ವಂಚನೆ ಎಸಗುವ ನಿರ್ದೇಶಕರುಗಳ ಅನರ್ಹತೆಗೂ ಸರ್ಕಾರ ಮುಂದಡಿ ಇಟ್ಟಿದೆ. ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಸಹಕಾರಿ ಸಂಘಗಳು ಆಡಿಟ್ ಮತ್ತು ನೈತಿಕ ಸಮಿತಿಯನ್ನೂ ರಚಿಸಬೇಕಾಗುತ್ತದೆ ಎಂದು ಅಮಿತ್ ಷಾ ತಮ್ಮ ಸುಧಾರಣಾ ಸಿದ್ಧಾಂತದಲ್ಲಿ ತಿಳಿಸಿದ್ದಾರೆ.
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇಮಕಾತಿಯಲ್ಲಿ ಮತ್ತು ಪ್ರಜಾಸತ್ತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಆಡಳಿತ ಮಂಡಳಿಯ ಸಭೆಗಳಲ್ಲಿ ಕೋರಂ ಇರುವುದನ್ನು ಕಡ್ಡಾಯ ಮಾಡಲಾಗಿದೆ. ಇದರಿಂದ ಸುರಕ್ಷಿತ ಹಣಕಾಸು ಅಭ್ಯಾಸಗಳನ್ನು ರೂಢಿಸಿಕೊಳ್ಳಬಹುದು ಎಂದು ಅಮಿತ್ ತಿಳಿಸಿದ್ದಾರೆ. ಯಾವುದೇ ಸೊಸೈಟಿಗಳಲ್ಲಿ ಮೋಸ, ವಂಚನೆಗಳು ಬೆಳಕಿಗೆ ಬಂದಾಗ ಸಹಕಾರ ಸಂಘಗಳ ಕೇಂದ್ರೀಯ ಉಪನಿಬಂಧಕರು ತನಿಖೆ ಮಾಡುವ ಅವಕಾಶ ನೀಡಲಾಗಿದೆ.
2020-21- 2024-25ರ ಅವಧಿಯಲ್ಲಿ ದೇಶದಲ್ಲಿ ಹೊಸ 6,525 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರಚನೆಯಾಗಿವೆ. ಕೇಂದ್ರ ಸರ್ಕಾರವು 2023ರ ಪೆಬ್ರವರಿಯಲ್ಲಿ ದೇಶದಲ್ಲಿ ಸಹಕಾರ ಚಳುವಳಿಯನ್ನು ಇನ್ನಷ್ಟು ಬಲಪಡಿಸುವ ಮತ್ತು ತಳಮಟ್ಟಕ್ಕೆ ಅದನ್ನು ತಲುಪಿಸುವ ನಿಟ್ಟಿನಲ್ಲಿ ರೂಪಿಸಿದ ಯೋಜನೆಯಂತೆ ಹೊಸ ಸಹಕಾರ ಸಂಘಗಳ ಉಗಮವಾಗಿವೆ ಎಂದು ಅಮಿತ್ ಷಾ ಮಾಹಿತಿ ನೀಡಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com