ಮೂಡುಬಿದಿರೆ: ಶಿರ್ತಾಡಿ ನವಮೈತ್ರಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ 2023-24ನೇ ಸಾಲಿನ ಮಹಾಸಭೆ ಶಿರ್ತಾಡಿಯ ಹೊಟೇಲ್ ಶ್ರೀಬ್ರಹ್ಮ ರೆಸಿಡೆನ್ಸಿ ಸಭಾಂಗಣದಲ್ಲಿ ಜರುಗಿತು.
https://chat.whatsapp.com/Ge11n7QCiMj5QyPvCc0H19
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರಿಯ ಅಧ್ಯಕ್ಷ ಸತೀಶ್ ವಿ.ಶೆಟ್ಟಿ, ಸಹಕಾರಿಯ ಕೇಂದ್ರ ಕಚೇರಿ ಹೊಂದಿರುವ ಮೈತ್ರಿ ಸೌಧ ನೂತನ ಕಟ್ಟಡವನ್ನು 2025ರ ಮಾರ್ಚ್ ತಿಂಗಳಲ್ಲಿ ಉದ್ಘಾಟಿಸುವುದಾಗಿ ತಿಳಿಸಿದರು.
ಕಟ್ಟಡ ಉದ್ಘಾಟನೆ ನಂತರ ಕಾರ್ಕಳ ತಾಲೂಕಿನ ಮುರತ್ತಂಗಡಿ ಮತ್ತು ಇರ್ವತ್ತೂರು, ಬೆಳ್ತಂಗಡಿ ತಾಲೂಕಿನ ಅಂಡಿಂಜೆಯಲ್ಲಿ ನೂತನ ಶಾಖೆಗಳನ್ನು ತೆರೆಯಲು ನಿರ್ಧರಿಸಿರುವುದಾಗಿ ತಿಳಿಸಿದರು.
12 ವರ್ಷಗಳನ್ನು ಪೂರೈಸಿರುವ ಸಹಕಾರಿಯು ಮಾರ್ಚ್ ಅಂತ್ಯಕ್ಕೆ 3387 ಸದಸ್ಯರನ್ನು ಹೊಂದಿದ್ದು, 17.12 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ 14.24 ಕೋಟಿ ಠೇವಣಿ, 13.71 ಕೋಟಿ ಸಾಲ ಮತ್ತು ಮುಂಗಡ ಹೊಂದಿದ್ದು, ವಿವಿಧ ಬ್ಯಾಂಕ್‌ಗಳ ನಿರಖು ಠೇವಣಿಯಲ್ಲಿ 3.80 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ಒಟ್ಟಾರೆ 29.09 ಲಕ್ಷ ರೂ. ಲಾಭ ಗಳಿಸಿರುವ ಸಹಕಾರಿ ಬ್ಯಾಂಕಿಂಗ್ ಸೇವೆಗಳು ಮಾತ್ರವಲ್ಲದೆ ಇ-ಸ್ಟ್ಯಾಂಪಿಂಗ್, ಪಹಣಿ ಪತ್ರ, ಯಶಸ್ವಿನಿ, ಸ್ವಸಹಾಯ ಸಂಘಗಳ ಮೂಲಕ ಜನಸಾಮಾನ್ಯರ ಸಬಲೀಕರಣ ಮುಂತಾದ ಸೌಲಭ್ಯಗಳನ್ನು ಕೂಡ ಜನರಿಗೆ ನೀಡುತ್ತಿದೆ.
ಉಪಾಧ್ಯಕ್ಷ ವಿನಯ ಹೆಗ್ಡೆ, ನಿರ್ದೇಶಕರಾದ ಎಸ್.ಪ್ರವೀಣ್ ಕುಮಾರ್, ಮಹಾವೀರ ಜೈನ್, ಮಹಾವೀರ ಮುದ್ಯ, ಲ್ಯಾನ್ಸಿ ಡೇಸಾ, ಫ್ರಾಂಕಿ ಎಲ್.ಪಿಂಟೋ, ರಕ್ಷಿತ್ ಆರ್., ಅರುಣ್ ಎನ್. ಶೆಟ್ಟಿ, ಸದಾನಂದ ಪೂಜಾರಿ, ಬಬಿತಾ ಆರ್. ಶೆಟ್ಟಿ , ಶಾರದಾ ಸುವರ್ಣ ಸಭೆಯಲ್ಲಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂದೀಪ್ ಜೆ.ಕೆ. ವರದಿ ಮಂಡಿಸಿದರು. ಹೊನ್ನಪ್ಪ ಸ್ವಾಗತಿಸಿ, ರಾಜವರ್ಮ ಜೈನ್ ಧನ್ಯವಾದವಿತ್ತರು. ಶಾಖಾ ವ್ಯವಸ್ಥಾಪಕ ಸತೀಶ್ ಕೆ. ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ಪ್ರಜ್ಬಲ್, ಎಕೌಂಟೆಂಟ್ ಸರಿತಾ ಎನ್. ಶೆಟ್ಟಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com