2023-24ನೇ ಸಾಲಿನಲ್ಲಿ ರೂ. 13,04,029.20 ಲಾಭ
ಕಟೀಲು: ನಂದಿನಿ ಪತ್ತಿನ ಸಹಕಾರ ಸಂಘ (ನಿ) ಕಟೀಲು ಇದರ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ಆಡಳಿತ ಕಚೇರಿಯ ವಠಾರದಲ್ಲಿ ನಡೆಯಿತು.
ಸಾಮಾನ್ಯ ಸಭೆಯ ನೋಟೀಸ್ ಅನ್ನು ಸಂಘದ ಸಿಬ್ಬಂದಿ ಲಾವಣ್ಯ ಓದಿದರು. ಕಳೆದ ಸಾಲಿನ ಮಹಾಸಭೆಯ ನಡವಳಿಕೆಗಳನ್ನು ಸಂಘದ ಹಿರಿಯ ಸಿಬ್ಬಂದಿ ದಿವ್ಯಾ ಡಿ.ಅಮೀನ್ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ಬಬಿತಾ ಎಂ. 2023-24ನೇ ಸಾಲಿನ ಆಡಳಿತ ವರದಿ ಮಂಡಿಸಿದರು. 2024-25ನೇ ಸಾಲಿನ ಬಜೆಟ್ ಮತ್ತು ಕಳೆದ ಸಾಲಿನ ಬಜೆಟ್‌ಗಿಂತ ಹೆಚ್ಚಾದ ಖರ್ಚನ್ನು ಸಂಘದ ಗುಮಾಸ್ತೆ ಲಾವಣ್ಯ ಮಂಡಿಸಿದರು. ಹಿರಿಯ ಗುಮಾಸ್ತೆ ದಿವ್ಯಾ ಡಿ.ಅಮೀನ್ 2024-25ನೇ ಸಾಲಿನ ಕ್ರಿಯಾಯೋಜನೆಗಳನ್ನು ಮಂಡಿಸಿದರು.
https://chat.whatsapp.com/Ge11n7QCiMj5QyPvCc0H19
2023-24ನೇ ಸಾಲಿನ ಲೆಕ್ಕ ಪರಿಶೋಧಿತ ಆರ್ಥಿಕ ತಕ್ತೆಗಳನ್ನು, ನಿವ್ವಳ ಲಾಭದ ವಿಂಗಡಣೆಯನ್ನು ಸಂಘದ ಮುಖ್ಯ ಕಾರ್ಯನಿರ್ವಹಧಿಕಾರಿ ಶಶಿಧರ ಶೆಟ್ಟಿ ಮಂಡಿಸಿದರು. 2023-24ನೇ ಸಾಲಿನಲ್ಲಿ ಸಂಘವು ರೂ. 13,04,029.20 ಲಾಭ ಗಳಿಸಿದ್ದು, ಸಂಘದ ಅಧ್ಯಕ್ಷ ಕೆ.ನೀಲಯ ಕೋಟ್ಯಾನ್ ಶೇಕಡಾ 10 ಡಿವಿಡೆಂಡ್ ಘೋಷಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಮೇಘಶ್ರೀ ಕೊಡೆತ್ತೂರು, ಜಗನ್ನಾಥ ಶೆಟ್ಟಿ ಸಿತ್ಲ ಇವರನ್ನು ಸನ್ಮಾನಿಸಲಾಯಿತು. S.S.L.C ಮತ್ತು P.U.C ಪರೀಕ್ಷೆಯಲ್ಲಿ 90% ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದ 5 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಸಹಕಾರ ಸಂಘದ ಕಾನೂನು ಸಲಹೆಗಾರ ಟಿ.ಗಿರೀಶ್ ಶೆಟ್ಟಿ ಕಾನೂನು ಮಾಹಿತಿ ನೀಡಿದರು.
ನಿರ್ದೇಶಕರಾದ ಗಣೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ಸೀತಾರಾಮ ಬಂಗೇರ, ಪ್ರೇಮರಾಜ ಶೆಟ್ಟಿ, ಜಯ ಡಿ.ಪೂಜಾರಿ, ಗಣೇಶ ಆಚಾರ್ಯ, ವೈಲೆಟ್ ಡಿಸೋಜ, ಲಲಿತಾ, ಬಿ.ಲತಾ, ಅನಿತಾ ಶೆಟ್ಟಿ, ರತ್ನಾ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ಕೆರಮ ಸ್ವಾಗತಿಸಿದರು. ನಿರ್ದೇಶಕರಾದ ರುಕ್ಮಯ ವಂದಿಸಿದರು. ನಿರ್ದೇಶಕ ಅಮರ್ ಪ್ರಸಾದ್ ಮುದಲಾಡಿ ಕಾರ್ಯಕ್ರಮ ನಿರ್ವಹಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com