84.05 ಲಕ್ಷ ರೂ. ಲಾಭ, ಸತತ ಎರಡನೇ ಬಾರಿ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸಾಧನಾ ಪುರಸ್ಕಾರ
ಉಡುಪಿ: ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 27ನೇ ವಾರ್ಷಿಕ ಮಹಾಸಭೆ ಸೋಮವಾರ ಉಡುಪಿ ಶೋಕಮಾತಾ ಚರ್ಚ್‌ನಲ್ಲಿ ಸಂಘದ ಅಧ್ಯಕ್ಷ ಲೂವಿಸ್ ಲೋಬೊ ಅವರ ಅಧ್ಯಕ್ಷತೆಯಲ್ಲಿ ಜರಗಿತು.
https://chat.whatsapp.com/Ge11n7QCiMj5QyPvCc0H19
ಸಂಘದ ಮುಖ್ಯ ಕಾರ್ಯನಿರ್ವಾಹಕ ಸಂದೀಪ್ ಎ.ಫೆರ್ನಾಂಡಿಸ್ ವಾರ್ಷಿಕ ವರದಿ ಮಂಡಿಸಿದರು. ಸಂಘವು 2023-24ನೇ ಸಾಲಿನಲ್ಲಿ ರೂ. 84.05 ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ 17% ಡಿವಿಡೆಂಡ್ ಘೋಷಿಸಲಾಯಿತು. ಲಯನ್ಸ್ ಕ್ಲಬ್ ಉಡುಪಿ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ಅಧ್ಯಕ್ಷರೂ ಆದ ಲೂವಿಸ್ ಲೋಬೊ ಅವರನ್ನು ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 85ಕ್ಕಿಂತ ಹೆಚ್ಚಿನ ಅಂಕವನ್ನು ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ಹಾಗೂ ಅಶಕ್ತರೂ/ಅನಾರೋಗ್ಯ ಪೀಡಿತ 7 ಮಂದಿಗೆ ಮತ್ತು ಮಾನಸ ಪುನರ್ವಸತಿ ಮತ್ತು ನಿರ್ಮಿತಿ ಕೇಂದ್ರ,ಪಾಂಬೂರು ಇವರಿಗೆ ಆರ್ಥಿಕ ಸಹಾಯ ನೀಡಲಾಯಿತು. ಸಂಘವು ಸತತ 2ನೇ ಬಾರಿ ಪ್ರತಿಷ್ಠಿತ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇವರಿಂದ ಗುರುತಿಸಲ್ಪಟ್ಟು ಸ್ವೀಕರಿಸಿದ “ಸಾಧನಾ ಪ್ರಶಸ್ತಿ”ಯನ್ನು ಉಡುಪಿ ಶೋಕಮಾತಾ ಇಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷ ರಾಬರ್ಟ್ ಮ್ಯಾಕ್ಸಿಂ ಡಿಸೋಜ ಸಭೆಯಲ್ಲಿ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಸಂಘದ ಉಪಾಧ್ಯಕ್ಷ ಜೇಮ್ಸ್ ಡಿಸೋಜ ವಂದಿಸಿದರು.
ಸಂಘದ ನಿರ್ದೇಶಕರಾದ ಅಲೋಶಿಯಸ್ ಡಿ ಅಲ್ನೋಡಾ, ಫೆಲಿಕ್ಸ್ ಪಿಂಟೋ, ಇಗ್ನೇಶಿಯಸ್ ಮೋನಿಸ್, ಫ್ರಾಂಕ್ಲಿನ್ ಮಿನೇಜಸ್, ಪರ್ಸಿ ಡಿಸೋಜ, ಆರ್ಚಿಬಾಲ್ಡ್ ಡಿಸೋಜ, ಕೆವಿನ್ ಪಿರೇರಾ, ಜೆಸಿಂತಾ ಡಿಸೋಜ, ಗಿಲ್ಬರ್ಟ್ ಫೆರ್ನಾಂಡಸ್, ನೇರಿ ಕರ್ನಲಿಯೋ, ಲೋಯ್ಲೆಟ್ ಕರ್ನೇಲಿಯೋ, ಶಾಖಾ ವ್ಯವಸ್ಥಾಪಕರಾದ ನೈನಾ ಮಿನೇಜಸ್, ಸುನಿಲ್ ಡಿಸೋಜ, ಜೆನೆಟ್ ಡಿಸೋಜ, ಶೀತಲ್ ಮರಿಯಾ ಡಿಸೋಜ, ಜೋಯ್ಸನ್ ಡಿಸೋಜ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮೈಕಲ್ ಡಿಸೋಜ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು. ಸಂಘವು ಉಡುಪಿ ಯ ಕ್ರಿಸ್ತಜ್ಯೋತಿ ಕಾಂಪ್ಲೆಕ್ಸ್ ನಲ್ಲಿ ಆಡಳಿತ ಕಛೇರಿ ಮತ್ತು ಮುಖ್ಯ ಶಾಖೆಯೊಂದಿಗೆ, ಮಲ್ಪೆ, ಉದ್ಯಾವರ, ಶಿರ್ವ ಮತ್ತು ಹೂಡೆ-ಕೆಮ್ಮಣ್ಣುವಿನಲ್ಲಿ ಶಾಖೆಗಳನ್ನು ಹೊಂದಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com