ದೇಶ ಕಾಯುವ ಯೋಧರಿಗೆ ಲಾಭಾಂಶದ ಒಂದು ಪಾಲು ಘೋಷಣೆ
ಮಂಗಳೂರು: ಸ್ವಸ್ತಿಕ್ ಸೌಹಾರ್ದ ಸೊಸೈಟಿ ಅಳಪೆ ಕರ್ಮಾರ್ ಪಡೀಲ್ ಇದರ ಏಳನೇ ವಾರ್ಷಿಕ ಮಹಾಸಭೆ ಭಾನುವಾರ ಅಳಪೆ ಕರ್ಮಾರ್‌ನ ಮಹಾದೇವಿ ಭಜನಾ ಮಂದಿರದಲ್ಲಿ ನಡೆಯಿತು.
ಸ್ವಸ್ತಿಕ್ ಸೌಹಾರ್ದ ಸೊಸೈಟಿಯ ಅಧ್ಯಕ್ಷ ವಲ್ಸರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶವನ್ನು ಕಾಯುವ ಯೋಧರಿಗಾಗಿ ನಮ್ಮ ಸಂಸ್ಥೆಯ ಲಾಭಾಂಶದ ಒಂದು ಪಾಲು ಮೀಸಲಿಡಲಾಗುವುದು. ದೇಶ ರಕ್ಷಣೆಗೆ ತಮ್ಮ ಪ್ರಾಣವನ್ನೇ ಮೀಸಲಿಡುವ ಯೋಧರಿಗೆ ಹಾಗೂ ಅವರ ಕುಟುಂಬದ ಕಲ್ಯಾಣಕ್ಕಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಚಂದ್ರ ವಾರ್ಷಿಕ ವರದಿ ಮಂಡಿಸಿದರು. ಸಂಸ್ಥೆಯು 28.42.644 ರೂ. ಆದಾಯ ಹೊಂದಿದ್ದು, 16,95,495 ರೂ. ಒಟ್ಟು ವ್ಯವಹಾರ ದಾಖಲಿಸಿದೆ. ಶೇ.7 ಡಿವಿಡೆಂಡ್ ಘೋಷಿಸಲಾಗಿದೆ. ಸಂಸ್ಥೆಯು ಸದಸ್ಯರಿಗೆ ಸರಕಾರಿ ಹಾಗೂ ಸರಕಾರೇತರ ಸೇವೆಯನ್ನು ಸಿಎಸ್‌ಇ-ಇ-ಸರ್ವೀಸ್ ಮೂಲಕ ನೀಡುತ್ತಿದೆ.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.೮೦ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಸಾವನ್ ವಿ.ಶೆಟ್ಟಿ, ಭೂಷಣ್ ಎಚ್, ತ್ವಿಷಾ ಪಾಂಡುರಂಗ, ಸಿಂಚನಾ ಎಸ್.ದಾಸ್, ಮಾನ್ಯ ಎಲ್.ಸುವರ್ಣ, ಟಿ.ಪ್ರಥಮ್ ಎಸ್.ಪೈ, ಅಕ್ಷಿತ್ ರೈ, ಪಿಯುಸಿ ಸಾಧಕರಾದ ನಿಹಾರಿಕಾ, ದೇವಿಕಾ ಎಂ.ಶೆಟ್ಟಿ, ಪ್ರಿಯಾ ಅನ್ಸಿಟಾ ಡಿಸೋಜ, ಚರಿಶ್ಮಾ ತಾರಾನಾಥ್, ಮೆರಿಕ್ ಶರ್ವಿನ್ ಡಿಸೋಜ, ಸಿಂಚನಾ ಜೆ.ಕೋಟ್ಯಾನ್, ಹರ್ಷಿತಾ ಅವರನ್ನು ಗೌರವಿಸಲಾಯಿತು. ನಿರ್ದೇಶಕರಾದ ನಿತಿನ್ ಎ, ವಿಜಯ ಕುಮಾರ್ ಶೆಟ್ಟಿ, ಕೆ.ಪಿ.ಬಾಲಚಂದ್ರ ಪೆರ್ಲ, ದಯಾನಂದ ಹೆಗ್ಡೆ, ತಾರಾನಾಥ ಜಿ.ಪಡೀಲ್, ತಾರಾನಾಥ ಕರ್ಮಾರ್, ರಾಜೇಶ್ ಶೆಟ್ಟಿ ಜಲ್ಲಿಗುಡ್ಡೆ, ರಾಜೇಶ್ ಎಚ್.ಜಲ್ಲಿಗುಡ್ಡೆ, ನಯನಾ ವಸಂತ ಕೊಟ್ಟಾರಿ ಮತ್ತು ಪುಷ್ಪಾ ರಮೇಶ್ ಆಚಾರ್ ಹಾಜರಿದ್ದರು.
ನಿರ್ದೇಶಕ ಕೆ.ಪಿ ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಅಕ್ಷತಾ ಸ್ವಾಗತಿಸಿದರು. ಸವಿತಾ ಡಿ.ಶೆಟ್ಟಿ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com