ಮಂಗಳೂರು: ಜಿಲ್ಲೆಯ ಪ್ರತಿಷ್ಠಿತ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಎರಡನೆಯ ಅವಧಿಗೆ [2024 – 29] ಅಧ್ಯಕ್ಷರಾಗಿ ಎಂ.ಎಸ್.ಗುರುರಾಜ್ ಅವಿರೋಧವಾಗಿ ಪುನರಾಯ್ಕೆಯಾದರು.
ಸಹಕಾರಿಯ ಪ್ರಧಾನ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಹೊಸದಾಗಿ ಆಯ್ಕೆಯಾಗಿದ್ದ ನಿರ್ದೇಶಕರು ಗುರುರಾಜ್ ಅವರನ್ನು ಅಧ್ಯಕ್ಷರನ್ನಾಗಿಯೂ, ಉಪಾಧ್ಯಕ್ಷರಾಗಿ ಉದಯ ವಿ. ಶಾಸ್ತ್ರಿಯವರನ್ನೂ ಆಯ್ಕೆ ಮಾಡಿದರು.
ಮೊದಲ ಅವಧಿಯಲ್ಲೇ ಸಹಕಾರಿಯ ಅಭೂತಪೂರ್ವ ಸಾಧನೆಗೆ ಕಾರಣೀಭೂತರಾದ ಅದರ ಅಧ್ಯಕ್ಷರು ಹಾಗೂ ಸ್ಥಾಪಕರೂ ಆಗಿದ್ದ ಗುರುರಾಜ್ ಅವರಿಗೆ ಎಲ್ಲಾ ನಿರ್ದೇಶಕರೂ ಗೌರವ ಸಲ್ಲಿಸಿದರು. ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಉದಯ ವಿ.ಶಾಸ್ತ್ರಿಯವರರನ್ನೂ ಗೌರವಿಸಲಾಯಿತು.
ಶ್ರೀಶಾ ಸಹಕಾರಿ ಸಂಸ್ಥೆಯು ಸ್ಥಾಪನೆಗೊಂಡ ಕೇವಲ 5 ವರ್ಷಗಳಲ್ಲಿ 5 ಶಾಖೆಗಳನ್ನು ತೆರೆಯಲಾಗಿದ್ದು ಎಲ್ಲಾ ಶಾಖೆಗಳೂ ಲಾಭ ಗಳಿಸುತ್ತಿವೆ ಹಾಗೂ ತನ್ನ ಸದಸ್ಯರಿಗೆ ನಿರಂತರ ಡಿವಿಡೆಂಡ್ ನೀಡುತ್ತಿದೆ. ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನೂ ಮೆರೆಯುತ್ತಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಸಹಸ್ರಾರು ಜನ ಇದರ ಲಾಭ ಪಡೆಯುತ್ತಿದ್ದಾರೆ.
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕರ ಕಚೇರಿಯ ಪದ್ಮಾಕ್ಷಿ ಮಾರ್ಗದರ್ಶನದಲ್ಲಿ ಚುನಾವಣಾ ರಿಟರ್ನಿಂಗ್ ಅಧಿಕಾರಿ ನವೀನ್ ಚುನಾವಣಾ ಕಲಾಪಗಳನ್ನು ನಡೆಸಿಕೊಟ್ಟರು.
2024 – 29ನೆಯ ಅವಧಿಯ ನಿರ್ದೇಶಕ ಮಂಡಳಿ:
ಎಂ.ಎಸ್.ಗುರುರಾಜ್ (ಅಧ್ಯಕ್ಷರು), ಉದಯ ವಿ.ಶಾಸ್ತ್ರಿ (ಉಪಾಧ್ಯಕ್ಷರು)
ನಿರ್ದೇಶಕರು: ಪ್ರಸನ್ನ ಕುಮಾರ್, ಸುರೇಶ್ ಬೈಂದೂರು, ರಾಧಾ, ವತ್ಸಲಾ ಬಾಬು, ರಾಜೇಶ್ ಪೂಂಜಾಲಕಟ್ಟೆ, ರಾಜೇಶ್ ನಾಯರ್, ರವಿಚಂದ್ರ ಭಟ್, ಎಂ.ಎಸ್.ಮಾಧವ, ಅನಿಲ್ ಪ್ರಶಾಂತ್ ಡಿಸೋಜ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಮೇಲ್ ಮಾಡಿ:
ಇಮೇಲ್: sahakaraspandana@gmail.com
ಮಾಹಿತಿಗೆ: 9901319694