Close Menu
    Top News

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪ್ರತಿಷ್ಠಿತ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಎಂ.ಎಸ್.ಗುರುರಾಜ್ ಅವಿರೋಧ ಪುನರಾಯ್ಕೆ
    News

    ಪ್ರತಿಷ್ಠಿತ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಎಂ.ಎಸ್.ಗುರುರಾಜ್ ಅವಿರೋಧ ಪುನರಾಯ್ಕೆ

    adminBy adminAugust 17, 2024

    ಮಂಗಳೂರು: ಜಿಲ್ಲೆಯ ಪ್ರತಿಷ್ಠಿತ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಎರಡನೆಯ ಅವಧಿಗೆ [2024 – 29] ಅಧ್ಯಕ್ಷರಾಗಿ ಎಂ.ಎಸ್.ಗುರುರಾಜ್ ಅವಿರೋಧವಾಗಿ ಪುನರಾಯ್ಕೆಯಾದರು.
    ಸಹಕಾರಿಯ ಪ್ರಧಾನ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಹೊಸದಾಗಿ ಆಯ್ಕೆಯಾಗಿದ್ದ ನಿರ್ದೇಶಕರು ಗುರುರಾಜ್ ಅವರನ್ನು ಅಧ್ಯಕ್ಷರನ್ನಾಗಿಯೂ, ಉಪಾಧ್ಯಕ್ಷರಾಗಿ ಉದಯ ವಿ. ಶಾಸ್ತ್ರಿಯವರನ್ನೂ ಆಯ್ಕೆ ಮಾಡಿದರು.
    ಮೊದಲ ಅವಧಿಯಲ್ಲೇ ಸಹಕಾರಿಯ ಅಭೂತಪೂರ್ವ ಸಾಧನೆಗೆ ಕಾರಣೀಭೂತರಾದ ಅದರ ಅಧ್ಯಕ್ಷರು ಹಾಗೂ ಸ್ಥಾಪಕರೂ ಆಗಿದ್ದ ಗುರುರಾಜ್ ಅವರಿಗೆ ಎಲ್ಲಾ ನಿರ್ದೇಶಕರೂ ಗೌರವ ಸಲ್ಲಿಸಿದರು. ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಉದಯ ವಿ.ಶಾಸ್ತ್ರಿಯವರರನ್ನೂ ಗೌರವಿಸಲಾಯಿತು.

    https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK

    ಶ್ರೀಶಾ ಸಹಕಾರಿ ಸಂಸ್ಥೆಯು ಸ್ಥಾಪನೆಗೊಂಡ ಕೇವಲ 5 ವರ್ಷಗಳಲ್ಲಿ 5 ಶಾಖೆಗಳನ್ನು ತೆರೆಯಲಾಗಿದ್ದು ಎಲ್ಲಾ ಶಾಖೆಗಳೂ ಲಾಭ ಗಳಿಸುತ್ತಿವೆ ಹಾಗೂ ತನ್ನ ಸದಸ್ಯರಿಗೆ ನಿರಂತರ ಡಿವಿಡೆಂಡ್ ನೀಡುತ್ತಿದೆ. ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನೂ ಮೆರೆಯುತ್ತಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಸಹಸ್ರಾರು ಜನ ಇದರ ಲಾಭ ಪಡೆಯುತ್ತಿದ್ದಾರೆ.

    ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕರ ಕಚೇರಿಯ ಪದ್ಮಾಕ್ಷಿ ಮಾರ್ಗದರ್ಶನದಲ್ಲಿ ಚುನಾವಣಾ ರಿಟರ್ನಿಂಗ್ ಅಧಿಕಾರಿ  ನವೀನ್ ಚುನಾವಣಾ ಕಲಾಪಗಳನ್ನು ನಡೆಸಿಕೊಟ್ಟರು.

    2024 – 29ನೆಯ ಅವಧಿಯ ನಿರ್ದೇಶಕ ಮಂಡಳಿ:

    ಎಂ.ಎಸ್.ಗುರುರಾಜ್ (ಅಧ್ಯಕ್ಷರು), ಉದಯ ವಿ.ಶಾಸ್ತ್ರಿ (ಉಪಾಧ್ಯಕ್ಷರು)
    ನಿರ್ದೇಶಕರು: ಪ್ರಸನ್ನ ಕುಮಾರ್, ಸುರೇಶ್ ಬೈಂದೂರು, ರಾಧಾ, ವತ್ಸಲಾ ಬಾಬು, ರಾಜೇಶ್ ಪೂಂಜಾಲಕಟ್ಟೆ, ರಾಜೇಶ್ ನಾಯರ್, ರವಿಚಂದ್ರ ಭಟ್, ಎಂ.ಎಸ್.ಮಾಧವ, ಅನಿಲ್ ಪ್ರಶಾಂತ್ ಡಿಸೋಜ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಮೇಲ್ ಮಾಡಿ:
    ಇಮೇಲ್: sahakaraspandana@gmail.com
    ಮಾಹಿತಿಗೆ: 9901319694

    Chitharanjan Bolar Cooperative Cooperative Registrar M S Gururaj Sahakara Spandana Shreesha Souharda Co Operative Society Souharda Sahakari Spandana Cooperative Spandana Trust
    Previous Articleಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಸರ್ವತೋಮುಖ ಪ್ರಗತಿಗೆ ಪುರಸ್ಕಾರ
    Next Article ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್‌ ಜನಸ್ನೇಹಿ ಸೇವೆ

    Related Posts

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.