Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಕೆಲವೇ ಗಂಟೆಯಲ್ಲಿ ಇನ್ಮುಂದೆ ಚೆಕ್‌ ಕ್ಲಿಯರೆನ್ಸ್‌
    News

    ಕೆಲವೇ ಗಂಟೆಯಲ್ಲಿ ಇನ್ಮುಂದೆ ಚೆಕ್‌ ಕ್ಲಿಯರೆನ್ಸ್‌

    adminBy adminAugust 9, 2024

    ವಿಲೇವಾರಿ ತ್ವರಿತಗೊಳಿಸಲು ಆರ್‌ಬಿಐ ಕ್ರಮ

    ನವದೆಹಲಿ: ಹಣಕಾಸಿಗೆ ಸಂಬಂಧಿಸಿ ಮಹತ್ವದ ಕ್ರಮವೊಂದನ್ನು ಘೋಷಿಸಿರುವ ಆರ್‌ಬಿಐ ಇನ್ಮುಂದೆ ಕೆಲವೇ ಗಂಟೆಗಳಲ್ಲಿ ಚೆಕ್‌ ಕ್ಲಿಯರೆನ್ಸ್‌ಗೆ ಅವಕಾಶ ನೀಡಿದೆ.

    ಮುಂದೆ ಚೆಕ್‌ ಕ್ಲಿಯರೆನ್ಸ್‌ಗೆ ಎರಡು –ಮೂರು ದಿನ ಕಾಯಬೇಕಿಲ್ಲ. ಕೆಲವೇ ಗಂಟೆಗಳಲ್ಲಿ ಹಾಕಿದ ಚೆಕ್‌ ಕ್ಲಿಯರ್‌ ಆಗಿ ಚೆಕ್‌ನ ಮೊತ್ತ ಬ್ಯಾಂಕ್‌ಗೆ ಜಮಾ ಆಗಲಿದೆ. ಈ ಹೊಸ ವ್ಯವಸ್ಥೆಯನ್ನು ಆರ್‌ಬಿಐ ಗುರುವಾರ ಘೋಷಣೆ ಮಾಡಿದೆ.

    ಪ್ರಸ್ತುತ ಬ್ಯಾಚ್‌ ಪ್ರೊಸೆಸಿಂಗ್‌ ಮಾದರಿಯಲ್ಲಿ ಚೆಕ್‌ ಪ್ರಾಸೆಸಿಂಗ್‌ ಮಾದರಿಯಲ್ಲಿ ಚೆಕ್‌ ಟ್ರಂಕೇಶನ್‌ ಸಿಸ್ಟಮ್‌ ಮೂಲಕ ಚೆಕ್‌ ನಗದು ಆಗುವ ಪ್ರಕ್ರಿಯೆ ನಡೆಯುತ್ತಿತ್ತು. ಇದಕ್ಕೆ ಕನಿಷ್ಠ ಎರಡು ದಿನಗಳ ಪ್ರಕ್ರಿಯೆ ಬೇಕಿತ್ತು. ಇದರ ಬದಲಿಗೆ ಚೆಕ್‌ ಹಾಕಿದ ಕೂಡಲೇ ಮಾದನ್ನು ನಗದಾಗಿ ಪರಿವರ್ತಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು. ಈ ವ್ಯವಸ್ಥೆ ಜಾರಿಯಾದರೆ ಚೆಕ್‌ ಹಾಕಿದ ಕೆಲವೇ ಗಂಟೆಗಳಲ್ಲಿ ಅದರ ವಿಲೇವಾರಿ ಆಗಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಮಾಹಿತಿ ನೀಡಿದ್ದಾರೆ.

    https://chat.whatsapp.com/Ge11n7QCiMj5QyPvCc0H19

    ರೆಪೋ ದರ ಯಥಾಸ್ಥಿತಿ

    ಸತತ ಒಂಬತ್ತನೇ ಬಾರಿ ರೆಪೋ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿದೆ. ಆಹಾರ ಹಣದುಬ್ಬರ ಇಳಿಕೆಯಾಗದೆ ಇರುವ ಕಾರಣಕ್ಕೆ ಬಡ್ಡಿ ದರವನ್ನು ಈಗಿರುವ ಶೇ. 6.5ರ ಪ್ರಮಾಣದಲ್ಲೇ ಇರಿಸಲು ನಿರ್ಧರಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಮಾಹಿತಿ ನೀಡಿದ್ದಾರೆ.

    ಆರ್‌ಬಿಐನ ಈ ನೀತಿಯಿಂದಾಗಿ ಗೃಹ ಸಾಲದ ಬಡ್ಡಿ ದರ ಹಾಗೆಯೇ ಉಳಿಯಲಿದ್ದು, ಮಾಸಿಕ ಕಂತುಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಗೃಹ ಸಾಲದ ಬಡ್ಡಿ ದರ ಹಾಗೂ ಮಾಸಿಕ ಇಎಂಐ ಕಂತುಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಜೂನ್‌ನಲ್ಲಿ ನಡೆದಿದ್ದ ಹಿಂದಿನ ಸಭೆಯಲ್ಲಿಯೂ ಬಡ್ಡಿ ದರಗಳನ್ನು ಹೆಚ್ಚಿಸಿರಲಿಲ್ಲ. ಈ ಹಿಂದೆ 2023ರ ಫೆಬ್ರವರಿಯಲ್ಲಿ ಕೊನೇಯ ಬಾರಿ ಆರ್‌ಬಿಐ ಬಡ್ಡಿ ದರವನ್ನು ಶೇ.0.25ರಷ್ಟು ಹೆಚ್ಚಿಸಿ, ಶೇ.6.5ಕ್ಕೆ ತಂದಿತ್ತು.

    ಒಂದು ಖಾತೆಯಿಂದ ಇಬ್ಬರಿಗೆ ಯುಪಿಐ ಪಾವತಿ

    ಇನ್ನೊಂದು ಮಹತ್ವದ ಹಣಕಾಸು ವಲಯದ ಕ್ರಮದಲ್ಲಿ ಆರ್‌ಬಿಐ ಒಂದು ಖಾತೆಯಿಂದ ಇಬ್ಬರಿಗೆ ಯುಪಿಐ ಪಾವತಿಯ ಅವಕಾಶ ನೀಡಿದೆ. ಯುಪಿಐ ಬಳಕೆದಾರರು ತಮ್ಮ ಖಾತೆ ಮೂಲಕ ವಹಿವಾಟು ಮಾಡುವ ಅಧಿಕಾರವನ್ನು ಮತ್ತೊಬ್ಬರಿಗೆ ನೀಡಲು ಸಾಧ್ಯವಾಗಲಿದ್ದು, ಒಂದೇ ಬ್ಯಾಂಕ್‌ ಖಾತೆಯ ಮೂಲಕ ಇಬ್ಬರು ವ್ಯಕ್ತಿಗಳು ಪಾವತಿ ಮಾಡಬಹುದು. ಡಿಜಿಟಲ್‌ ಪಾವತಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆರ್‌ಬಿಐ ಡೆಲಿಗೇಟೆಡ್‌ ಪೇಮೆಂಟ್ಸ್‌ ಸೌಲಭ್ಯ ಪರಿಚಯಿಸಿದೆ. ಈ ಮೂಲಕ ಪ್ರಾಥಮಿಕ ಬಳಕೆದಾರರು ತಮ್ಮ ಖಾತೆಯ ಮೂಲಕವೇ ನಿಗದಿತ ಮೊತ್ತದವರೆಗೂ ದ್ವಿತೀಯ ಬಳಕೆದಾರರಿಗೆ ಯುಪಿಐ ವಹಿವಾಟು ನಡೆಸಲು ಅವಕಾಶ ಸಾಧ್ಯವಾಗಲಿದೆ.  ಈ ವ್ಯವಸ್ಥೆಯಲ್ಲಿ ದ್ವಿತೀಯ ಬಳಕೆದಾರರು ಯುಪಿಐ ಸಂಪರ್ಕಿತ ಹೊಂದಿರಬೇಕಿಲ್ಲವೆಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ತಿಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನ ಪ್ರತ್ಯೇಕ ಖಾತೆ ಹೊಂದಿರುವುದಿಲ್ಲ. ಕುಟುಂಬದ ಒಬ್ಬರ ಹೆಸರಿನಲ್ಲಿ ಬ್ಯಾಂಕ್‌ ಖಾತೆ ಇರುತ್ತದೆ. ಅವರಿಗೆ ಈ ವ್ಯವಸ್ಥೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

     

    Amith Shah Central Budget CHEQUE Cooperative Cooperative Department RBI REPO RATE Sahakara Spandana Shakhtikanth das Souharda Sahakari Spandana Cooperative Spandana Trust UPI
    Previous Articleಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ ಸಂವಿಧಾನಬಾಹಿರ
    Next Article ನೂತನ ಸಹಕಾರ ನೀತಿಯಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ತಂತ್ರಜ್ಞಾನದ ಅಳವಡಿಕೆ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.