ಕೃಷಿ ಕ್ಷೇತ್ರ, ಯುವಕರಿಗೆ ಕೊಡುಗೆಗಳ ಮಹಾಪೂರ
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿರುವ ಬಜೆಟ್‌ನಲ್ಲಿ ರಾಷ್ಟ್ರೀಯ ಸಹಕಾರಿ ನೀತಿಯ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ ಇದರ ರೂಪುರೇಷೆ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗಿಲ್ಲ.
ಈ ಮಧ್ಯೆ ಆಂಧ್ರಪ್ರದೇಶ ಮತ್ತು ಬಿಹಾರದ ಸರ್ವತೋಮುಖ ಬೆಳವಣಿಗೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಅಲ್ಲದೆ ಕೃಷಿ ಕ್ಷೇತ್ರ ಮತ್ತು ಯುವಜನಾಂಗದ ಮೇಲೆ ವಿಶೇಷ ಕೊಡುಗೆ ಪ್ರಕಟಿಸಲಾಗಿದ್ದು ಗ್ರಾಮೀಣಾಭಿವೃದ್ಧಿಗೂ ೨.೬೬ ಲಕ್ಷ ಕೋಟಿ ರೂ. ಘೋಷಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಸಿಗಡಿ ಸಾಕಾಣೆ ಮ್ತು ಅದರ ಮಾರುಕಟ್ಟೆಗೆ ಸಂಬಂಧಿಸಿ ಹಣಕಾಸು ಒದಗಿಸುವ ಯೋಜನೆ ಪ್ರಕಟಿಸಿದೆ.
ಉದ್ಯೋಗ ಹುಡುಕುವವರಿಗೆ ಬಂಪರ್ ಉಡುಗೊರೆ
ಸರ್ಕಾರದ 9 ಆದ್ಯತೆಗಳಲ್ಲಿ ಒಂದು ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ. ಇದರ ಅಡಿಯಲ್ಲಿ, ಮೊದಲ ಬಾರಿಉದ್ಯೋಗಾಕಾಂಕ್ಷಿಗಳಾಗಿರುವವರಿಗೆ ನೆರವು ದೊರೆಯಲಿದೆ. ಔಪಚಾರಿಕ ವಲಯದಲ್ಲಿ ಮೊದಲ ಬಾರಿ ಉದ್ಯೋಗ ಆರಂಭಿಸುವವರಿಗೆ ಒಂದು ತಿಂಗಳ ವೇತನವನ್ನು ಸರ್ಕಾರದ ವತಿಯಿಂದ ನೀಡಲಾಗುವುದು. ಈ ವೇತನವನ್ನು ನೇರ ನಗದು ವರ್ಗಾವಣೆ ಮೂಲಕ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಗರಿಷ್ಠ ಮೊತ್ತ 15 ಸಾವಿರ ರೂ. ಇಪಿಎಫ್ಒನಲ್ಲಿ ನೋಂದಾಯಿಸಲ್ಪಟ್ಟವರು ಈ ಭತ್ಯೆ ಪಡೆಯಲಿದ್ದಾರೆ. ಅರ್ಹತೆಯ ಮಿತಿ ತಿಂಗಳಿಗೆ 1 ಲಕ್ಷ ರೂ. ಇದರಿಂದ 2.10 ಕೋಟಿ ಯುವಕರಿಗೆ ಅನುಕೂಲವಾಗಲಿದೆ.
ಬಜೆಟ್ ಪ್ರಮುಖ ಅಂಶಗಳು
-
ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶಗಳ ಅಭಿವೃದ್ಧಿಗೆ ಪೂರ್ವೋದಯ ಯೋಜನೆ
-
ಈಶಾನ್ಯ ರಾಜ್ಯಗಳಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ 100ಕ್ಕೂ ಹೆಚ್ಚು ಶಾಖೆಗಳ ಸ್ಥಾಪನೆ
-
ಸರ್ಕಾರಿ ರಾಷ್ಟ್ರೀಯ ಸಹಕಾರ ನೀತಿ
-
ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ.
-
ಆಂಧ್ರಪ್ರದೇಶಕ್ಕೆ 15,000 ಕೋಟಿ ರೂಪಾಯಿ ಆರ್ಥಿಕ ನೆರವು
-
ಪೂರ್ವ ಪ್ರದೇಶದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸುವ ಪ್ರಸ್ತಾವನೆ
-
26,000 ಕೋಟಿ ರೂ. ವೆಚ್ಚದಲ್ಲಿ ಪಾಟ್ನಾ-ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ, ಬಕ್ಸಾರ್-ಭಾಗಲ್ಪುರ್ ಹೆದ್ದಾರಿ, ಬೋಧಗಯಾ-ರಾಜ್‌ಗೀರ್-ವೈಶಾಲಿ-ದರ್ಭಾಂಗ ಮತ್ತು ಬಕ್ಸಾರ್‌ನಲ್ಲಿ ಗಂಗಾ ನದಿಯ ಮೇಲೆ ಹೆಚ್ಚುವರಿ ದ್ವಿಪಥ ಸೇತುವೆಯ ಅಭಿವೃದ್ಧಿ
-
ಔಪಚಾರಿಕ ವಲಯಗಳಲ್ಲಿ ಕೆಲಸ ಮಾಡಲು ಬರುವ ಹೊಸಬರಿಗೆ ಸರ್ಕಾರದಿಂದ ಒಂದು ತಿಂಗಳ ವೇತನ, ಇಪಿಎಫ್‌ಒದಲ್ಲಿ ಮೊದಲ ಬಾರಿ ನೋಂದಾಯಿಸಿದ ಉದ್ಯೋಗಿಗಳಿಗೆ 3 ಕಂತುಗಳಲ್ಲಿ ನೇರ ನಗದು ವರ್ಗಾವಣೆಯಡಿಯಲ್ಲಿ 15,000 ರೂ ತನಕ ನೀಡುವ ಯೋಜನೆ ಪ್ರಕಟ
-
ಹವಾಮಾನ ಸ್ನೇಹಿ ಬೀಜಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದಿಂದ ಖಾಸಗಿ ವಲಯ, ತಜ್ಞರು ಮತ್ತು ಇತರರಿಗೆ ಹಣ ನೀಡುವುದು
-
ಉದ್ಯೋಗ ಮಾರುಕಟ್ಟೆ ಪ್ರವೇಶಿಸುವ 30 ಲಕ್ಷ ಯುವಕರಿಗೆ ಒಂದು ತಿಂಗಳ ಪಿಎಫ್ ಕೊಡುಗೆ
-
ಸಗಡಿ ಸಾಕಾಣಿಕೆ ಮತ್ತು ಮಾರುಕಟ್ಟೆಗೆ ಹಣಕಾಸು
-
ಎನ್ಡಿಎ ಮಿತ್ರಪಕ್ಷಗಳ ರಾಜ್ಯಗಳಾದ ಆಂಧ್ರಪ್ರದೇಶ, ಬಿಹಾರಗಳಿಗೆ ಆದ್ಯತೆ, ಬಿಹಾರದಲ್ಲಿ ನೂತನ ವಿಮಾನ ನಿಲ್ದಾಣ, ವೈದ್ಯಕೀಯ ಕಾಲೇಜು ನಿರ್ಮಾಣ, ಆಂಧ್ರಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೂ ನೆರವು
-
ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM JANMAN) ಅಡಿಯಲ್ಲಿ ಸ್ಯಾಚುರೇಶನ್ ಅಭಿಯಾನ
-
ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ 10 ಲಕ್ಷ ರೂ. ವರೆಗೆ ಸಾಲ ಸೌಲಭ್ಯ
ಎಸ್ಸಿ, ಎಸ್ಟಿ, ಕುಶಲಕರ್ಮಿಗಳಿಗೆ ವಿಶೇಷ ಯೋಜನೆ, ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ 10 ಲಕ್ಷ ರೂ. ವರೆಗೆ ಸಾಲ