ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ, ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಇವುಗಳ ಸಹಯೋಗದೊಂದಿಗೆ ಗ್ರಾಹಕರಿಗಾಗಿ “ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆ ಅಭಿಯಾನ”ಕ್ಕೆ ಗುರುವಾರ ಶ್ರೀಶಾ ಸೊಸೈಟಿಯ ಹಂಪನಕಟ್ಟೆ ಶಾಖೆಯಲ್ಲಿ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ನಂಜನ ಗೌಡ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀಶಾ ಸೊಸೈಟಿ ಗ್ರಾಹಕರಿಗೆ ನೀಡುತ್ತಿರುವ ಈ ಅಪಘಾತ ವಿಮಾ ಯೋಜನೆ ಅತ್ಯಂತ ಅವಶ್ಯಕವಾಗಿದ್ದು, ಅತ ಕಡಿಮೆ ಪ್ರೀಮಿಯಂ ಜೊತೆಗೆ ಅನೇಕ ಸವಲತ್ತುಗಳನ್ನು ಒಳಗೊಂಡಿದೆ. ಶ್ರೀಶಾ ಸೊಸೈಟಿ ಈ ರೀತಿಯ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮಾದರಿಯಾಗಿದೆ. ಈ ವಿಮಾ ಯೋಜನೆಯನ್ನು ರಾಜ್ಯದ ಸೌಹಾರ್ದ ಸಹಕಾರಿಗಳಿಗೆ ಪರಿಚಯಿಸುವುದಾಗಿ ಹೇಳಿದರು.
ಮುಖ್ಯ ಅತಿಥಿ ಮಂಗಳೂರು ವಿಭಾಗದ ಹಿರಿಯ ಸೂಪರಿಂಟೆಂಡೆಂಟ್ ಆಫ್ ಪೋಸ್ಟ್ ಆಫೀಸಸ್ ಎಂ.ಸುಧಾಕರ್ ಮಲ್ಯ ಮಾತನಾಡಿ, ಶ್ರೀಶಾ ಸೊಸೈಟಿಯ ಈ ಸಹಕಾರಕ್ಕೆ ಮತ್ತು ವಿನೂತನ ಕಾರ್ಯಗಳಿಗೆ ಸಂತಸ ವ್ಯಕ್ತಪಡಿಸಿ, ಪೋಸ್ಟ್ ಆಫೀಸಿನಲ್ಲಿ ದೊರೆಯುವ ಅನೇಕ ಸವಲತ್ತುಗಳ ಬಗ್ಗೆ ಮಾಹಿತಿ ಮತ್ತು ಈ ಅಪಘಾತ ವಿಮೆಯ ಬಗ್ಗೆ ವಿವರಗಳನ್ನು ನೀಡಿದರು.
ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯ ನಿರ್ದೇಶಕಿ ಭಾರತಿ ಎಂ.ಭಟ್ ಶುಭ ಹಾರೈಸಿದರು. ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯ ಮೈಸೂರು ವಿಭಾಗಾಧಿಕಾರಿ ಗುರುಪ್ರಸಾದ್ ಬಂಗೇರ ಉಪಸ್ಥಿತರಿದ್ದರು. ಶ್ರೀಶಾ ಸೊಸೈಟಿ ಅಧ್ಯಕ್ಷ ಎಂ.ಎಸ್.ಗುರುರಾಜ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸೊಸೈಟಿಯ ನಿರ್ದೇಶಕ ಪ್ರಸನ್ನ ಕುಮಾರ್ ವಂದಿಸಿದರು.
ಅಂಚೆ ಕಚೇರಿಯ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆಯ ವಿವರ
* 749 ರೂ.ಗಳಿಗೆ [GST ಸೇರಿ] 15 ಲಕ್ಷಗಳ ಎಲ್ಲಾ ರೀತಿಯ ಅಪಘಾತಗಳಿಗೆ ವಿಮೆ.
ಅಪಘಾತದಲ್ಲಿ ಸಾವು ಸಂಭವಿಸಿದರೆ/ಶಾಶ್ವತ ಭಾಗಶಃ ಅಥವಾ ಸಂಪೂರ್ಣ ವೈಕಲ್ಯಕ್ಕೆ 15 ಲಕ್ಷ.
ಒಳರೋಗಿ ವೆಚ್ಚ: 60000 ರೂಪಾಯಿಗಳು.
ಆಕಸ್ಮಿಕ ಆಸ್ಪತ್ರೆ ನಗದು: 10 ದಿನಗಳವರೆಗೆ ದಿನಕ್ಕೆ 1000/- ರೂ.ನಂತೆ 10000/-
ಹೊರರೋಗಿ ವೆಚ್ಚ: ರೂ.30000/- ವರೆಗೆ.
ಅಂತಿಮ ಸಂಸ್ಕಾರಕ್ಕೆ: ರೂ.5000/-.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಿ:
Email: sahakaraspandana@gmail.com
ಮಾಹಿತಿಗೆ: 9901319694.