Close Menu
    Top News

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರಿ ಕ್ಷೇತ್ರ ದೇಶದ ಆರ್ಥಿಕತೆಯ ಬಲಶಾಲಿ ಸ್ತಂಭ
    News

    ಸಹಕಾರಿ ಕ್ಷೇತ್ರ ದೇಶದ ಆರ್ಥಿಕತೆಯ ಬಲಶಾಲಿ ಸ್ತಂಭ

    adminBy adminJuly 8, 2024

    ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಆಶಯ
    ಅಂತಾರಾಷ್ಟ್ರೀಯ ಸಹಕಾರ ದಿನ ಪ್ರಯುಕ್ತ ಸಹಕಾರದಿಂದ ಸಮೃದ್ಧಿ ಕಾರ್ಯಕ್ರಮ ಆಯೋಜನೆ

    ಅಹಮದಾಬಾದ್‌: ಸಹಕಾರಿ ಕ್ಷೇತ್ರವನ್ನು ದೇಶದ ಆರ್ಥಿಕತೆಯ ಅತ್ಯಂತ ಬಲವಾದ ಸ್ತಂಭವನ್ನಾಗಿ ಮಾಡಿ ಅಭಿವೃದ್ಧಿಶೀಲ ಭಾರತದ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಆಶಯ ವ್ಯಕ್ತಪಡಿಸಿದರು.
    ಅಂತಾರಾಷ್ಟ್ರೀಯ ಸಹಕಾರ ದಿನದ ಪ್ರಯುಕ್ತ ಶನಿವಾರ ಗುಜರಾತ್‌ನ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ಆಯೋಜಿಸಿದ ‘ಸಹಕಾರದಿಂದ ಸಮೃದ್ಧಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸಹಕಾರಿ ಸಂಸ್ಥೆಗಳು ಮೆಕ್ಕಜೋಳವನ್ನು ಎಂ.ಎಸ್.ಪಿ.ಯಲ್ಲಿ ಖರೀದಿಸಲಿವೆ ಮತ್ತು ಅದರಿಂದ ಎಥೆನಾಲ್ ಉತ್ಪಾದನೆ ಮಾಡಲಾಗುವುದು ಎಂದರು.

    ಗುಜರಾತ್‌ ಮುಖ್ಯಮಂತ್ರಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕೇಂದ್ರ ಸಹಕಾರ ಸಚಿವ ಶ್ರೀ ಅಮಿತ್ ಶಾ ಸಹಕಾರಿ ಕ್ಷೇತ್ರದಲ್ಲಿ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮಂತ್ರವನ್ನು ಸಾಕಾರಗೊಳಿಸಿದ್ದಾರೆ. ಗುಜರಾತಿನಲ್ಲಿ ಸಹಕಾರಿ ಸಂಸ್ಥೆಗಳು ವೈದ್ಯಕೀಯ ಕಾಲೇಜುಗಳಿಂದ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಂತಹ ಸೇವಾ ಕಾರ್ಯಗಳಲ್ಲಿ ಸಹಾಯ ಮಾಡುತ್ತಿದೆ. ಗುಜರಾತಿನಲ್ಲಿ ಸಹಕಾರಿ ಆಧಾರದ ಮೇಲೆ ಪ್ರಾಕೃತಿಕ ಕೃಷಿಯನ್ನು ಅಭಿವೃದ್ಧಿಪಡಿಸಲು 400 ಕ್ಕೂ ಹೆಚ್ಚು ಪ್ರಾಕೃತಿಕ ಕೃಷಿ ಸಹಕಾರಿ ಮಂಡಳಿಗಳನ್ನು ನಿರ್ವಹಿಸುತ್ತಿವೆ ಪ್ರಧಾನಮಂತ್ರಿ ಅವರ ‘ವಿಕಸಿತ ಭಾರತ@2047’ರ ಆಹ್ವಾನವನ್ನು ಸಹಕಾರಿ ಕ್ಷೇತ್ರ ‘ಸಹಕಾರದಿಂದ ಸಮೃದ್ಧಿ’ಯ ಮಂತ್ರದೊಂದಿಗೆ ಯಶಸ್ವಿ ಮಾಡಲಿದೆ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಕೇಂದ್ರ ಸಹಕಾರ ರಾಜ್ಯ ಸಚಿವ ಮುರಲೀಧರ್ ಮೊಹೋಲ್ ಮತ್ತು ಗುಜರಾತಿನ ಸಹಕಾರ ಸಚಿವ ಜಗದೀಶ ವಿಶ್ವಕರ್ಮ ಮತ್ತಿತರ ಸಹಕಾರಿ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.

    ಗುಜರಾತ್‌ ಸರ್ಕಾರವು ರೈತರಿಗೆ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ. ಖರೀದಿಯಲ್ಲಿ 50% ವಿಶೇಷ ಸಹಾಯವನ್ನು ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಪರಂಪರೆಯ ಯೂರಿಯಾದ ಬದಲು ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ (ದ್ರವ) ಬಳಕೆ ಮಾಡುವ ಮೂಲಕ ಯೂರಿಯಾದ ಬಳಕೆ ಕಡಿಮೆ ಮಾಡಬಹುದು. ಇದು ಬೆಳೆ ಮತ್ತು ಭೂಮಿಯ ಗುಣಮಟ್ಟದ ಜೊತೆಗೆ ಮಾನವನ ಆರೋಗ್ಯದಲ್ಲೂ ಸುಧಾರಣೆ ತರುತ್ತದೆ. ಸಹಕಾರಿ ಸಂಸ್ಥೆಗಳ ನಡುವೆ ಸಹಕಾರವನ್ನು ಉತ್ತೇಜಿಸಲು ಸಹಕಾರ ಕ್ಷೇತ್ರದ ಸಂಪೂರ್ಣ ಆರ್ಥಿಕ ವ್ಯವಹಾರವನ್ನು ಸಹಕಾರಿ ಕ್ಷೇತ್ರದಲ್ಲಿಯೇ ಮಾಡವಂತಾಗಬೇಕು.
    ಅಮಿತ್‌ ಶಾ
    ಕೇಂದ್ರ ಗೃಹ, ಸಹಕಾರ ಸಚಿವ

    ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಮೇಲ್ ಮಾಡಿ:
    ಇಮೇಲ್:   sahakaraspandana@gmail.com
    ಮಾಹಿತಿಗೆ ಸಂಪರ್ಕಿಸಿ: 9901319694.
    Amith Shah Bhupedra Patel Cooperative International Co operatvie Day Narendra Modi Sahakara Spandana Spandana Cooperative
    Previous Articleಐವನ್ ಡಿಸೋಜ, ಸ್ಟ್ಯಾನಿ, ಉಮರ್‌ಗೆಗೆ ಎಂಸಿಸಿ ಬ್ಯಾಂಕ್ ಗೌರವ ಸನ್ಮಾನ
    Next Article MCC Bank honors Ivan D’Souza, Stani, Umar U.H

    Related Posts

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.