ದೇಶ ಕಂಡ ಅಪ್ರತಿಮ ಶಿಕ್ಷಕ, ರಾಷ್ಟ್ರ ಸಂತ, ವಿದ್ವಾಂಸ, ಶಿಕ್ಷಣ ತಜ್ಞ, ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ. ಎ.ಪಿ ಜೆ ಅಬ್ದುಲ್ ಕಲಾಂ ಅವರ ಜನ್ಮದಿನ ಇಂದು.
ಈ ದೇಶದ ಎಲ್ಲ ನಾಗರಿಕರಿಗೆ ಮುಖ್ಯವಾಗಿ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಆದರ್ಶವಾಗಿರುವ ಮೇರು ವ್ಯಕ್ತಿತ್ವ ಹೊಂದಿರುವ ನಮ್ಮ ಹೆಮ್ಮೆಯ ಮಾಜಿ ರಾಷ್ಟ್ರಪತಿಯವರ ಹುಟ್ಟಿದ ದಿನ ಒಂದು ರಾಷ್ಟ್ರೀಯ ಹಬ್ಬದಂತೆ ನಾಡೆಲ್ಲಾ ಆಚರಿಸಬೇಕಿತ್ತು!
ಭಾರತ ಚಂದ್ರನ ಅಂಗಳದಲ್ಲಿ ಧ್ವಜವನ್ನು ಹಾರಿಸಿರುವ ಈ ಸಂದರ್ಭದಲ್ಲಿ ದೇಶದ ವೈಜ್ಞಾನಿಕ ಬೆಳವಣಿಗೆಗೆ ತಳಹದಿಯನ್ನು ಹಾಕಿಕೊಟ್ಟ, ಭವ್ಯ- ನವ ಭಾರತದ ಕಲ್ಪನೆಯನ್ನು ಬಿತ್ತಿದ ಆ ರಾಷ್ಟ್ರಸಂತನ ಜನ್ಮ ದಿನ ಕೇವಲ ಒಂದು ಶುಭಾಶಯದ ಸಂದೇಶದಲ್ಲಿ ಮುಗಿಸಬೇಕಾಗಿ ಬಂದದ್ದು ನೋವಿನ ಸಂಗತಿ!
ಇಂದಿನ ವಿಧ್ಯಾರ್ಥಿ ಸಮೂಹ ಅರಿಯ-ತಿಳಿಯ ಬೇಕಾದದ್ದು ಈ ಮಹಾತ್ಮನ ಜೀವನ ಗಾಥೆಯನ್ನು.
ಬಹುಶ ಈ ಮಹಾತ್ಮನ ಹೆಸರಿನಲ್ಲಿ ಯಾವುದೆ ಒಟ್ ಬ್ಯಾಂಕ್ (Vote Bank) ರಾಜಕೀಯಕ್ಕೆ ಅವಕಾಶ ಇಲ್ಲದಿರುವ ಕಾರಣ ಇರಬಹುನೋ ಈ ಪುಣ್ಯ ದಿನ ಮರೆತು ಹೋದದ್ದು!
– ಎಸ್ ಆರ್ ಹರೀಶ್ ಆಚಾರ್ಯ,
ಮಾಜಿ ಸಿಂಡಿಕೇಟ್ ಸದಸ್ಯರು,
ಮಂಗಳೂರು ವಿಶ್ವವಿದ್ಯಾಲಯ.