ಮಂಗಳೂರು: ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಬುಧವಾರ ಬ್ಯಾಂಕಿನ ಅಧ್ಯಕ್ಷರಾದ ಎ.ಲೋಕೇಶ್ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಪ್ರಧಾನ ಕಛೇರಿಯ ಸಭಾಂಗಣದಲ್ಲಿ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ಬ್ಯಾಂಕಿನ ಅಧ್ಯಕ್ಷರಾದ ಎ.ಲೋಕೇಶ್ ಭಂಡಾರಿ ಮಾತನಾಡಿ, ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ಗೆ ಪ್ರಸಕ್ತ ವರದಿ ಸಾಲ್ಲಿನ ರಾಜ್ಯದ ಅಪೆಕ್ಸ್ ಬ್ಯಾಂಕ್ ಪುರಸ್ಕಾರ, ಎಸ್ಸಿಡಿಸಿಸಿ ಬ್ಯಾಂಕ್ನ ಸಾಧನಾ ಪುರಸ್ಕಾರ ಮತ್ತು ಉತ್ತಮ ಆಡಳಿತಾತ್ಮಕ ಬ್ಯಾಂಕ್ ಪುರಸ್ಕಾರಗಳು ಸೇರಿ ಮೂರು ಪ್ರಮುಖ ಪ್ರಶಸ್ತಿಗಳು ಬಂದಿವೆ. ಇದು ಬ್ಯಾಂಕಿನ ಉತ್ತಮ ಆಡಳಿತಕ್ಕೆ ನಿದರ್ಶನವಾಗಿದೆ. ಬ್ಯಾಂಕ್ ವರದಿ ಸಾಲಿನಲ್ಲಿ ರೂ.1,178 ಕೋಟಿ ವ್ಯವಹಾರ ನಡೆಸಿ, ರೂ. 4.35 ಕೋಟಿ ಪಾಲು ಬಂಡವಾಳ ಹೊಂದಿದ್ದು, ರೂ. 232 ಕೋಟಿ ಠೇವಣಿ ಹೊಂದಿದ್ದು ಹಾಗೂ ಸಾಲ ರೂ.188 ಕೋಟಿ ನೀಡಿದೆ. ರೂ. 2,84,04,133.91 ಲಾಭ ಗಳಿಸಿದೆ ಎಂದು ಹೇಳಿ ಸದಸ್ಯರಿಗೆ ಶೇ.18 ಡಿವಿಡೆಂಡ್ ಘೋಷಿಸಿದರು.



ಬ್ಯಾಂಕಿನ ಹಿರಿಯ ಸದಸ್ಯರನ್ನು ಆಯ್ದು ಪುರಸ್ಕರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರೀತಮ್ ಪಿ ಪೂಜಾರಿ ಇವರು ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು. ಬ್ಯಾಂಕಿನ ಉಪಾಧ್ಯಕ್ಷ ಎಸ್.ಧನಂಜಯ ಬಂಗೇರ, ನಿರ್ದೇಶಕರಾದ ಪ್ರೇಮಾ ಸುಮಂತ್ ರಾವ್, ನೇಮಿರಾಜ್ ಶೆಟ್ಟಿ, ಶ್ರೀರಂಜಿನಿ, ಗಣೇಶ್ ಶೆಟ್ಟಿ, ಸೀತೇಶ್ ಕೊಂಡೆ, ಶರ್ಮಿಳಾ ಮೊದಲಾದವರು ಉಪಸ್ಥಿತರಿದ್ದರು. ನಿರ್ದೇಶಕರಾದ ಸುಮಂತ್ ರಾವ್ ವಂದಿಸಿದರು.


