Close Menu
    Top News

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    September 22, 2026

    ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    September 22, 2026

    ಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ

    September 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ
    News

    ಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ

    adminBy adminSeptember 22, 2026

    ಮಂಗಳೂರು: ಎಂ.ಸಿ.ಸಿ. ಬ್ಯಾಂಕ್ ಲಿ. 2025–26ನೇ ಸಾಲಿನಲ್ಲಿ ರೂ. 10.07 ಕೋಟಿ ನಿವ್ವಳ ಲಾಭ ದಾಖಲಿಸಿದ್ದು, ಬ್ಯಾಂಕಿನ 108ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರಿಗೆ 10% ಡಿವಿಡೆಂಡ್ ಘೋಷಿಸಲಾಯಿತು.

    https://chat.whatsapp.com/FCEnlTkAKCC0MGPhXtX4i4
    ಬ್ಯಾಂಕಿನ 108ನೇ ವಾರ್ಷಿಕ ಮಹಾಸಭೆ ಭಾನುವಾರ ಸಂತ ಅಲೋಶಿಯಸ್ ಪಿ.ಯು. ಕಾಲೇಜಿನ ಲೊಯೊಲಾ ಆಡಿಟೋರಿಯಂಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅನಿಲ್ ಲೋಬೊ, ಎಂಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಎಂ.ಪಿ. ನೊರೊನ್ಹ, ರೋಹನ್‌ ಕಾರ್ಪೊರೇಶನ್‌ ವ್ಯವಸ್ಥಾಪಕ ನಿರ್ದೇಶಕರಾದ ರೋಹನ್ ಮೊಂತೇರೊ, ಕಥೋಲಿಕ್ ಸಭಾ ಮಂಗಳೂರು ಅಧ್ಯಕ್ಷರಾದ ಸಂತೋಷ್ ಡಿಸೋಜ, ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ಕ್ಯಾಥೋಲಿಕ್ ಅಸೋಸಿಯಶನ್ ಆಫ್ ಸೌತ್ ಕೆನರಾ ಅಧ್ಯಕ್ಷರಾದ ರೋನಾಲ್ಡ್ ಗೋಮ್ಸ್ ಕಾರ್ಯಕ್ರ ಉದ್ಘಾಟಿಸಿದರು. ನಂತರ ಬ್ಯಾಂಕಿನ ಸ್ಥಾಪಕರಾದ ಪಿ.ಎಫ್. ಎಕ್ಸ್ ಸಲ್ಡಾನ್ಹಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.


    ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಮಾತನಾಡಿ, ಬ್ಯಾಂಕಿನ ಸದೃಢ ಹಣಕಾಸು ಪ್ರಗತಿಯನ್ನು ವಿವರಿಸಿ, ಬ್ಯಾಂಕು 2025–26ನೇ ಸಾಲಿನಲ್ಲಿ ರೂ. 10.07 ಕೋಟಿ ನಿವ್ವಳ ಲಾಭ ಗಳಿಸಿದ್ದು, ಠೇವಣಿಗಳು ರೂ. 872.88 ಕೋಟಿ ಇದ್ದು 24% ಬೆಳವಣಿಗೆ ಕಂಡಿದೆ. ಮುಂಗಡಗಳು 22% ಬೆಳವಣಿಗೆಯೊಂದಿಗೆ ರೂ. 652.06 ಕೋಟಿ, ಹಾಗೂ ಕಾರ್ಯನಿರತ ಬಂಡವಾಳ 22% ಬೆಳವಣಿಗೆಯೊಂದಿಗೆ ರೂ. 1,008 ಕೋಟಿ ರೂ. ಆಗಿದೆ. ಬ್ಯಾಂಕಿನ ಷೇರು ಬಂಡವಾಳ ರೂ. 34.08 ಕೋಟಿ ಇದ್ದು, ನಿವ್ವಳ NPA 1.26%, Provision Coverage Ratio 68.34%, Return on Assets (ROA) 1.00% ಹಾಗೂ 31 ಮಾರ್ಚ್ 2026ರಂತೆ CRAR 16.53%ರಷ್ಟಿದೆ. ಬ್ಯಾಂಕಿನ ಒಟ್ಟು ವ್ಯವಹಾರವು ರೂ. 1525 ಕೋಟಿಯನ್ನು ಮೀರಿದೆ ಎಂದರು. ಸದಸ್ಯರಿಗೆ ಶೇಕಡಾ 10 ಡಿವಿಡೆಂಡ್ ಘೋಷಿಸಲಾಯಿತು. ಲಾಭ ವಿಂಗಡನೆ ಮಾಡಿ ಸಹಕಾರ ಶಿಕ್ಷಣ ನಿಧಿಗೆ ರೂ. 22.66 ಲಕ್ಷ ಕಾದಿರಿಸಲಾಯಿತು.


    2018ನೇ ಸಾಲಿನ ನಿರ್ದೇಶಕರ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಸ್ಮರಿಸಿದ ಅಧ್ಯಕ್ಷರು, ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗಿದ್ದು, ಕಳೆದ ಎಂಟು ವರ್ಷಗಳಲ್ಲಿ ಬ್ಯಾಂಕ್ ಗಮನಾರ್ಹ ಪ್ರಗತಿ ಸಾಧಿಸಿದೆ. ಬ್ಯಾಂಕಿನ ಪುನರುಜ್ಜೀವನಕ್ಕಾಗಿ ಆಡಳಿತ ಮಂಡಳಿಯ ಅಚಲ ಸಂಕಲ್ಪ ಮತ್ತು ಸತತ ಪರಿಶ್ರಮ, ಸದಸ್ಯರು ಹಾಗೂ ಸಿಬ್ಬಂದಿಯ ನಿರಂತರ ಬೆಂಬಲವೇ ಪ್ರಮುಖ ಕಾರಣವಾಗಿದೆ. ಬ್ಯಾಂಕ್ “Double-Engine” ಆಡಳಿತ ವ್ಯವಸ್ಥೆಯಡಿ, Reserve Bank of India ಮತ್ತು State Co-operative Departmentಗಳ ನಿಯಂತ್ರಣ ಹಾಗೂ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಸಿಬ್ಬಂದಿಗೆ ಅಗತ್ಯ ತರಬೇತಿ ಹಾಗೂ ಕಾರ್ಯನಿರ್ವಹಣೆಯಲ್ಲಿ ವಿವಿಧ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ ಎಂದರು.ವಿಸ್ತರಣಾ ಯೋಜನೆಯಡಿ ಮುಂದಿನ ವಾರ್ಷಿಕ ಮಹಾಸಭೆಯೊಳಗೆ 25 ಶಾಖೆಗಳು ಮತ್ತು 20 ಎಟಿಎಂಗಳನ್ನು ಹೊಂದುವ ಗುರಿಯನ್ನು ತಿಳಿಸಿದ ಅನಿಲ್‌ ಲೋಬೊ ಅವರು, 24ನೇ ಶಾಖೆಯನ್ನು ಪಡೀಲ್‌ನಲ್ಲಿ ಹಾಗೂ 25ನೇ ಶಾಖೆಯನ್ನು ಕದ್ರಿ ಅಥವಾ ಬಿಜೈನಲ್ಲಿ 2026–27ನೇ ಹಣಕಾಸು ವರ್ಷದ ಅಂತ್ಯದೊಳಗೆ ಸ್ಥಾಪಿಸಲಾಗುವುದು ಎಂದರು.
    2025–26ನೇ ಸಾಲಿನ ಲೆಕ್ಕಪರಿಶೋಧಿತ ಹಣಕಾಸು ಹೇಳಿಕೆಗಳು, ಲೆಕ್ಕಪರಿಶೋಧನಾ ವರದಿ ಮತ್ತು ಅನುಸರಣೆ ವರದಿ, 2026–27ನೇ ಸಾಲಿನ ಕಾರ್ಯಕ್ರಮಗಳ ರೂಪುರೇಷೆ ಮತ್ತು ಬಜೆಟ್, ಹಾಗೂ ಬೈಲಾ ತಿದ್ದುಪಡಿಗಳ ಪ್ರಸ್ತಾವನೆಗಳನ್ನು ವಾರ್ಷಿಕ ಮಹಾಸಭೆಯ ಮುಂದೆ ಮಂಡಿಸಿ ಸದಸ್ಯರ ಅನುಮೋದನೆ ಪಡೆಯಲಾಯಿತು. ಸದಸ್ಯರು ಮುಂಚಿತವಾಗಿ ಲಿಖಿತವಾಗಿ ಕೇಳಿದ ಪ್ರಶ್ನೆಗಳಿಗೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಸುನಿಲ್ ಮಿನೇಜಸ್ ಉತ್ತರಿಸಿದರು. ಡಾ| ಜೆರಾಲ್ಡ್ ಪಿಂಟೊ ಅವರನ್ನು Raknno Konkani Weekly ವತಿಯಿಂದ “Best Author of the Year” ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ, ಬ್ಯಾಂಕಿನ ಅಧ್ಯಕ್ಷರು ಸನ್ಮಾನಿಸಿದರು. ಪ್ರಸಿದ್ಧ ನೃತ್ಯ ಕಲಾವಿದೆ ಹಾಗೂ Golden Book of World Records ವತಿಯಿಂದ ಮಾನ್ಯತೆ ಪಡೆದಿರುವ ರೆಮೋನಾ ಪಿರೇರಾ ಅವರು ನೃತ್ಯ ಪ್ರದರ್ಶನ ನೀಡಿದರು.
    ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರಾದ ಆಂಡ್ರ್ಯೂ ಡಿಸೋಜ, ಜೋಸೆಫ್ ಎಂ. ಅನಿಲ್ ಪತ್ರಾವೊ, ಡಾ.ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜ, ಎಲ್ರಾಯ್ ಕಿರಣ್ ಕ್ರಾಸ್ಟೊ, ರೋಶನ್ ಡಿಸೋಜ, ಹೆರಾಲ್ಡ್ ಮೊಂತೆರೊ, ಜೆ.ಪಿ. ರೊಡ್ರಿಗಸ್, ವಿನ್ಸೆಂಟ್ ಲಸ್ರಾದೊ, ಮೆಲ್ವಿನ್ ವಾಸ್, ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೊ ಹಾಗೂ ಸುಶಾಂತ್ ಸಲ್ಡಾನ್ಹಾ ಮತ್ತು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.
    ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಸುನಿಲ್ ಮಿನೇಜಸ್ ಸ್ವಾಗತಿಸಿದರು. ಮಾರ್ಗನ್ಸ್‌ಗೇಟ್‌ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಡೆರಿಲ್ ಲಸ್ರಾದೊ ಕಾರ್ಯಕ್ರಮ ನಿರೂಪಿಸಿದರು.

    “Double-Engine” Anil Lobo Annual General Meeting Co Operative ministry Cooperative Department Cooperative Registrar MCC BANK Rohan Monteiro Sunil Menezes
    Previous Articleಶ್ರೀ ವೆಂಕಟರಮಣ ಸ್ವಾಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಕಟಪಾಡಿ ವಾರ್ಷಿಕ ಮಹಾಸಭೆ
    Next Article ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    Related Posts

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    September 22, 2026

    ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    September 22, 2026

    ಶ್ರೀ ವೆಂಕಟರಮಣ ಸ್ವಾಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಕಟಪಾಡಿ ವಾರ್ಷಿಕ ಮಹಾಸಭೆ

    September 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    September 22, 2026

    ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    September 22, 2026

    ಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ

    September 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.