ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಂಜನ್ ಜಿ ಗೌಡ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
https://chat.whatsapp.com/FCEnlTkAKCC0MGPhXtX4i4
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಂಜನ್ ಜಿ ಗೌಡ ಮಾತನಾಡಿ, ನಮ್ಮ ಸೌಹಾರ್ದ ಸಹಕಾರಿಯು ಏಳು ವರ್ಷಗಳನ್ನು ಪೂರೈಸಿ ಯಶಸ್ವಿ ಎಂಟನೇ ವರ್ಷಕ್ಕೆ ಪದಾರ್ಪಣೆಗೊಂಡಿದೆ. ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 210.20 ಕೋಟಿ ವ್ಯವಹಾರ ನಡೆಸಿ, ರೂ.73.61 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಕೆ.ಗಂಗಾಧರ ಗೌಡ, ಎನ್. ಲಕ್ಷ್ಮಣ ಗೌಡ, ಬಾಲಕೃಷ್ಣ ಗೌಡ ಕೇರಿಮಾರು, ಕೆ.ಜಯಂತ್ ಗೌಡ ಗುರಿಪಳ್ಳ, ಸುಂದರ ಗೌಡ, ಬಿ.ಕೃಷ್ಣಪ್ಪ ಗೌಡ ಬೇಂಗಳ, ಧರ್ಮರಾಜ ಗೌಡ, ಜಯಂತ್ ಗೌಡ ಓಣಿಯಾಲು, ಭರತ್ ಕುಮಾರ್ ಗೌಡ ಬಂಗಾಡಿ, ಕೆ.ಸಂಜೀವ ಗೌಡ ಪಾಂಚಜನ್ಯ, ಸರೋಜಿನಿ ವಿಜಯ ಕುಮಾರ್ ಗೌಡ, ಚೇತನಾ ಚಂದ್ರಶೇಖರ್ ಗೌಡ ಉಪಸ್ಥಿತರಿದ್ದರು.
2025-26ನೇ ಸಾಲಿನ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಸಿಬ್ಬಂದಿ ವರ್ಗದವರಾದ ನಿತಿನ್ ಗೌಡ ಸುರುಳಿ, ದೀಕ್ಷಿತ್ ಗೌಡ ಕೆಳಗಿನ ಕಲ್ಲಾಜೆ, ರೂಪಲತಾ ಗೌಡ ಶಿಬಾಜೆ, ಭವ್ಯ ಗೌಡ, ಶ್ರೀನಾಥ್ ಗೌಡ ಪಟ್ರಮೆ, ಸುಧಾಕರ ಗೌಡ ಹಾಲೆದಡಿ, ಜಿತೇಶ್ ಗೌಡ ಅಡ್ಯಾಡಿ, ಅಶ್ವಿತಾ ಕುಕ್ಕಿಮಾರು, ನಿಕಿಲಾ, ಮನ್ನಡ್ಕ, ಪುಣ್ಯ ಗುಂಡಿಗದ್ದ, ನಿರೀಕ್ಷಾ ರಂಜಾಳ, ಗುರುಪ್ರಸಾದ್ ಅರಳಿ ಸಹಕರಿಸಿದರು. ಸಂಘದ ಉಪಾಧ್ಯಕ್ಷ ಶಿವಕಾಂತ ಗೌಡ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ವರದಿ ಮಂಡಿಸಿದರು. ನಿರ್ದೇಶಕ ದಾಮೋದರ ಗೌಡ ಸುರುಳಿ ವಂದಿಸಿದರು.


