ಮಂಗಳೂರು: ಇಲ್ಲಿನ ಸೈಂಟ್ ಅಲ್ಫೋನ್ಸಾ ಸೌಹಾರ್ದ ಸಹಕಾರಿ ಸಂಘದ ಮೂರನೇ ವಾರ್ಷಿಕ ಮಹಾಸಭೆ ಸೈಂಟ್ ಅಲ್ಫೋನ್ಸಾ ಚರ್ಚ್ ಹಾಲ್‌ನಲ್ಲಿ ಭಾನುವಾರ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ಸಹಕಾರಿ ಸಂಘದ ಮಾರ್ಗದರ್ಶಕರಾದ ರೆ.ಫಾದರ್ ಅಗಸ್ಟಿನ್, ಸಂಘದ ಅಧ್ಯಕ್ಷರಾದ ಮನೋಜ್ ಪಿ.ವಿ ಹಾಗೂ ನಿರ್ದೇಶಕರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಹಕಾರಿಯ ನಿರ್ದೇಶಕ ಜೇಮ್ಸ್ ಮುಂಡಟ್ಟು ವರ್ಕೀರ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಯಾನಂದ ಟಿ ಬಂಗೇರ ವಾರ್ಷಿಕ ಸಭೆಯ ಸೂಚನಾ ಪತ್ರ ಮಂಡಿಸಿದರು. ಸಿಬ್ಬಂದಿ ವೇದಾವತಿ ಹಿಂದಿನ ಸಭೆಯ ನಡಾವಳಿಗಳನ್ನು ಓದಿ ಸಭೆಗೆ ಮಂಡಿಸಿದರು. ನಿರ್ದೇಶಕರಾದ ಜೋಯ್ ವರ್ಗೀಸ್ 2025-26ನೇ ಸಾಲಿನ ಆಡಳಿತ ಮಂಡಳಿಯ ವರದಿ ಮಂಡಿಸಿದರು. ನಿರ್ದೇಶಕರಾದ ಜಾರ್ಜ್ ಜೋಸೆಫ್ ಕೆ 2025-26ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಹಾಗೂ ಪರಿಶೋಧಿತ ಲೆಕ್ಕ ಪತ್ರವನ್ನು ಮಂಡಿಸಿದರು.
ಸಹಕಾರಿಯ ಅಧ್ಯಕ್ಷರಾದ ಮನೋಜ್ ಪಿ.ವಿ ಆರ್ಥಿಕ ವರ್ಷ 2025-26ನೇ ಸಾಲಿನಲ್ಲಿ ಮೊದಲ ಬಾರಿ ರೂ.2,39,000 ಲಾಭ ಬಂದಿದ್ದು, ಈ ಲಾಭದಲ್ಲಿ 3% ನಂತೆ ಡಿವಿಡೆಂಡ್ ಘೋಷಿಸಿದರು. ರೆ. ಫಾದರ್ ಅಗಸ್ಟಿನ್‌ರವರು ಆಶೀರ್ವಚನ ನೀಡಿದರು. ಆನ್ರಿನ್ ಪ್ರಾರ್ಥಿಸಿದರು. ಅನನ್ಯ ಪಿ ಅಗಸ್ಟಿನ್ ಕಾರ್ಯಕ್ರಮ ನಿರೂಪಿಸಿದರು. ಸಹಕಾರಿಯ ನಿರ್ದೇಶಕರಾದ ಮನೋಜ್ ಥೋಮಸ್ ವಂದಿಸಿದರು.


