Close Menu
    Top News

    ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ₹451.40 ಕೋಟಿ ವ್ಯವಹಾರ, ₹1.91 ಕೋಟಿ ಲಾಭ, ಶೇ.15 ಡಿವಿಡೆಂಡ್ ಘೋಷಣೆ

    August 19, 2026

    ಗೋಕಾಕದ ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ರಜತ ಮಹೋತ್ಸವ ಸಂಭ್ರಮ

    August 19, 2026

    ಶ್ರೀ ಗುರುಶಕ್ತಿ ಸೌಹಾರ್ದ ಕೋ-ಆಪರೇಟಿವ್ 13.72 ಲಕ್ಷ ರೂ. ಲಾಭ, ಸದಸ್ಯರಿಗೆ ಶೇ.10 ಡಿವಿಡೆಂಡ್

    August 19, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀ ಗುರುಶಕ್ತಿ ಸೌಹಾರ್ದ ಕೋ-ಆಪರೇಟಿವ್ 13.72 ಲಕ್ಷ ರೂ. ಲಾಭ, ಸದಸ್ಯರಿಗೆ ಶೇ.10 ಡಿವಿಡೆಂಡ್
    News

    ಶ್ರೀ ಗುರುಶಕ್ತಿ ಸೌಹಾರ್ದ ಕೋ-ಆಪರೇಟಿವ್ 13.72 ಲಕ್ಷ ರೂ. ಲಾಭ, ಸದಸ್ಯರಿಗೆ ಶೇ.10 ಡಿವಿಡೆಂಡ್

    adminBy adminAugust 19, 2026

    ಕಾವೂರು: ಶ್ರೀ ಗುರುಶಕ್ತಿ ಸೌಹಾರ್ದ ಕೋ-ಆಪರೇಟಿವ್ ನಿ., ಕಾವೂರು ಇದರ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ಕಾವೂರು ವಿಲಾಶ್ರೀ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ಸಹಕಾರಿಯ ಸದಸ್ಯರಾದ ಪುಷ್ಪರಾಜ್ ಮೊಯ್ಲಿ, ರಮೇಶ್, ಕೃಷ್ಣ ಎನ್. ಪೂಜಾರಿ, ರೇವತಿ ರವಿಚಂದ್ರ , ಬಿ.ವಿಜಯ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಮೈಸೂರು ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ, ಸಹಕಾರಿಯ ಲೆಕ್ಕಪರಿಶೋಧಕ ಸಿ.ಎ. ಶ್ರವಣ್ ಕುಮಾರ್ ಹಾಗೂ ಸಹಕಾರಿಯ ನಿರ್ದೇಶಕರು ದೀಪ ಬೆಳಗಿಸಿ ಉದ್ಘಾಟಿಸಿದರು.
    ಸಹಕಾರಿಯ ಅಧ್ಯಕ್ಷ ಚಂದ್ರಶೇಖರ್ ಕುಮಾರ್ ಮಾತನಾಡಿ, “2025-26ನೇ ಸಾಲಿನಲ್ಲಿ ಸಹಕಾರಿಯು 13.72 ಲಕ್ಷ ರೂ. ಲಾಭಾಂಶ ಗಳಿಸಿದೆ. ಈ ಬಾರಿಯೂ ಆಡಿಟ್ ವರ್ಗೀಕರಣದಲ್ಲಿ ‘ಎ’ ದರ್ಜೆ ಸ್ಥಾನಮಾನ ದೊರಕಿರುತ್ತದೆ ಎಂದು ಹೇಳಿದರು.


    ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಿಸಲಾಯಿತು. ಪಿಯುಸಿ ಮತ್ತು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸದಸ್ಯರ ಮಕ್ಕಳನ್ನು ಸಹಕಾರಿಯ ವತಿಯಿಂದ ಗೌರವಿಸಲಾಯಿತು. ಎಂ.ಕಾಂ (Finance and Analytics) ನಲ್ಲಿ ಪ್ರಥಮ ರ್‍ಯಾಂಕ್ ಪಡೆದು ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ಸಹಕಾರಿಯ ಸದಸ್ಯರಾದ ಅರುಣ್ ಕುಮಾರ್ ಇವರ ಪುತ್ರಿ ಅನನ್ಯಾ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸಹಕಾರಿಯ ಉಪಾಧ್ಯಕ್ಷರಾದ ಸಚ್ಚಿದಾನಂದ ಪೂಜಾರಿ, ನಿರ್ದೇಶಕರಾದ ಪುರುಷೋತ್ತಮ ಎನ್. ಪೂಜಾರಿ, ಸದಾಶಿವ ಪೂಜಾರಿ, ಕಿಶೋರ್ ಸುವರ್ಣ, ಹೇಮಚಂದ್ರ ಎಚ್, ದಿವಾಕರ್, ಸದಾಶಿವ, ಪಿ.ಪೂರ್ಣಿಮಾ ಕೆ. ನಾಯ್ಕ್, ಭವ್ಯ, ಪುರುಷೋತ್ತಮ ಪೂಜಾರಿ ಬೋಳೂರು, ಧನ್ಯಲತಾ, ಜಿ. ಚಂದ್ರಶೇಖರ್ ಉಪಸ್ಥಿತರಿದ್ದರು.
    ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಚನಾ ಸಭೆಯ ಕಾರ್ಯಸೂಚಿ ನಿರ್ವಹಿಸಿಕೊಟ್ಟರು. ಸಹಕಾರಿಯ ನಿರ್ದೇಶಕರಾದ ಪುರುಷೋತ್ತಮ ಎನ್.ಪೂಜಾರಿ ಸ್ವಾಗತಿಸಿದರು. ಕಾವೂರು ಶಾಖಾ ವ್ಯವಸ್ಥಾಪಕರಾದ ದಿವ್ಯಾ ಆರ್. ಕಾರ್ಯಕ್ರಮ ನಿರೂಪಿಸಿದರು. ಸಹಕಾರಿಯ ಉಪಾಧ್ಯಕ್ಷ ಸಚ್ಚಿದಾನಂದ ಪೂಜಾರಿ ವಂದಿಸಿದರು. ಸಹಕಾರಿಯ ಸಿಬ್ಬಂದಿಗಳಾದ ಶ್ವೇತಾ ಸುವರ್ಣ, ಅಮಿಷಾ ಹಾಗೂ ಸುಪ್ರಿಯಾ ಉಪಸ್ಥಿತರಿದ್ದರು.

     

    Chandrashekhar Kumar Co Operative ministry Cooperative Cooperative Department Cooperative Registrar Kavooru Vilashri Hall Sahakara Spandana Shree Gurushakthi Souharda Cooperative Society Kavoor
    Previous Articleಬೆಂಗಳೂರಿನಲ್ಲಿ ಸಹಕಾರ ಭಾರತಿ–ಐಸಿಎಂಎಐ ಸಹಯೋಗದಲ್ಲಿ ಸಹಕಾರಿಗಳಿಗಾಗಿ ‘ಅಭ್ಯಾಸ ವರ್ಗ’
    Next Article ಗೋಕಾಕದ ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ರಜತ ಮಹೋತ್ಸವ ಸಂಭ್ರಮ

    Related Posts

    ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ₹451.40 ಕೋಟಿ ವ್ಯವಹಾರ, ₹1.91 ಕೋಟಿ ಲಾಭ, ಶೇ.15 ಡಿವಿಡೆಂಡ್ ಘೋಷಣೆ

    August 19, 2026

    ಗೋಕಾಕದ ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ರಜತ ಮಹೋತ್ಸವ ಸಂಭ್ರಮ

    August 19, 2026

    ಬೆಂಗಳೂರಿನಲ್ಲಿ ಸಹಕಾರ ಭಾರತಿ–ಐಸಿಎಂಎಐ ಸಹಯೋಗದಲ್ಲಿ ಸಹಕಾರಿಗಳಿಗಾಗಿ ‘ಅಭ್ಯಾಸ ವರ್ಗ’

    August 18, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ₹451.40 ಕೋಟಿ ವ್ಯವಹಾರ, ₹1.91 ಕೋಟಿ ಲಾಭ, ಶೇ.15 ಡಿವಿಡೆಂಡ್ ಘೋಷಣೆ

    August 19, 2026

    ಗೋಕಾಕದ ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ರಜತ ಮಹೋತ್ಸವ ಸಂಭ್ರಮ

    August 19, 2026

    ಶ್ರೀ ಗುರುಶಕ್ತಿ ಸೌಹಾರ್ದ ಕೋ-ಆಪರೇಟಿವ್ 13.72 ಲಕ್ಷ ರೂ. ಲಾಭ, ಸದಸ್ಯರಿಗೆ ಶೇ.10 ಡಿವಿಡೆಂಡ್

    August 19, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.