₹340.33 ಕೋಟಿ ವ್ಯವಹಾರ; ₹1.04 ಕೋಟಿ ನಿವ್ವಳ ಲಾಭ, ಶೇ.18 ಡಿವಿಡೆಂಡ್ ಘೋಷಣೆ
ಕಡಬ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಭಾನುವಾರ ಸಂಘದ ಪ್ರಧಾನ ಕಚೇರಿಯ ಶ್ರೀ ಬೈದಶ್ರೀ ಸಭಾಂಗಣದಲ್ಲಿ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘವು 1991ರಲ್ಲಿ ಪ್ರಾರಂಭಗೊಂಡಿದ್ದು, 2005ರಲ್ಲಿ 2 ಲಕ್ಷ ರೂ. ಮೂಲ ಬಂಡವಾಳದೊಂದಿಗೆ ಬ್ಯಾಂಕಿಂಗ್ ವ್ಯವಹಾರ ಆರಂಭಿಸಿತ್ತು. ಈಗ 50 ಕೋಟಿ ರೂ. ದುಡಿಯುವ ಬಂಡವಾಳದೊಂದಿಗೆ ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ. 2025-26ನೇ ಸಾಲಿನಲ್ಲಿ 340,33,10,514 ರೂ. ವಾರ್ಷಿಕ ವಹಿವಾಟು ನಡೆಸಿದ್ದು, 1,04,35,201 ರೂ. ನಿವ್ವಳ ಲಾಭ ಗಳಿಸಿದೆ. 98.75 ಶೇ. ಸಾಲ ವಸೂಲಾತಿ ಆಗಿದೆ. ಸದಸ್ಯರ ಸಹಕಾರದಿಂದ ಸಂಘವು ಪ್ರಗತಿಪಥದಲ್ಲಿ ಸಾಗುತ್ತಿದ್ದು, 1.04 ಕೋಟಿ ರೂ. ಲಾಭ ಗಳಿಸಿರುವುದು ಅತ್ಯುತ್ತಮ ಸಾಧನೆಯಾಗಿದೆ. ಲಾಭಾಂಶವನ್ನು ಬೈಲಾ ಪ್ರಕಾರ ವಿಲೇವಾರಿ ಮಾಡಲಾಗಿದ್ದು, ಸದಸ್ಯರಿಗೆ 18 ಶೇ. ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.
ಸಂಘವು ದ.ಕ. ಜಿಲ್ಲಾವ್ಯಾಪ್ತಿಯನ್ನು ಹೊಂದಿದ್ದು, ಆಲಂಕಾರಿನ ಬೈದಶ್ರೀ ಸಹಕಾರ ಸೌಧದಲ್ಲಿ ಪ್ರಧಾನ ಕಚೇರಿ, ಕಡಬ, ನೂಜಿಬಾಳ್ತಿಲ-ಕಲ್ಲುಗುಡ್ಡೆ, ನೆಟ್ಟಣ, ಕೊಯಿಲ ಮತ್ತು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬ್ಯಾಂಕಿಂಗ್ ವ್ಯವಹಾರದ ಶಾಖೆ ಹೊಂದಿದೆ.
ಸಂಘದಲ್ಲಿ ವರ್ಷಾಂತ್ಯಕ್ಕೆ ರೂ.69.54 ಲಕ್ಷ ಪಾಲು ಬಂಡವಾಳ, ರೂ.44.89 ಕೋಟಿ ಠೇವಣಿ, ರೂ.3.95 ಕೋಟಿ ವಿವಿಧ ನಿಧಿಗಳು ಹಾಗೂ ರೂ.41.57 ಕೋಟಿ ಸದಸ್ಯರ ಸಾಲ ಇರುತ್ತದೆ. ರೂ.9.19 ಕೋಟಿ ಹೂಡಿಕೆ ಇದೆ. ಲೆಕ್ಕಪರಿಶೋಧನೆಯಲ್ಲಿ ಸತತವಾಗಿ ಕಳೆದ 13 ವರ್ಷಗಳಿಂದ ‘ಎ’ ವರ್ಗೀಕರಣದಲ್ಲಿ ಗುರುತಿಸಿಕೊಂಡಿದೆ. ಎಲ್ಲಾ ಶಾಖೆಗಳಲ್ಲೂ ಉತ್ತಮ ವ್ಯವಹಾರ ನಡೆಯುತ್ತಿದ್ದು, ಕಲ್ಲುಗುಡ್ಡೆ ಮತ್ತು ನೆಟ್ಟಣ ಶಾಖೆಯಲ್ಲಿ ಶೇ.100 ಸಾಲ ವಸೂಲಾತಿ ಆಗಿರುತ್ತದೆ. ಸಂಘದಲ್ಲಿ 93 ಗುರುಶ್ರೀ ಸ್ವಸಹಾಯ ಸಂಘಗಳಿದ್ದು, 863 ಸದಸ್ಯರು ಸ್ವಸಹಾಯ ಸಂಘದಲ್ಲಿ ವ್ಯವಹರಿಸುತ್ತಿದ್ದಾರೆ ಎಂದು ಎನ್. ಮುತ್ತಪ್ಪ ಪೂಜಾರಿ ನೈಯ್ಯಲ್ಗ ಹೇಳಿದರು.

ಸಾಧಕ ಸದಸ್ಯರಿಗೆ ಸನ್ಮಾನ
ಸಂಘದ ಸದಸ್ಯರಾಗಿದ್ದು ಕಲಾಕ್ಷೇತ್ರದ ಸಾಧನೆಗಾಗಿ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ದಯಾನಂದ ಬಂಗೇರ ಅಗತ್ತಾಡಿ, ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಸಂಜನ್‌ಕುಮಾರ್ ಎಸ್., ದೀಪಿಕಾ ನೀರಕಣಿ, ಪುತ್ತೂರು ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಚುನಾಯಿತರಾದ ಸಂಘದ ನಿರ್ದೇಶಕ ಸಂತೋಷ್‌ಕುಮಾರ್ ಮತ್ರಾಡಿ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಚುನಾಯಿತರಾದ ಸಂಘದ ಕೊಯಿಲ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಅಶೋಕ್ ಕೊಯಿಲ, ಸಂಘದ ನಿರ್ದೇಶಕಿ ವಿಜಯ ಅಂಬಾ, ಸದಸ್ಯ ಉದಯ ಸಾಲ್ಯಾನ್ ಮಾಯಿಲ್ಗ ಅವರನ್ನು ಗೌರವಿಸಲಾಯಿತು.
ಗೌರವಾರ್ಪಣೆ
ಶೇ.100 ಸಾಲ ವಸೂಲಾತಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ನೆಟ್ಟಣ ಹಾಗೂ ಕಲ್ಲುಗುಡ್ಡೆ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಮೂರ್ತೆದಾರ ಸದಸ್ಯರಿಗೆ ಪ್ರೋತ್ಸಾಹಧನ, ಕಡ್ಡಾಯ ಠೇವಣಿ ವಿತರಣೆ ಮಾಡಲಾಯಿತು.
ಪ್ರತಿಭಾ ಪುರಸ್ಕಾರ
ಸಂಘದ ಕಾರ್ಯವ್ಯಾಪ್ತಿಯ ವಿದ್ಯಾಸಂಸ್ಥೆಗಳಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ, ಅರ್ಹ ಬಡ ಮಕ್ಕಳಿಗೆ ಹಾಗೂ ಸಂಘದ ಮೂರ್ತೆದಾರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗಿದ್ದು, ಒಟ್ಟು 2,36,800 ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಭೌತಿಕ್, ಪದವಿಪೂರ್ವ ಕಾಲೇಜಿನ ಹೊನ್ನಶ್ರೀ, ಕಡಬ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುರಕ್ಷಾ, ವಾಣಿಜ್ಯ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಅನುಶ್ರೀ ಉಡುಪ, ಆತೂರು ಆಯಿಷಾ ಪದವಿಪೂರ್ವ ಕಾಲೇಜಿನ ಫಾತಿಮಾ ಟಸ್ಕಾನ್, ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಪ್ರಣಾಮ್ ಮಿತ್ರ ಪಿ., ಆಯಿಷಾ ರಿಜಾಕೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.


ಸಂಘದ ಉಪಾಧ್ಯಕ್ಷ ಜನಾರ್ದನ ಪೂಜಾರಿ ಕದ್ರ, ನಿರ್ದೇಶಕರಾದ ಕೆ. ಜಯಕರ ಪೂಜಾರಿ ಕಲ್ಲೇರಿ, ಸಂತೋಷ್‌ಕುಮಾರ್ ಮತ್ರಾಡಿ, ಗಂಗಾರತ್ನ ವಸಂತ್ ಅಗತ್ತಾಡಿ, ಜಯಂತ ಪೂಜಾರಿ ನೆಕ್ಕಿಲಾಡಿ, ಆನಂದ ಪೂಜಾರಿ ಮಠದಬೈಲು, ಲಕ್ಷ್ಮೀಶ ಬಂಗೇರ ಪೆಲತ್ತೋಡಿ, ವಿಜಯ ಅಂಬಾ, ವಾಸಪ್ಪ ಪೂಜಾರಿ ಕೇಪುಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಕಾನೂನು ಸಲಹೆಗಾರ ಮನೋಹರ ಎಣ್ಣೆತ್ತೋಡಿ, ಸದಸ್ಯರಾದ ಜನಾರ್ದನ ಬಿ.ಎಲ್. ಆಲಂಕಾರು, ಅಶೋಕ್ ಕೊಯಿಲ, ಸಂಜೀವ ಪೂಜಾರಿ ಬಟ್ಟಡ್ಕ, ತಿಮ್ಮಪ್ಪ ಕರ್ಕೇರ, ಜಿನ್ನಪ್ಪ ಸಾಲ್ಯಾನ್ ಕಡಬ, ಸಂತೋಷ್‌ಕುಮಾರ್ ಬಿಳಿನೆಲೆ, ಜನಾರ್ದನ ಅಲೆಕ್ಕಾಡಿ, ಸತೀಶ್ ಪೂಜಾರಿ ಐತ್ತೂರು, ವಸಂತ ಪೂಜಾರಿ ಬದಿಬಾಗಿಲು, ಕುಸುಮಾಧರ ಎನ್ಶಾಜೆ, ನಾರಾಯಣ ಪೂಜಾರಿ ಕಡಬ, ಎಂ. ಸುಂದರ ಕರ್ಕೇರ, ಜಗನ್ನಾಥ ಪೂಜಾರಿ ಮುಕ್ಕೂರು, ಸೇಸಪ್ಪ ಪೂಜಾರಿ ನೆಕ್ಕಿಲಾಡಿ ಮತ್ತಿತರರು ವಿವಿಧ ಸಲಹೆ ಸೂಚನೆ ನೀಡಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಲಿಂಗಪ್ಪ ಪೂಜಾರಿ ನೈಯ್ಯಲ್ಗ ಅವರು ಮಹಾಸಭೆಯ ತಿಳುವಳಿಕೆ ಪತ್ರ, 2024-25ನೇ ಸಾಲಿನ ಮಹಾಸಭೆಯ ನಡವಳಿ, 2025-26ನೇ ಸಾಲಿನ ವರದಿ ಮಂಡಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೋಗೀಶ್‌ಕುಮಾರ್ ಅಗತ್ತಾಡಿ 2025-26ನೇ ಸಾಲಿನ ಲೆಕ್ಕಪರಿಶೋಧಿತ ಜಮಾ ಖರ್ಚು ತಖ್ತೆ, ಲಾಭ ನಷ್ಟದ ತಖ್ತೆ ಮತ್ತು ಆಸ್ತಿ ಜವಾಬ್ದಾರಿ ತಖ್ತೆ ಮಂಡಿಸಿದರು.
ಎನ್. ಮುತ್ತಪ್ಪ ಪೂಜಾರಿ ನೈಯ್ಯಲ್ಗ ಸ್ವಾಗತಿಸಿ, ಜನಾರ್ದನ ಪೂಜಾರಿ ಕದ್ರ ವಂದಿಸಿದರು. ಶಾಖಾ ವ್ಯವಸ್ಥಾಪಕ ಸುಂದರ ಪಲ್ಲತಡ್ಕ ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕರಾದ ರಂಜಿನಿ ಆರ್.ಕೆ., ಸಚಿನ್ ಎಸ್.ಸಿ., ರಕ್ಷಿತ್ ಎ., ಶರ್ಮಿಳಾ, ದೀಕ್ಷಿತ್ ಕೆ., ಸಿಬ್ಬಂದಿಗಳಾದ ಕೀರ್ತನ್‌ಕುಮಾರ್ ಎ., ಗೀತೇಶ್, ಅನಿಲ್‌ಕುಮಾರ್, ಮನೀಶ್ ವಿ., ಜಿತೇಶ್ ಕರ್ಕೇರ, ಮನೋಜ್ ಕೆ. ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳಾದ ಸ್ಥಾತಿ, ಚೈತನ್ಯ ಪ್ರಾರ್ಥಿಸಿದರು. ಪ್ರಗತಿ ಠೇವಣಿ ಸಂಗ್ರಾಹಕರಾದ ಎಸ್. ರಾಮಚಂದ್ರ ನೈಯ್ಯಲ್ಗ, ಧನಂಜಯ ನೈಯ್ಯಲ್ಗ, ಶರತ್‌ಕುಮಾರ್ ಬಿ.ಎಸ್., ಅಜಯ್‌ಕುಮಾರ್ ಕೆ.ಆರ್., ರೋಹಿಣಿ ಎಸ್. ವಾಲ್ವಾಜೆ, ತ್ರಿವೇಣಿ, ಚರಣ್ ವಿ.ಬಿ., ವಿನೀತಾ ಒ.ಡಿ., ಅನುಜಿತ್, ಶಶಿಧರ, ಯಶೋಧ, ಶಾಲಿನಿ ಎಸ್.ಕೆ. ಸಹಕರಿಸಿದರು.






