ಮಂಗಳೂರು: ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯು ಹೊರತಂದಿರುವ ಬರಹಗಾರ ಅರವಿಂದ ಚೊಕ್ಕಾಡಿಯವರು ರಚಿಸಿರುವ ಸಹಕಾರ ಪಿತಾಮಹ ದಿ.ಮೊಳಹಳ್ಳಿ ಶಿವರಾವ್ ಅವರ ಕುರಿತಾದ ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ ಎಂಬ ಆಕರ ಗ್ರಂಥವನ್ನು ಮಂಗಳವಾರ ಮಂಗಳೂರಿನ ಎಸ್ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.
https://chat.whatsapp.com/FCEnlTkAKCC0MGPhXtX4i4
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಜಂಟಿ ಆಶ್ರಯದಲ್ಲಿ ಆಯೋಜಿಸಿದ ದಿ.ಮೊಳಹಳ್ಳಿ ಶಿವರಾವ್ ಅವರ 146ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಈ ಆಕರ ಗ್ರಂಥವನ್ನು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಆಕರ ಗ್ರಂಥ ಬರೆದಿರುವ ಬರಹಗಾರ ಅರವಿಂದ ಚೊಕ್ಕಾಡಿ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಉಪಾಧ್ಯಕ್ಷ ನೀಲಯ ಎಂ ಅಗರಿ, ನಿರ್ದೇಶಕರಾದ ಡಾ.ಎಸ್ ಆರ್ ಹರೀಶ್ ಆಚಾರ್ಯ, ಸತೀಶ್ ಕೆ.ಕಾಶಿಪಟ್ಣ, ಎಸ್ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ, ಸಿಇಒ ಗೋಪಾಲಕೃಷ್ಣ ಭಟ್ ಮೊದಲಾದವರು ಹಾಜರಿದ್ದರು.
ಕರಾವಳಿ ಭಾಗದಲ್ಲಿ ಸಹಕಾರ ಚಳವಳಿಯನ್ನು ಪಸರಿಸಿ ಮಹಾನ್ ಚೇತನ ದಿ.ಮೊಳಹಳ್ಳಿ ಶಿವರಾಯರ ಕುರಿತಾದ ಪುಸ್ತಕವನ್ನು ಅವರು ಇದ್ದ ಊರಿನಲ್ಲಿ, ಸ್ಥಾಪಿಸಿದ ಸಹಕಾರ ಸಂಘಗಳ ಊರಿನಲ್ಲಿ ಸಂಶೋಧಿಸಿ ಅರವಿಂದ ಚೊಕ್ಕಾಡಿಯವರು ಈ ಪುಸ್ತಕ ಬರೆದಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಸಮಾಜಮುಖಿ ಚಿಂತನೆ ಹೊಂದಿರುವ ಪ್ರತಿಯೊಬ್ಬರಿಗೂ ಈ ಕೃತಿಯು ಮಾರ್ಗದರ್ಶಕ ಗ್ರಂಥವಾಗಿ ಮಾದರಿಯಾಗಿ ಮೂಡಿಬಂದಿದೆ. ಈ ಕೃತಿಯ ಬೆಲೆ 200 ರೂಪಾಯಿಗಳು. ಈ ಪುಸ್ತಕ ಬೇಕಿದ್ದವರು 9901319694 ಈ ಮೊಬೈಲ್ ನಂಬರ್ಗೆ ಮಾಹಿತಿ ನೀಡಿ ಪಡೆದುಕೊಳ್ಳಬಹುದು.


