Close Menu
    Top News

    ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಐದನೇ ಶಾಖೆ ಉಪ್ಪಿನಂಗಡಿಯಲ್ಲಿ ಜುಲೈ 4ರಂದು ಲೋಕಾರ್ಪಣೆ

    June 30, 2026

    ಕಥೊಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬ್ರಹ್ಮಾವರದ ಸಿಬ್ಬಂದಿ ತರಬೇತಿ ಕಾರ್ಯಾಗಾರ

    June 30, 2026

    ಜುಲೈ 4ರಂದು ಹೇರೂರಿನಲ್ಲಿ ವಿಶೇಷ ಉಪನ್ಯಾಸ, ಸಂವಾದ ಕಾರ್ಯಕ್ರಮ

    June 30, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಕಥೊಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬ್ರಹ್ಮಾವರದ ಸಿಬ್ಬಂದಿ ತರಬೇತಿ ಕಾರ್ಯಾಗಾರ
    News

    ಕಥೊಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬ್ರಹ್ಮಾವರದ ಸಿಬ್ಬಂದಿ ತರಬೇತಿ ಕಾರ್ಯಾಗಾರ

    adminBy adminJune 30, 2026

    ಬ್ರಹ್ಮಾವರ: ಇಲ್ಲಿನ ಕಥೊಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಿಬ್ಬಂದಿ ತರಬೇತಿ ಕಾರ್ಯಾಗಾರ ಇತ್ತೀಚೆಗೆ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಜರುಗಿತು.

    https://chat.whatsapp.com/FCEnlTkAKCC0MGPhXtX4i4
    ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿಯ ನ್ಯಾಯವಾದಿ ಲವೀನಾ ಫೆರ್ನಾಂಡಿಸ್‌, ಭೂ ಅಡಮಾನ ಸಾಲ ನೀಡುವಾಗ ಪರಿಶೀಲಿಸಬೇಕಾಗಿರುವ ಅವಶ್ಯವಾದ ಭೂ-ದಾಖಲೆಗಳು ಹಾಗೂ ಅನುಸರಿಸಬೇಕಾದ ಕ್ರಮಗಳು, ಗ್ರಾಹಕರ ಖಾಯಂ ವಾಸ್ತವ್ಯದ ವಿಳಾಸ ಖಚಿತಪಡಿಸುವಲ್ಲಿ ಪರಿಶೀಲಿಸಬೇಕಾದ ಇಲಾಖೆಗಳು ನೀಡಿರುವ ಗುರುತು ಚೀಟಿಗಳು, ಠೇವಣಿ ಸಂಗ್ರಹ ಮತ್ತು ಸಾಲ ನೀಡುವಾಗ ಗ್ರಾಹಕರ ಅರ್ಜಿಯಲ್ಲಿ ಕಾಣಿಸಿರುವ ಎಲ್ಲಾ ವಿಷಯಗಳ ಮಾಹಿತಿಯನ್ನು ಸಂಪೂರ್ಣವಾಗಿ ದಾಖಲೆಗಳೊಂದಿಗೆ ಭರ್ತಿ ಮಾಡುವ ಅವಶ್ಯಕತೆ, ಇನ್ನಿತರ ನಿಯಮಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಸಿಬ್ಬಂದಿಯವರ ಪ್ರಶ್ನೆಗಳಿಗೆ ಸಂಬಂಧಪಟ್ಟ ಕಾನೂನಿನ ವಿವರಣೆಯೊಂದಿಗೆ ಅವರು ಉತ್ತರಿಸಿದರು.
    ತರಬೇತಿ ಕಾರ್ಯಾಗಾರದ ಬಳಿಕ 2026-27ನೇ ಆರ್ಥಿಕ ವರ್ಷದ ಮೇ ತಿಂಗಳ ತನಕದ ವ್ಯವಹಾರದ ಬಗ್ಗೆ ವಿಮರ್ಶೆ ನಡೆಸಿ ಪ್ರಥಮ ತ್ರೈಮಾಸಿಕ ಅವಧಿಗೆ ಸಂಸ್ಥೆಯ ಗುರಿಗಳನ್ನು ಈಡೇರಿಸುವಲ್ಲಿ ಕಾರ್ಯಪ್ರವೃತ್ತರಾಗುವಂತೆ ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲಾಯಿತು.
    ಸಂಘದ ಅಧ್ಯಕ್ಷರಾದ ಜೆರಾಲ್ಡ್ ಎಂ.ಗೊನ್ಸಾಲ್ವಿಸ್‌ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಉಪಾಧ್ಯಕರಾದ ಜೋಸೆಫ್ ಸುವಾರಿಸ್, ನಿರ್ದೇಶಕರಾದ ವಲೇರಿಯನ್ ಮಿನೇಜಸ್, ಗಿಲ್ಬರ್ಟ್ ರೊಡ್ರಿಗಸ್, ಆಲ್ಬರ್ಟ್ ಮೊಂತೇರೊ, ಡೇನಿಯಲ್ ಮೊಂತೇರೊ, ಜೋಸೆಫ್ ಡಿ’ಆಲ್ಮೇಡಾ ಹಾಗೂ ಸಂಸ್ಥೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ್ ಫೆರ್ನಾಂಡಿಸ್ ಅತಿಥಿಗಳನ್ನು ಪರಿಚಯಿಸಿ, ಕೊಳಲಗಿರಿ ಶಾಖಾ ಪ್ರಬಂಧಕ ಫಿಲೋಮಿನಾ ಡಿಸೋಜ ವಂದಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Catholic Credit Co Operative Society Catholic Credit Co Operative Society Brahmavara Jerald M Gonsalvis Joseph Suvaris Lavina Fernandis Philomina Dsouza
    Previous Articleಜುಲೈ 4ರಂದು ಹೇರೂರಿನಲ್ಲಿ ವಿಶೇಷ ಉಪನ್ಯಾಸ, ಸಂವಾದ ಕಾರ್ಯಕ್ರಮ
    Next Article ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಐದನೇ ಶಾಖೆ ಉಪ್ಪಿನಂಗಡಿಯಲ್ಲಿ ಜುಲೈ 4ರಂದು ಲೋಕಾರ್ಪಣೆ

    Related Posts

    ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಐದನೇ ಶಾಖೆ ಉಪ್ಪಿನಂಗಡಿಯಲ್ಲಿ ಜುಲೈ 4ರಂದು ಲೋಕಾರ್ಪಣೆ

    June 30, 2026

    ಜುಲೈ 4ರಂದು ಹೇರೂರಿನಲ್ಲಿ ವಿಶೇಷ ಉಪನ್ಯಾಸ, ಸಂವಾದ ಕಾರ್ಯಕ್ರಮ

    June 30, 2026

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಡುಬಿದ್ರಿ ಶಾಖೆಯ ನಾಲ್ಕನೇ ವಾರ್ಷಿಕೋತ್ಸವ, ಗ್ರಾಹಕರ ಸಭೆ

    June 30, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಐದನೇ ಶಾಖೆ ಉಪ್ಪಿನಂಗಡಿಯಲ್ಲಿ ಜುಲೈ 4ರಂದು ಲೋಕಾರ್ಪಣೆ

    June 30, 2026

    ಕಥೊಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬ್ರಹ್ಮಾವರದ ಸಿಬ್ಬಂದಿ ತರಬೇತಿ ಕಾರ್ಯಾಗಾರ

    June 30, 2026

    ಜುಲೈ 4ರಂದು ಹೇರೂರಿನಲ್ಲಿ ವಿಶೇಷ ಉಪನ್ಯಾಸ, ಸಂವಾದ ಕಾರ್ಯಕ್ರಮ

    June 30, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.