ರೋಟರಿ ಕ್ಲಬ್ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ದೇವದಾಸ್ ರೈ ಸಲಹೆ
ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕ್ ಆಶ್ರಯದಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ಮಂಗಳವಾರ ವಿಶ್ವಕರ್ಮ ಬ್ಯಾಂಕಿನ ಬಿ.ಹರಿಶ್ಚಂದ್ರ ಆಚಾರ್ಯ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಉಚಿತ ಥೈರಾಯ್ಡ್ ಮತ್ತು ಹಿಮೋಗ್ಲೋಬಿನ್ ಪರೀಕ್ಷಾ ಶಿಬಿರ ಆಯೋಜಿಸಲಾಗಿತ್ತು.
https://chat.whatsapp.com/FCEnlTkAKCC0MGPhXtX4i4
ರೋಟರಿ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ದೇವದಾಸ್ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರೀಕ್ಷೆ ಮಾಡದೇ ಯಾವುದೇ ರೋಗವನ್ನು ಪತ್ತೆ ಮಾಡುವುದು ಸಾಧ್ಯವಿಲ್ಲ. ರೋಟರಿ ಕ್ಲಬ್‌ನಿಂದ ಸುಮಾರು 50,000 ಜನರ ಮಧುಮೇಹ ಪರೀಕ್ಷೆ ಮಾಡಲಾಗಿದೆ. ಇದರಿಂದ ಬಹಳಷ್ಟು ಜನರಿಗೆ ಉಪಯೋಗವಾಗಿದೆ. ಥೈರಾಯ್ಡ್ ರೋಗ ಪತ್ತೆಗಾಗಿ ಟಿಸಿಎಚ್ ಪರೀಕ್ಷೆ ಮಾಡಲಾಗುತ್ತಿದೆ. ಈ ಪರೀಕ್ಷೆಯ ವರದಿಯನ್ನು ಫ್ಯಾಮಿಲಿ ಡಾಕ್ಟರ್ ಬಳಿ ತೋರಿಸಿದರೆ ಏನಾದರೂ ಸಮಸ್ಯೆ ಇದ್ದರೆ ಆ ಬಗ್ಗೆ ವೈದ್ಯರು ಸಲಹೆ ನೀಡುತ್ತಾರೆ. ಇಂದು ಇಲ್ಲಿ ಆಯೋಜಿಸಿರುವ ಶಿಬಿರದ ಸದುಪಯೋಗವನ್ನು ವಿಶ್ವಕರ್ಮ ಬ್ಯಾಂಕಿನ ಸಿಬ್ಬಂದಿ, ಜನಸಾಮಾನ್ಯರು ಪಡೆದುಕೊಳ್ಳಬೇಕು. ಈ ಶಿಬಿರ ಆಯೋಜನೆಗೆ ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟ ಮಾತನಾಡಿ, ಇಲ್ಲಿ ಆಯೋಜಿಸಿರುವುದು ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ. ಎಲ್ಲರೂ ಆರೋಗ್ಯದಿಂದ ಇರಬೇಕು ಎಂಬುದು ರೋಟರಿಯ ಆಶಯ. ಒಳ್ಳೆಯ ವಿಷಯಗಳಿಗೆ ಒಟ್ಟಾಗೋಣ ಎಂಬುದು ಈ ಬಾರಿಯ ರೋಟರಿಯ ಧ್ಯೇಯವಾಕ್ಯ. ಅದಕ್ಕಾಗಿ ಎಲ್ಲರೂ ಒಳ್ಳೆಯ ವಿಷಯಗಳಿಗೆ ಒಟ್ಟಾಗೋಣ ಎಂದರು.
ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಜಗದೀಶ್ ಪಡುಪಣಂಬೂರ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಿಶ್ವಕರ್ಮ ಸಹಕಾರ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ವಸಂತ ಅಡ್ಯಂತಾಯ, ನಿರ್ದೇಶಕರಾದ ರೇಷ್ಮಾ, ಬಿಜು ಜಯ ಆಚಾರ್, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಸದಸ್ಯರಾದ ನಮ್ರತಾ ಶೆಟ್ಟಿ, ಜಗನ್ನಾಥ್ ಶೆಟ್ಟಿ, ಅಬಾಟ್ ಇಂಡಿಯಾ ಲಿಮಿಟೆಡ್‌ನ ಮೆಡಿಕಲ್ ಪ್ರತಿನಿಧಿ ರಕ್ಷಿತ್ ಮೊದಲಾದವರು ಹಾಜರಿದ್ದರು. ವಿಶ್ವಕರ್ಮ ಸಹಕಾರ ಬ್ಯಾಂಕಿನ ಸಾರ್ವಜನಿಕ ಸಂಪರ್ಕಾಧಿಕಾರಿ ಚೇತನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

