Close Menu
    Top News

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾಷಿಕ ಮಹಾಸಭೆ
    News

    ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾಷಿಕ ಮಹಾಸಭೆ

    adminBy adminJune 2, 2026

    162 ಕೋಟಿ ರೂ. ವ್ಯವಹಾರ, 63 ಲಕ್ಷ ರೂ. ಲಾಭ, ಶೇ.10 ಡಿವಿಡೆಂಡ್‌ ಘೋಷಣೆ

    ಸುಳ್ಯ: ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾಷಿಕ ಮಹಾಸಭೆಯು ಸಂಘದ ಅಧ್ಯಕ್ಷ ವಿಷ್ಣು ಭಟ್ ಮೋಲೆತೋಟ ಅವರ ಅಧ್ಯಕ್ಷತೆಯಲ್ಲಿ ಶ್ರೀ ಗೋಪಾಲಕೃಷ್ಣ ಗೌಡ ಕೇಪಳಕಜಿ ಸಭಾಭವನದಲ್ಲಿ ನಡೆಯಿತು.
    ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂತೋಷ್ ಎನ್. ಸ್ವಾಗತಿಸಿ, ವರದಿ ಮಂಡಿಸಿದರು. ಸಂಘದ ಅಧ್ಯಕ್ಷರಾದ ವಿಷ್ಣು ಭಟ್ ಮೋಲೆತೋಟ ಮಾತನಾಡಿ, ಈ ಬಾರಿ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 162.31 ಕೋಟಿ ರೂ. ವ್ಯವಹಾರ ನಡೆಸಿದೆ. 63,40,332 ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್‌ ನೀಡಲಾಗುತ್ತಿದೆ ಎಂದು ಘೋಷಿಸಿದರು.

    https://chat.whatsapp.com/FCEnlTkAKCC0MGPhXtX4i4
    ಸಂಘದ ಉಪಾಧ್ಯಕ್ಷ ದೇವಿಪ್ರಸಾದ್‌ ಸುಳ್ಳಿ, ನಿರ್ದೇಶಕರಾದ ಜಯಪ್ರಸಾದ್‌ ಸುಳ್ಳಿ, ಶುಭಕರ ನಾಯಕ್‌ ಬೊಳ್ಳಾಜೆ, ಸತ್ಯೇಶ್‌ ಕುಮಾರ್‌ ಚಂದ್ರೋಡಿ, ಉಮೇಶ್‌ ಪ್ರಭು ಕೆ., ಹರೀಶ್‌ ಸುಳ್ಳಿ, ಹರಿಪ್ರಸಾದ್‌ ಬಿ.ವಿ., ಕುಲದೀಪ್‌ ಎಚ್‌., ಚಂದ್ರಶೇಖರ್‌ ನಾಯಕ್‌, ಇಂದಿರಾ ಕೆ., ಸಂಧ್ಯಾ ಕೆ.ಎಲ್‌, ವೃತ್ತಿಪರ ನಿರ್ದೇಶಕ ಯತೀಶ್‌ ಬೊಳ್ಳಾಜೆ, ತೀರ್ಥಕುಮಾರ್‌ ಉಪಸ್ಥಿತರಿದ್ದರು.


    ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ರಕ್ಷಣ್ ಕೆ., ಸಿಂಧೂರ ಬಿ., ಬುಸ್ತಾನ, ಭವಿಷ್ಯ, ಯಶಿಕಾ ಬಿ., ಧನ್ವಿತ್ ಕುಮಾರ್ ಕೆ., ಲೇಖನ ಎಸ್.ವಿ. ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಯು.ಸಾಯಿಚರಣ್, ಸಾಯಿಚರಣ್ ಬಿ., ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕುಲಶ್ರೀ, ತರುಣ್ ಆ‌ರ್.ಗೌಡ, ನಿಶ್ಮಿತಾ ಎಸ್., ಮಿತಾಶ್ರೀ ಎಂ.ಎಂ. ಅವರನ್ನು ಗೌರವಿಸಲಾಯಿತು. ಹಿರಿಯ ಸದಸ್ಯರಾದ ನಾರಾಯಣ ವಿ.ನಾಯಕ್ ಸುಳ್ಳಿ, ಕಣ್ಣ ಪಾಟಾಳಿ ಇರಂತಕಜೆ, ವಿಷ್ಣು ಭಟ್ ವಲಿಕಜೆ, ರೇಜಪ್ಪ ಗೌಡ ಜಿ. ಗುಡ್ಡನಮನೆ, ಚನಿಯ ಕಜೆ ಅವರನ್ನು ಸನ್ಮಾನಿಸಲಾಯಿತು. ಯುವ ಕೃಷಿಕ ಶ್ರೇಯಸ್ ಸುಳ್ಳಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಧರ ಗೌಡ ಕೆರೆಮೂಲೆ, ಪಾಕತಜ್ಞರಾದ ರಾಮ ಭಟ್ ಸಿ., ಗಂಗಾಧರ ಐ. ಅವರನ್ನು ಗೌರವಿಸಲಾಯಿತು. ಸಂಘದಲ್ಲಿ ಉತ್ತಮ ವ್ಯವಹಾರ ನಡೆಸಿದ ನವೋದಯ ಸ್ವಸಹಾಯ ಸಂಘಗಳಾದ ಮಯೂರ ನವೋದಯ ಸ್ವಸಹಾಯ ಸಂಘ ಸುಳ್ಳಿ, ನಾರ್ಣಕಜೆ, ಪ್ರಿಯದರ್ಶಿನಿ ನವೋದಯ ಸ್ವಸಹಾಯ ಸಂಘ ಹರ್ಲಡ್ಕ, ಯಶಸ್ವಿನಿ ನವೋದಯ ಸ್ವಸಹಾಯ ಸಂಘ ಕಕ್ಕೆಬೆಟ್ಟು ಸಂಘಗಳನ್ನು ಗೌರವಿಸಲಾಯಿತು. ಪ್ರೇರಕಿ ದೇವಕಿ ಉಪಸ್ಥಿತರಿದ್ದರು.
    ಸಿಬ್ಬಂದಿ ನಿಶ್ಚಿತ್ ಕೇಪಳಕಜೆ ಮಹಾಸಭೆಯ ತಿಳುವಳಿಕೆ ಪತ್ರ ಓದಿದರು. ಹಿಂದಿನ ಸಭೆಯ ನಡಾವಳಿಯನ್ನು ಸಿಬ್ಬಂದಿ ಜೀವನ್ ವಾಚಿಸಿದರು. ಮುರಳೀಧರ ಪುನುಕುಟ್ಟಿ ಹಾಗೂ ಪ್ರಶಾಂತ್ ಸುಳ್ಳಿ ಕಾರ್ಯಕ್ರಮ ನಿರೂಪಿಸಿದರು. ಲತಾ ಹಾಗೂ ದೇವಕಿ, ಜೀವನ್, ಪ್ರಸನ್ನ ಸಹಕರಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Co Operative ministry Cooperative Cooperative Department Nelluru Kemraje Krushi Pattina Sahakara Sangha Shree Gopalakrishna Gowda Kepalakaje Vishnu Bhat Mulethota
    Previous Articleಆರೋಗ್ಯ ಕ್ಯಾಂಪ್‌ಗಳ ಸದುಪಯೋಗ
    Next Article ಪಟ್ಟಣ ಸಹಕಾರಿ ಬ್ಯಾಂಕುಗಳ ಮಾದರಿ ಉಪನಿಯಮಗಳ ಕರಡು ರಚನೆಗೆ ಐವರು ಸದಸ್ಯರ ಸಮಿತಿ ರಚಿಸಿದ ರಿಸರ್ವ್‌ ಬ್ಯಾಂಕ್‌

    Related Posts

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.