ಮಂಗಳೂರು: ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ಮಂಗಳೂರು ತಾಲೂಕಿನ 2026ನೇ ಸಾಲಿನ ಸರಕಾರಿ ಮತ್ತು ಅನುದಾನಿತ ಶಾಲೆಗಳ ಎಸ್ಸೆಸ್ಸೆಲ್ಸಿ (ಕನ್ನಡ ಮಾಧ್ಯಮ) ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲು ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಆಯ್ದ ಎಲ್ಲಾ ವಿದ್ಯಾರ್ಥಿಗಳಿಗೂ ಸಹಾಯಧನದೊಂದಿಗೆ ಪ್ರಶಂಸಾ ಪತ್ರವನ್ನೂ ನೀಡಿ ಗೌರವಿಸಲಾಗುತ್ತದೆ.
https://chat.whatsapp.com/FCEnlTkAKCC0MGPhXtX4i4
ನಿಬಂಧನೆಗಳು:
ವ್ಯಾಪ್ತಿ:
ಮಂಗಳೂರು ತಾಲೂಕು.
ಅರ್ಹತೆ:
2026ನೇ ಸಾಲಿನ ಸರಕಾರಿ ಕನ್ನಡ ಮಾಧ್ಯಮದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿಧ್ಯಾರ್ಥಿಗಳು.
2026ನೇ ಸಾಲಿನ ಸರಕಾರಿ ಅಥವಾ ಅನುದಾನಿತ ಪದವಿ ಪೂರ್ವ ಕಾಲೇಜಿನ (ಪಿಯುಸಿ) ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿಧ್ಯಾರ್ಥಿಗಳು.
ಅರ್ಜಿ ಹೇಗೆ – ಎಲ್ಲಿ ಸಲ್ಲಿಸಬೇಕು?:
ಅರ್ಜಿಯ ಜೊತೆಗೆ ವಿಧ್ಯಾರ್ಥಿಗಳು ಆಧಾರ್ ಕಾರ್ಡ್ ಪ್ರತಿ, ಪ್ರಾಂಶುಪಾಲರಿಂದ ದೃಢೀಕೃತ ಅಂತಿಮ ಪರೀಕ್ಷೆಯ ಅಂಕ ಪಟ್ಟಿ ಹಾಗೂ ಫೋಟೋದೊಂದಿಗೆ ಈ ಕೆಳಗೆ ನೀಡಿದ ವಿಳಾಸಕ್ಕೆ ಪೋಸ್ಟ್ ಮಾಡಬೇಕು.
ವಿಳಾಸ: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ,
ಮೊದಲನೆಯ ಮಹಡಿ, ವೆಂಕಟೇಶ ಭವನ್ ಬಿಲ್ಡಿಂಗ್, ಪಿ.ಎಂ.ರಾವ್ ರೋಡ್, ಹಂಪನಕಟ್ಟೆ,ಮಂಗಳೂರು.
ಅರ್ಜಿಗಳನ್ನು ಸಲ್ಲಿಸಲು ಅಂತಿಮ ದಿನಾಂಕ:
ಮೇ 15.
ಎಷ್ಟು ವಿದ್ಯಾರ್ಥಿಗಳಿಗೆ?:
ಹೆಚ್ಚು ಅಂಕಗಳನ್ನು ಗಳಿಸಿದ ಆಧಾರದಲ್ಲಿ ಒಟ್ಟು 100 ವಿಧ್ಯಾರ್ಥಿಗಳಿಗೆ ಮಾತ್ರ ಸಹಾಯಧನ.
ವಿಶೇಷ ಸೂಚನೆ: ಸೊಸೈಟಿಯ ಆಡಳಿತ ಮಂಡಳಿಯ ತೀರ್ಮಾನವೇ ಅಂತಿಮ.
ಪೂರ್ಣ ವಿವರಗಳುಳ್ಳ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಶ್ರೀಶಾ ಸೊಸೈಟಿ ಅಧ್ಯಕ್ಷರಾದ
ಎಂ. ಎಸ್ ಗುರುರಾಜ್ ತಿಳಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

