ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆಯ ತೃತೀಯ ವಾರ್ಷಿಕೋತ್ಸವ ಪ್ರಯುಕ್ತ ಏಪ್ರಿಲ್ 26ರಂದು ಭಾನುವಾರ 9.30ರಿಂದ ಮಧ್ಯಾಹ್ನ 12.30ರ ತನಕ ಉಚಿತ ವೈದ್ಯಕೀಯ ತಪಾಸಣೆ, ಕಣ್ಣಿನ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರವನ್ನು “ಉಚ್ಚಿಲಸ್ ಕಾಂಪ್ಲೆಕ್ಸ್”, ಸುಜಾತ ಜ್ಯುವೆಲ್ಲರಿ ಹತ್ತಿರ, ಕೆ.ಸಿ.ರೋಡ್ (ಶಾಖೆಯ ಆವರಣ) ಇಲ್ಲಿ ಆಯೋಜಿಸಲಾಗಿದೆ.
https://chat.whatsapp.com/FCEnlTkAKCC0MGPhXtX4i4
ಈ ವೈದ್ಯಕೀಯ ಶಿಬಿರದಲ್ಲಿ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮಂಗಳೂರು ಇದರ ನುರಿತ ವೈದ್ಯರ ತಂಡದಿಂದ ಉಚಿತ ದಂತ ತಪಾಸಣೆ ಮತ್ತು ಸಲಹೆ, ಹಲ್ಲುಗಳ ಶುಚಿತ್ವ, ಹುಳುಕು ಹಲ್ಲುಗಳನ್ನು ಭರ್ತಿ ಮಾಡುವುದು, ಅನಾರೋಗ್ಯಕರ ಹಲ್ಲುಗಳನ್ನು ಕೀಳಿಸುವುದು, ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಸಾಮಾನ್ಯ ವೈದ್ಯಕೀಯ ಸಮಾಲೋಚನೆ, ಬಿ.ಪಿ. ತಪಾಸಣೆ, ಮಧುಮೇಹ ತಪಾಸಣೆ, ಕಿವಿ ಮೂಗು ಮತ್ತು ಗಂಟಲು ತಪಾಸಣೆ, ಹೆಚ್ಚಿನ ಚಿಕಿತ್ಸೆಗೆ ಹಸಿರು ಕಾರ್ಡ್ ನೀಡುವುದು ಹಾಗೂ ಇತರ ವೈದ್ಯಕೀಯ ಸೇವೆಗಳು ಲಭ್ಯವಿರುತ್ತದೆ. ಅಗತ್ಯವುಳ್ಳವರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗುವುದು. ಈ ವೈದ್ಯಕೀಯ ಶಿಬಿರವನ್ನು ಎನ್.ಜಿ ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಶ್ರೀ ಕೃಷ್ಣ ಭಜನಾ ಮಂದಿರ ಕೆ.ಸಿ ರೋಡ್, ಕೃಷ್ಣನಗರ, ತಲಪಾಡಿ ಮತ್ತು ಶ್ರೀ ಲಕ್ಷ್ಮೀ ಶಾಮಿಯಾನ, ಪನೀರ್ ಬಾಳಿಕೆ ಇವರ ಸಹಕಾರದೊಂದಿಗೆ ಆಯೋಜಿಸಲಾಗಿದೆ. ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com


