ಮಂಗಳೂರು: ದೇಶಭಕ್ತಿ ಉದ್ದೀಪನಗೊಳಿಸುವ ಬಾರ್ಡರ್ -2 ಚಲನಚಿತ್ರವನ್ನು ಮಂಗಳೂರಿನ ಶ್ರೀಶಾ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಎಂ ಎಸ್ ಗುರುರಾಜ್ ತಿಳಿಸಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ನಮ್ಮ ಹೆಮ್ಮೆಯ ಸೈನಿಕರು ನಮ್ಮ ದೇಶದ ಗಡಿಗಳನ್ನು ಹಗಲಿರುಳು ಜೀವದ ಹಂಗು ತೊರೆದು ಕಾಯುತ್ತಿದ್ದಾರೆ. 1971ರಲ್ಲಿ ಬಾಂಗ್ಲಾದೇಶ ವಿಮೋಚನೆಯ ಸಂದರ್ಭದಲ್ಲಿ ಪಶ್ಚಿಮದ ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದ ಸೈನ್ಯ ಭಾರತದ ಒಳಗೆ ನುಗ್ಗಲು ಯತ್ನಿಸಿತ್ತು. ಅದನ್ನು ವೀರಾವೇಶದಿಂದ ಎದುರಿಸಿ, ಹಿಮ್ಮೆಟ್ಟಿಸಿ ಗಡಿಯನ್ನು ಒಂದಿಂಚೂ ಬಿಡದೆ ಕಾಪಾಡಿದ ನಮ್ಮ ಸೈನ್ಯದ ವೀರ ಗಾಥೆಯ ಚಿತ್ರಣವೇ *ಬಾರ್ಡರ್ 2* ಚಲನಚಿತ್ರ.
ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಈ ಚಲನಚಿತ್ರ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ.
ಇಂತಹ ಚಿತ್ರವನ್ನು ಸೊಸೈಟಿಯ ಹಿತೈಷಿಗಳು ವೀಕ್ಷಿಸಬೇಕೆಂಬುದು ಶ್ರೀಶಾ ಅಪೇಕ್ಷೆ – ನಿರೀಕ್ಷೆ. ಇದಕ್ಕಾಗಿ ಶ್ರೀಶಾ ಸೌಹಾರ್ದ ಸೊಸೈಟಿಯು ಈ “ಬಾರ್ಡರ್ 2” ಚಲನಚಿತ್ರ ಪ್ರದರ್ಶನವನ್ನು ಆಸಕ್ತರಿಗೆ ಉಚಿತವಾಗಿ ಫೆಬ್ರವರಿ 8ರ ಭಾನುವಾರ ಸಂಜೆ 4 ಗಂಟೆಗೆ ಭಾರತ್ ಮಾಲ್ ನಲ್ಲಿರುವ ಭಾರತ್ ಸಿನಿಮಾದ ಸ್ಕ್ರೀನ್ 3ರಲ್ಲಿ ಏರ್ಪಡಿಸಿದೆ.
ಆಸಕ್ತರು ಉಚಿತ ಟಿಕೆಟ್ ಗಾಗಿ ಈ ಕೆಳಕಂಡ ನಂಬರ್ ಗೆ ಸಂಪರ್ಕಿಸಬಹುದು.: 9845032598.
ಟಿಕೆಟ್ ಗಳ ಲಭ್ಯತೆ ಕಡಿಮೆಯಿರುವುದರಿಂದ ಮೊದಲು ಸಂಪರ್ಕಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

