ಪುತ್ತೂರು: ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ 2026-2031ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಎಸ್ ಆರ್ ಸತೀಶ್ಚಂದ್ರ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಳ್ಯ ನೆಲ್ಲೂರು ಕೆಮ್ರಾಜೆಯ ಉಮೇಶ್ ಪ್ರಭು ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಆಡಳಿತ ಮಂಡಳಿಯ ನಿರ್ದೇಶಕರುಗಳಾಗಿ ಸುಳ್ಯ ತಾಲೂಕು ಕಳಂಜ ಗ್ರಾಮದ ಚಂದ್ರಶೇಖರ ಭಟ್, ಮಂಗಳೂರು ತಾಲೂಕು ಉಲ್ಲಾಳದ ದಯಾನಂದ ನಾಯಕ್ ಕೆ, ಬಂಟ್ವಾಳ ತಾಲೂಕು ಪುಣಚ ಗ್ರಾಮದ ರವೀಶ ಪಿ, ಪುತ್ತೂರು ತಾಲೂಕು ಇರ್ದೆ ಗ್ರಾಮದ ರಾಜಗೋಪಾಲ ಬಿ, ಪುತ್ತೂರು ತಾಲೂಕು ನೆಹರು ನಗರದ ವಸಂತ ಶಂಕರ್, ಬೆಂಗಳೂರಿನ ಮಾಚೋಹಳ್ಳಿಯ ವೇದವ್ಯಾಸ ಕೆ, ಸುಳ್ಯ ತಾಲೂಕು ಸೋಣಂಗೇರಿಯ ಸಂಜೀವ ನಾಯಕ್, ಪುತ್ತೂರು ತಾಲೂಕು ನಿಡಳ್ಳಿ ಗ್ರಾಮದ ಕೆ ಹರೀಶ್ ಬೋರ್ಕರ್, ಪುತ್ತೂರಿನ ಆರ್ಯಾಪು ಗ್ರಾಮದ ದೇವಕಿ ಕೆ, ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ರಂಜಿತ ಆರ್ ಪ್ರಭು ಆಯ್ಕೆಯಾಗಿದ್ದಾರೆ.
ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿ ತ್ರಿವೇಣಿ ರಾವ್ ಹಾಗೂ ಸಹಾಯಕರಾಗಿ ನಾಗೇಂದ್ರ ಇವರು ಸಹಕರಿಸಿದರು.
ಸಹಕಾರಿಯು ಪ್ರಸ್ತುತ ರಾಜ್ಯಾದ್ಯಂತ 20 ಶಾಖೆಗಳನ್ನು ಹೊಂದಿದ್ದು ₹.403 ಕೋಟಿ ಠೇವಣಿ, ₹.380 ಕೋಟಿ ಸಾಲ ಹಾಗೂ 52,000ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿ ಸಹಕಾರಿಯು ಕರ್ನಾಟಕ ರಾಜ್ಯಾದ್ಯಂತ ಸೇವೆಗಳನ್ನು ನೀಡುತ್ತಿದೆ. ಸಹಕಾರಿಯು ಚಿನ್ನಾಭರಣ ಸಾಲ, ಗೃಹ ಸಾಲ, ನಿವೇಶನ ಆಧಾರ ಸಾಲ, ಭೂ ಅಡಮಾನ ಸಾಲ, ಸ್ಥಿರಾಸ್ತಿ ಖರೀದಿ ಸಾಲ, ವಾಹನ ಸಾಲ, ಬಿಲ್ಡರ್ ಸಾಲ, ಸಹಕಾರಿಯ ಸದಸ್ಯರಿಗೆ ಲಾಕರ್ ಸೌಲಭ್ಯ, ವಿಮಾ ಸೌಲಭ್ಯವನ್ನು ಒದಗಿಸುತ್ತಿದೆ. ಹಾಗೂ ಸಹಕಾರಿಯು ತನ್ನ ಪೂರಕ ಸಂಸ್ಥೆ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಸಾಮಾಜಿಕ ಸೇವಾಕಾರ್ಯಗಳನ್ನು ಮಾಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

