Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ 3.26 ಕೋಟಿ ರೂ. ಲಾಭ: ಶೇ. 25 ಡಿವಿಡೆಂಡ್
    News

    ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ 3.26 ಕೋಟಿ ರೂ. ಲಾಭ: ಶೇ. 25 ಡಿವಿಡೆಂಡ್

    adminBy adminSeptember 19, 2025

    ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ‘ಎ’ ಸ್ಥಾನ: ಸಂಘದ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್ ಮಾಹಿತಿ

    ಮೂಡುಬಿದಿರೆ: ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘವು 2024-25ನೇ ಸಾಲಿನಲ್ಲಿ 474 ಕೋಟಿ ರೂ. ವ್ಯವಹಾರ ದಾಖಲಿಸಿದ್ದು, 3.26 ಕೋಟಿ ರೂ. ಲಾಭ ಗಳಿಸಿದ್ದು ಸತತ ಏಳನೇ ವರ್ಷವೂ ಶೇ.25 ಲಾಭಾಂಶ ಘೋಷಿಸಲಾಗುತ್ತಿದೆ. ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ‘ಎ’ ಸ್ಥಾನ ಕಾಯ್ದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್ ತಿಳಿಸಿದ್ದಾರೆ.

    https://chat.whatsapp.com/JVAtKKe2M19AFO3W5629ZS?mode=ems_copy_t
    ಬೆಳುವಾಯಿ ಖಂಡಿಗ ಗ್ರೀನ್ಸ್ ಮಲ್ಟಿಪರ್ಪಸ್ ಹಾಲ್‌ನಲ್ಲಿ ಇತ್ತೀಚೆಗೆ ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ 2024-25ರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಳುವಾಯಿಯಲ್ಲಿ ಪ್ರಧಾನ ಕಚೇರಿ, ಕೆಸರುಗದ್ದೆ, ಮೂಡುಮಾರ್ನಾಡು, ದರೆಗುಡ್ಡೆ, ಪಡುಮಾರ್ನಾಡುಗಳಲ್ಲಿ ಶಾಖೆಗಳನ್ನು ಹೊಂದಿದೆ. 7,505 ಸದಸ್ಯ ಬಲ ಇದ್ದು, 108.29 ಕೋಟಿ ರೂ. ಠೇವಣಿ ಸಂಗ್ರಹ, 100.19 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಶೇ.98.65 ಸಾಲ ಮರುಪಾವತಿಯಾಗಿದೆ ಎಂದು ಭಾಸ್ಕರ ಎಸ್.ಕೋಟ್ಯಾನ್ ತಿಳಿಸಿದರು. ಮುಂದಿನ ಸಾಲಿನಲ್ಲಿ 120 ಕೋಟಿ ರೂ. ಠೇವಣಿ ಸಂಗ್ರಹ, 110 ಕೋಟಿ ರೂ. ಸಾಲ ವಿತರಣೆಯ ಗುರಿ ಹೊಂದಲಾಗಿದ್ದು 3.47 ಕೋಟಿ ರೂ. ಲಾಭ ಗಳಿಕೆಯ ಉದ್ದೇಶವಿದೆ ಎಂದರು.
    ಕೃಷಿಕರಿಗೆ ಸಮ್ಮಾನ:
    ಸಂಘದ ವ್ಯಾಪ್ತಿಯಲ್ಲಿ ಕೃಷಿಯಲ್ಲಿ ಸಾಧನೆ ತೋರುತ್ತಿರುವ ಕುಕ್ಕುಡೇಲು ಕೂಕ್ರ ನಾಯ್ಕ ನಡ್ಯೋಡಿಗುತ್ತು, ಅಜಿತ್ ಕುಮಾರ್ ಆಳ್ವ ದರೆಗುಡ್ಡೆ, ಕೊಟ್ರೊಟ್ಟು ಶೇಖರ ಪೂಜಾರಿ, ಕೆಲ್ಲಪುತ್ತಿಗೆ ಶೇಖರ ಭಂಡಾರಿ, ಅಮನೊಟ್ಟು ರತ್ನಾಕರ ಹೆಗ್ಡೆ, ಮೂಡುಮಾರ್ನಾಡು ಸುನೀತಾ ಅವರನ್ನು ಗೌರವಿಸಲಾಯಿತು.


    ಸಂಘದ ಉಪಾಧ್ಯಕ್ಷೆ ಉಷಾ ಡಿ. ಪೈ, ನಿರ್ದೇಶಕರಾದ ದಾಮೋದರ ಬಂಗೇರ, ಶಂಕರ ಶೆಟ್ಟಿ, ಶ್ರೀನಾಥ್ ಸುವರ್ಣ, ವಾಸುದೇವ ಉಪಾಧ್ಯಾಯ, ಶಿವರಾಮ ಹೆಗ್ಡೆ, ಅಶೋಕ್ ಶೆಟ್ಟಿ, ರಾಮ್ ಪ್ರಸಾದ್, ರಮಣಿ ಆಳ್ವ, ಸುರೇಶ್ ನಾಯ್ಕ್‌, ಪಾಂಡು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಸಂಜಯ್ ಅತಿಕಾರಿ ವೇದಿಕೆಯಲ್ಲಿ ಹಾಜರಿದ್ದರು.
    ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್ ಸ್ವಾಗತಿಸಿ, ಮಹಾಸಭೆಯ ನೋಟೀಸು, ವಾರ್ಷಿಕ ವರದಿ ಮಂಡಿಸಿದರು. ಲೆಕ್ಕಾಧಿಕಾರಿ ಪ್ರತಿಮಾ 2023-24ನೇ ಸಾಲಿನ ನಡಾವಳಿಕೆಗಳನ್ನು ಮಂಡಿಸಿದರು. ಶಾಖಾ ವ್ಯವಸ್ಥಾಪಕ ಉಮೇಶ್ ಕೋಟ್ಯಾನ್ ಲೆಕ್ಕಪರಿಶೋಧನಾ ವರದಿ, ಶಾಖಾ ವ್ಯವಸ್ಥಾಪಕ ಸಂತೋಷ್ ಶೆಟ್ಟಿ ಲಾಭ ವಿಂಗಡನೆಯ ವಿವರ ಮಂಡಿಸಿ ಬಜೆಟ್ ಮಂಡನೆ ಮಾಡಿದರು. ಸಿಎ ಬಾಲಕೃಷ್ಣ ಭಟ್ ಇವರನ್ನು 2025-26ನೇ ಸಾಲಿನ ಸನ್ನದು ಲೆಕ್ಕ ಪರಿಶೋಧಕರಾಗಿ ಆಯ್ಕೆ ಮಾಡಲಾಯಿತು. ಸನ್ಮಾನಿತ ರೈತ ಸದಸ್ಯರನ್ನು ಸಂತೋಷ್ ಶೆಟ್ಟಿ, ಜಗದೀಶ ನಾಯ್ಕ್‌, ದೀಕ್ಷಿತಾ ಪರಿಚಯಿಸಿದರು. ಸಂತೋಷ್ ಶೆಟ್ಟಿ ವಂದಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Beluvayi Sahakari Vyvasayika Sangha Bhaskar S Kotyan Kellaputtige Mudubidire Usha D Pai
    Previous Articleಸಪ್ತರ್ಷಿ ಸೌಹಾರ್ದ ಸಹಕಾರಿ ಸಂಘಕ್ಕೆ ಮೈಸೂರು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಮಹಾಸಭೆಯಲ್ಲಿ ಗೌರವಾರ್ಪಣೆ
    Next Article ಸಹಕಾರಿ ಸಂಘಗಳಿಂದ ಸ್ವಾಭಿಮಾನದ ಬದುಕು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.